ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೆನ್ನೈನಲ್ಲಿ ಅಮ್ಮ ಕ್ಯಾಂಟೀನ್ ಸಿಬ್ಬಂದಿಗೆ ಕೊವಿಡ್19 ಪಾಸಿಟಿವ್

|
Google Oneindia Kannada News

ಚೆನ್ನೈ, ಮೇ 4: ಲಾಕ್ ಡೌನ್ ಸಂದರ್ಭದಲ್ಲಿ ಬಡವರು, ನಿರ್ಗತಿಕರಿಗೆ ಆಹಾರ ಒದಗಿಸುತ್ತಿದ್ದ ಅಮ್ಮ ಕ್ಯಾಂಟೀನ್ ಸಿಬ್ಬಂದಿಯೊಬ್ಬರಿಗೆ ಕೊವಿಡ್19 ಪಾಸಿಟಿವ್ ಇರುವುದು ದೃಢಪಟ್ಟಿದೆ. ಇದರಿಂದ ಸಹಜವಾಗಿ ಆ ಪ್ರದೇಶದಲ್ಲಿ ಆತಂಕ ಮೂಡಿದೆ.

ಇದಲ್ಲದೆ, ಮಾಧವರಂ ಪ್ರದೇಶದಲ್ಲಿರುವ ಅವಿನ್ ಹಾಲು ಸಂಸ್ಥೆಯ ಸಿಬ್ಬಂದಿಯೊಬ್ಬರಲ್ಲೂ ಕೂಡ ಕೊರೋನಾ ದೃಢಪಟ್ಟಿದೆ. ಆದರೆ, ಈ ಬಗ್ಗೆ ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ, ಘಟಕವನ್ನು ಸೋಂಕು ರಹಿತ ಮಾಡಲಾಗುತ್ತದೆ ಎಂದು ಅವಿನ್ ಹಾಲು ಪೂರೈಕೆ ಸಂಸ್ಥೆ ಹಾಗೂ ಅಮ್ಮ ಕ್ಯಾಂಟಿನ್ ವಕ್ತಾರರು ಹೇಳಿದ್ದಾರೆ.

ಸಿಂಗಾಪುರದಲ್ಲಿ 4800 ಮಂದಿ ಭಾರತೀಯರಿಗೆ ಕೊರೊನಾ ಸೋಂಕು ಸಿಂಗಾಪುರದಲ್ಲಿ 4800 ಮಂದಿ ಭಾರತೀಯರಿಗೆ ಕೊರೊನಾ ಸೋಂಕು

ಅಮ್ಮ ಕ್ಯಾಂಟೀನ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ 52 ವರ್ಷದ ಮಹಿಳೆಯೊಬ್ಬರಲ್ಲಿ ವೈರಸ್ ದೃಢಪಟ್ಟಿದ್ದು ಸದ್ಯ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಗಜಪತಿ ಲಾಲಾ ಬೀದಿಯಲ್ಲಿರುವ ಕಂಟೈನ್ಮೆಂಟ್ ಜೋನ್ ನಲ್ಲಿದ್ದ ಅಮ್ಮ ಕ್ಯಾಂಟೀನ್ ನಲ್ಲಿ ಮಹಿಳೆ ಕಾರ್ಯನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.

Aavin plant & Amma Canteen staff hit by coronavirus

ಮಹಿಳೆಯೊಂದಿಗೆ ಸಂಪರ್ಕ ಹೊಂದಿರುವ ಕುಟುಂಬದವರು, ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಿದ್ದವರೆಲ್ಲರನ್ನು ಪರೀಕ್ಷೆಗೊಳಪಡಿಸಲಾಗುತ್ತದೆ. ಮಾಧಾವಾರಂ ಘಟಕದ ಸಿಬ್ಬಂದಿ ಹಾಗೂ ಕ್ಯಾಂಟೀನ್ ಸಿಬ್ಬಂದಿ ಇಬ್ಬರಿಗೂ ಜ್ವರ ಕಾಣಿಸಿಕೊಂಡ ಬಳಿಕ ಪರೀಕ್ಷಿಸಿದಾಗ ಕೊವಿಡ್19 ಪಾಸಿಟಿವ್ ಇರುವುದು ಪತ್ತೆಯಾಗಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.

English summary
An employee of Aavin’s Madhavaram plant and a staff member of the government’s heavily susbidised eatery have tested positive for Covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X