ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಕೀಯಕ್ಕೆ ನಮಿತಾ, ತಮಿಳುನಾಡಿನಲ್ಲಿ ತನನನನ

By ಜೇಮ್ಸ್ ಮಾರ್ಟಿನ್
|
Google Oneindia Kannada News

'ಪ್ರತಿ ಚಿತ್ರದಲ್ಲೂ ಡಿಫೆರೆಂಟ್ ಪಾತ್ರ ಮಾಡ ಬಯಸುವ ನಮಿತಾಳಿಗೆ, ಒಂದೇ ರೀತಿ ಪಾತ್ರಗಳು ಸಿಗುತ್ತಿರುವುದು ಬೋರ್ ಆಗುವುದಕ್ಕೆ ಕಾರಣವಂತೆ. ಬರೀ ದುಡ್ಡಿಗೊಸ್ಕರ ಚಿತ್ರ ಮಾಡುವ ದರ್ದು ನನಗಿಲ್ಲ. ನನ್ನ ಅಭಿಮಾನಿಗಳು ನನ್ನಿಂದ ಒಳ್ಳೆ ಪಾತ್ರ ನಿರೀಕ್ಷಿಸುತ್ತಾರೆ' ಎಂದಿರುವ ದಕ್ಷಿಣ ಭಾರತ ಹಾಟ್ ತಾರೆ ನಮಿತಾಗೆ ಈಗ ಸಿನಿಮಾರಂಗಕ್ಕಿಂತ ಹೆಚ್ಚಿನ ಗ್ಲಾಮರ್ ಲೋಕ ಕಾಣಿಸಿದೆಯಂತೆ.

ಕಾಲಿವುಡ್ ನ ಗ್ಲಾಮರ್ ಗಿಂತ ಪಾಲಿಟಿಕ್ಸ್ ನ ರಂಗು ಆಕೆಯೆ ಇಷ್ಟವಾಗುತ್ತಿದೆಯಂತೆ. ಈ ಬಗ್ಗೆ ಸ್ವತಃ ನಮಿತಾಳೇ ಘೋಷಿಸಿದ್ದಾಳೆ. ಇದುವರೆವಿಗೂ ಗಾಸಿಪ್ ಸುದ್ದಿಯಾಗಿದ್ದನ್ನು ಖಚಿತ ಪಡಿಸಿರುವ ನಮಿತಾ ಸದ್ಯದಲ್ಲೇ ರಾಜಕೀಯ ಪ್ರವೇಶದ ಸುಳಿವು ನೀಡಿದ್ದಾಳೆ. ಅಂದ ಹಾಗೆ ನಮಿತಾಳನ್ನು ಮೊದಲಿಗೆ ಸೆಳೆದಿದ್ದು ತಮಿಳುನಾಡಿನ 'ಅಮ್ಮ' ಜಯಲಲಿತಾ. ಆದರೆ, ಈಗ ಯಾವ ಪಕ್ಷ ಸೇರುತ್ತಾಳೆ ಎಂಬುದರ ಬಗ್ಗೆ ಸುದ್ದಿ ಸಿಕ್ಕಿಲ್ಲ.[ನಮಿತಾ ಜನ್ಮ, ನಕ್ಷತ್ರ, ಜಾತಕ, ಕುಂಡಲಿ]

ಸುಮಾರು ಮೂರು ವರ್ಷಗಳಿಂದ ಹಾವಿಗಿಂತ ವೇಗವಾಗಿ ಹರಿದಾಡುತ್ತಿದ್ದ ಸುದ್ದಿ ಈಗ ಹೊಟ್ಟೆ ತುಂಬಿದ ಹೆಬ್ಬಾವಿನಂತೆ ಸ್ತಬ್ದವಾಗಿದ್ದು, ಸಿನಿರಸಿಕರ ಆರಾಧ್ಯ ದೈವ ನಮಿತಾ ರಾಜಕೀಯ ಪ್ರವೇಶಕ್ಕೆ ರೆಡ್ ಕಾರ್ಪೆಟ್ ಸಿದ್ಧವಾಗುತ್ತಿದೆ. ಆದರೆ, ಯಾವ ಪಕ್ಷಕ್ಕೆ ನಮಿತಾ ಸೇರುತ್ತಾಳೆ, ರಾಜಕೀಯ ಎಂಟ್ರಿ ಏಕೆ? ಅಭಿಮಾನಿಗಳಿಗೆ ನಮಿತಾ ಹೇಳಿದ್ದೇನು? ಮುಂದೆ ಓದಿ...

ಯಾವ ಪಕ್ಷಕ್ಕೆ ಬಲಗಾಲಿಟ್ಟು ಪ್ರವೇಶ

ಯಾವ ಪಕ್ಷಕ್ಕೆ ಬಲಗಾಲಿಟ್ಟು ಪ್ರವೇಶ

ನಮಿತಾ ಯಾವ ಪಕ್ಷ ಸೇರುತ್ತಾರೆ ಎಂಬುದರ ಗುಟ್ಟು ಇನ್ನೂ ಬಹಿರಂಗವಾಗಿಲ್ಲ. ಈ ಬಗ್ಗೆ ಸಣ್ಣ ಸುಳಿವು ನೀಡಿರುವ ನಮಿತಾ, ಮೂರು ಪಕ್ಷಗಳಿಂದ ನನಗೆ ಆಹ್ವಾನ ಬಂದಿದೆ. ಆದರೆ, ನಾನು ಯಾವುದನ್ನೂ ಇನ್ನೂ ಒಪ್ಪಿಕೊಂಡಿಲ್ಲ. ಈ ಬಗ್ಗೆ ನಿರ್ಧಾರ ಕೈಗೊಂಡ ತಕ್ಷಣವೇ ನಿಮಗೆ ತಿಳಿಸುತ್ತೇನೆ ಎಂದಿದ್ದಾಳೆ.

ರಾಜಕೀಯಕ್ಕೆ ಸೇರುತ್ತಿರುವುದು ಏಕೆ?

ರಾಜಕೀಯಕ್ಕೆ ಸೇರುತ್ತಿರುವುದು ಏಕೆ?

ಒಂದೇ ರೀತಿಯ ಪಾತ್ರ ನಿರ್ವಹಣೆ ಬೋರ್ ಹೊಡೆಸುತ್ತಿದೆ. ರಾಜಕೀಯ ರಂಗವೂ ಸಕತ್ ಗ್ಲಾಮರಸ್ ಆಗಿದೆ. ದೈನಂದಿನ ಆಗು ಹೋಗುಗಳನ್ನು ತಿಳಿದುಕೊಳ್ಳುವ ಬಯಕೆ ಉಂಟಾಗುತ್ತಿದೆ. ರಾಜಕೀಯ ಸೇರಿ ಜನರಿಗೆ ಏನಾದರೂ ಒಳ್ಳೆದು ಮಾಡುವ ಹಂಬಲವಿದೆ. ಅಭಿಮಾನಿಗಳು ನನಗೆ ಕೊಟ್ಟಿರುವ ಪ್ರೀತಿಗೆ ನಾನು ಪ್ರತಿಯಾಗಿ ಏನಾದರೂ ಕೊಡಬೇಕು ಎನಿಸಿದೆ

ಹಾಗಾದರೆ ಸಿನಿಮಾರಂಗಕ್ಕೆ ಗುಡ್ ಬೈ?

ಹಾಗಾದರೆ ಸಿನಿಮಾರಂಗಕ್ಕೆ ಗುಡ್ ಬೈ?

ತಮಿಳುನಾಡಿನ ಜನತೆ ಕೊಟ್ಟಿರುವ ಪ್ರೀತಿ ಆದರಕ್ಕೆ ನಾನು ಚಿರಋಣಿ. ಚಿತ್ರರಂಗ ಬಿಡುತ್ತೀನಿ ಎಂಬ ಗಾಳಿಸುದ್ದಿಗೆ ಕಿವಿಕೊಟ್ಟು ನಿಮ್ಮ ಹಾರ್ಟ್ ಬ್ರೇಕ್ ಮಾಡಿಕೊಳ್ಳಬೇಡಿ. ನಾನು ಇನ್ನೂ ಇಲ್ಲೇ ಇರುತ್ತೀನಿ. ಅದರೆ, ಸದ್ಯಕ್ಕೆ ರಾಜಕೀಯ ರಂಗದಲ್ಲಿ ಸಕ್ರಿಯನಾಗುತ್ತೇನೆ ಎಂದಿದ್ದಾಳೆ ನಮಿತಾ. ಅಬ್ಬಾ ಸದ್ಯ ಎಂದು ಪಡ್ಡೆಗಳು ನಿಟ್ಟುಸಿರುಬಿಟ್ಟಿದ್ದಾರೆ. ಮೂಲಗಳ ಪ್ರಕಾರ ನಮಿತಾ ಕೈಲಿ ಯಾವ ಚಿತ್ರಗಳು ಸದ್ಯಕ್ಕಿಲ್ಲ.

ಪಾತ್ರಗಳ ಆಯ್ಕೆಯಲ್ಲಿ ಸಕತ್ ಕಿಲಾಡಿ

ಪಾತ್ರಗಳ ಆಯ್ಕೆಯಲ್ಲಿ ಸಕತ್ ಕಿಲಾಡಿ

ನಮಿತಾ ತನ್ನ ಮಾದಕ ಮೈಮಾಟವನ್ನಷ್ಟೇ ಬಂಡವಾಳ ಮಾಡಿಕೊಂಡು ಸಿನಿಮಾರಂಗದಲ್ಲಿ ಬೆಳೆಗಲಿಲ್ಲ. ಪ್ರತಿ ಚಿತ್ರದ ಪಾತ್ರಗಳ ಆಯ್ಕೆಯಲ್ಲೂ ಜಾಣ್ಮೆ ಮರೆದವಳು. ಬಿಲ್ಲಾ ಚಿತ್ರದ ಪಾತ್ರವಿರಬಹುದು. ಕನ್ನಡದಲ್ಲಿ ದರ್ಶನ್ ಜತೆಗೆ ಅಯ್ಯ ಪಾತ್ರವಿರಬಹುದು. ನಮಿತಾ ಪಾತ್ರಕ್ಕೆ ತಕ್ಕ ತೂಕವಿದ್ದರೆ ಮಾತ್ರ ಕಾಲ್ ಶೀಟ್ ಹಂಚುತ್ತಿದ್ದಳು.

ಅಮ್ಮನನ್ನು ನೋಡಿ ಇಂಪ್ರೆಸ್ ಆಗಿದ್ದ ನಮಿತಾ

ಅಮ್ಮನನ್ನು ನೋಡಿ ಇಂಪ್ರೆಸ್ ಆಗಿದ್ದ ನಮಿತಾ

ಹಿಂದೊಮ್ಮೆ ಸಿನಿಮಾ ಶೂಟಿಂಗ್ ಬೋರ್ ಎನಿಸಿ ತನ್ನ ಆಪ್ತ ಸಹಾಯಕಿ ಜೊತೆಗೂಡಿ ತಮಿಳುನಾಡಿನ ಹಳ್ಳಿಗಳಲ್ಲಿ ಸುತ್ತಾಡುತ್ತಿದ್ದ ಸಂದರ್ಭದಲ್ಲಿ ಸ್ಥೂಲ ಸುಂದರಿ ನಮಿತಾಳಿಗೆ ಎಲ್ಲೆಡೆ ಅಮ್ಮನ ದರ್ಶನವಾಗಿದೆ. ಭಕ್ತಿ ಭಾವದಿಂದ ಅಮ್ಮನ ಬಗ್ಗೆ ಕೇಳಿ ತಿಳಿದುಕೊಂಡ ನಮಿತಾ ಮನದಲ್ಲಿ ರಾಜಕೀಯದಲ್ಲಿ ಬೆಳೆ ಬಿತ್ತುವ ಬಗ್ಗೆ ಆಸಕ್ತಿ ಬೆಳೆದಿದೆ. ಜಯಲಲಿತಾ ಅವರ ಕಾರ್ಯ ವೈಖರಿ ಬಗ್ಗೆ ನಾನು ಇಂಪ್ರೆಸ್ ಅಗಿದ್ದೇನೆ ಎಂದು ಹೇಳಿಕೆ ಕೂಡಾ ನೀಡಿದ್ದಳು.

ನಮಿತಾಗೆ ಅಭಿಮಾನಿ ಬಳಗವೇ ಶ್ರೀರಕ್ಷೆ

ನಮಿತಾಗೆ ಅಭಿಮಾನಿ ಬಳಗವೇ ಶ್ರೀರಕ್ಷೆ

ಬಟ್ಟೆ ವ್ಯಾಪಾರಿಯೊಬ್ಬಳ ಮಗಳಾದ ಉತ್ತರದ ಬೆಡಗಿ 1998ರಲ್ಲಿ ನಮಿತಾರಿಗೆ ಮಿಸ್ ಸೂರತ್ ಪಟ್ಟ ಒಲಿಯಿತು. 2001ರಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ನಮಿತಾ ಕೇವಲ ಭಾರತದಲ್ಲಷ್ಟೆ ಅಲ್ಲ ವಿದೇಶಗಳಲ್ಲೂ ಅಪಾರ ಅಭಿಮಾನಿ ಬಳಗವಿದೆ.

ಕನ್ನಡ ಚಿತ್ರರಂಗಕ್ಕೆ ನಮಿತಾ ಎಂಟ್ರಿ ಕೊಟ್ಟಿದ್ದು 2006ರಲ್ಲಿ. ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ ನೀಲಕಂಠ ಚಿತ್ರದ ಮೂಲಕ. ಈ ಚಿತ್ರಕ್ಕೆ ಸಾಯಿ ಪ್ರಕಾಶ್ ಆಕ್ಷನ್ ಕಟ್ ಹೇಳಿದ್ದರು. ತಮ್ಮ ಚೊಚ್ಚಲ ಚಿತ್ರದಲ್ಲೆ ನಮಿತಾ ಕನ್ನಡ ಪ್ರೇಕ್ಷಕರ ಹೃದಯ ಕದ್ದರು. ಈಗಲೂ ದಕ್ಷಿಣ ಭಾರತದಲ್ಲಿ ನಮಿತಾ ಎಂದರೆ ಪಡ್ಡೆಗಳು ಎದ್ದು ನಿಲ್ಲುತ್ತಾರೆ.

ನಮಿತಾ ರಾಜಕಾರಣಿಯಾಗಲು ಅರ್ಹರೇ?

ನಮಿತಾ ರಾಜಕಾರಣಿಯಾಗಲು ಅರ್ಹರೇ?

ಅಂದಹಾಗೆ, ನಮಿತಾ ಬಿಎ ಲಿಟರೇಚರ್ ‌ನಲ್ಲಿ ಪದವಿ ಪಡೆದಿದ್ದಾರೆ. ಇಂಗ್ಲಿಷ್, ತಮಿಳು, ಹಿಂದಿ, ಗುಜರಾತಿಯಲ್ಲಿ ಮಾತನಾಡುವ ಚಾಕಚಕ್ಯತೆ ಇದೆ. ಕನ್ನಡ ಸ್ವಲ್ಪ ಸ್ಪಲ್ಪ , ತೆಲುಗು ಕೊಂಚಂ ಕೊಂಚಂ ಅಷ್ಟೇ ಗೊತ್ತು. ಆದರೆ ಸೂಕ್ಷ್ಮ ಮನಸ್ಸಿನ ನಮಿತಾ ವ್ಯವಹಾರ ಚತುರೆ. ತಾನು ಮಾತ್ರ ಮಾದಕ ಕನ್ಯೆಯಾಗಿ ತೆರೆ ಮೇಲೆ ಕಾಣಿಸಿಕೊಂಡರೂ ನಂದಿತಾ ದಾಸ್ ಮಾಡುವ ಸಾಮಾಜಿಕ ಕಳಕಳಿ ಪಾತ್ರಗಳನ್ನು ನೋಡಿ ಕಣ್ಣೀರು ಸುರಿಸುವ ಮೃದು ಹೃದಯಿ. ಹೀಗಾಗಿ ಜನರ ಸಮಸ್ಯೆಗೆ ಸದಾಕಾಲ ಸ್ಪಂದಿಸುವ ಗುಣ ಆಕೆಗೆ ಮೊದಲಿನಿಂದಲೂ ಇದೆ. ರಾಜಕಾರಣಿಯಾಗಲು ಇಷ್ಟು ಅರ್ಹತೆ ಸಾಕು ಎನ್ನುತ್ತಾರೆ ಅಕೆ ಅಭಿಮಾನಿಗಳು

English summary
Namitha has been out of the news for a while. It appears like offers are not coming her way. As a result, she is not seen any movie in the recent years. Well, it probably has made her to look out for other career options and one profession that is tailor-made for public figures is politics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X