• search

12 ವರ್ಷದ ಬಾಲಕಿ ಮೇಲೆ 7 ತಿಂಗಳಿಂದ ಅತ್ಯಾಚಾರ, 17 ಮಂದಿ ಬಂಧನ

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಚೆನ್ನೈ, ಜುಲೈ 17: ನಗರದ ಅಪಾರ್ಟ್ ಮೆಂಟ್ ಸಮುಚ್ಚಯದಲ್ಲಿ ಕೆಲಸ ಮಾಡುತ್ತಿದ್ದ ಹದಿನೇಳು ಮಂದಿಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ. ಕಳೆದ ಏಳು ತಿಂಗಳಿಂದ ಹನ್ನೆರಡು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ ಆರೋಪದಲ್ಲಿ ಬಂಧಿಸಲಾಗಿದೆ. ಸಂತ್ರಸ್ತೆಯು ತನ್ನ ಮೇಲಿನ ದೌರ್ಜನ್ಯವನ್ನು ಸೋದರಿಗೆ ಹೇಳಿಕೊಂಡಾಗ ಕೃತ್ಯ ಬೆಳಕಿಗೆ ಬಂದಿದೆ.

  ಆ ಕೂಡಲೇ ಬಾಲಕಿಯ ಪೋಷಕರು ದೂರು ದಾಖಲಿಸಿದ್ದು, ಪ್ರಕರಣವನ್ನು ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಬಾಲಕಿಯ ವೈದ್ಯಕೀಯ ಪರೀಕ್ಷೆ ಮಾಡಲಾಗಿದ್ದು, ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ವೈದ್ಯರು ಖಾತ್ರಿ ಪಡಿಸಿದ್ದಾರೆ.

  ಅಶ್ಲೀಲ ಚಿತ್ರ ನೋಡಿ ಎಂಟರ ಬಾಲಕಿ ಮೇಲೆ ಕಾಮುಕ ಬಾಲಕರಿಂದ ಅತ್ಯಾಚಾರ

  ಮೊದಲಿಗೆ ಎಲಿವೇಟರ್ ಆಪರೇಟರ್ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಮಾಡಿದ್ದಾನೆ. ಆ ನಂತರ ಆತನ ಸ್ನೇಹಿತರು, ಸಹೋದ್ಯೋಗಿಗಳು ಕೂಡ ಬಾಲಕಿ ಮೇಲೆ ದೌರ್ಜನ್ಯ ನಡೆಸಿದ್ದಾರೆ. ಬಾಲಕಿಯು ತನ್ನ ತಾಯಿ ಜತೆ ವಾಸವಿದ್ದಳು. ತಂದೆ ವರ್ತಕರಾಗಿದ್ದು, ಮತ್ತು ಹಿರಿಯ ಸೋದರಿ ಬೇರೆ ನಗರದಲ್ಲಿ ನೆಲೆಸಿದ್ದರು.

  12 year old Chennai girl sexually assaulted for 7 months, 17 arrested

  ಸಂಜೆ ವೇಳೆಯಲ್ಲಿ ಬಾಲಕಿ ಮೇಲೆ ದೌರ್ಜನ್ಯ ನಡೆದಿದೆ. ತಮ್ಮ ಮಗಳು ಅಪಾರ್ಟ್ ಮೆಂಟ್ ನ ಇತರ ಮಕ್ಕಳ ಜತೆಗೆ ಆಟವಾಡುತ್ತಿರಬಹುದು ಎಂದು ಬಾಲಕಿಯ ತಾಯಿ ಅಂದುಕೊಂಡಿರುತ್ತಿದ್ದರು. ಆದರೆ ಆ ದೊಡ್ಡ ಅಪಾರ್ಟ್ ಮೆಂಟ್ ನಲ್ಲಿ ಕೆಲವು ಖಾಲಿ ಫ್ಲ್ಯಾಟ್ ಗಳಿದ್ದವು. ಅಲ್ಲಿಗೆ ಬಾಲಕಿಯನ್ನು ಕರೆದೊಯ್ಯುತ್ತಿದ್ದ ಆರೋಪಿಗಳು ದೌರ್ಜನ್ಯ ಎಸಗಿದ್ದಾರೆ.

  ರಕ್ಷಣಾ ಸಿಬ್ಬಂದಿಯನ್ನು ಒದಗಿಸುವ ಸಂಸ್ಥೆ ಹಾಗೂ ಖಾಸಗಿಯಾಗಿ ಕೆಲಸಗಾರರನ್ನು ಪೂರೈಸುವ ಸಂಸ್ಥೆಗಾಗಿ ಎಲ್ಲ ಆರೋಪಿಗಳು ಕೆಲಸ ಮಾಡುತ್ತಿದ್ದರು. ಮಹಿಳಾ ಕೋರ್ಟ್ ನಲ್ಲಿ ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಪೋಕ್ಸೊ ಕಾಯ್ದೆಯಡಿ ದೂರು ದಾಖಲಿಸಿಕೊಳ್ಳಲಾಗಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Chennai police Monday arrested 17 men, who worked at a city apartment, for molesting a 12 year old girl. The assault reportedly took place multiple times by different men over the last 7 months.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more