ಸಿಧು ಮುಸೇವಾಲಾ ಹತ್ಯೆ ಪ್ರಕರಣ: ಸಿಸಿಟಿವಿಯಲ್ಲಿ ಹಂತಕರ ದೃಶ್ಯ ಸೆರೆ
ಮಾನ್ಸಾ ಮೇ 30: ಪಂಜಾಬ್‌ನ ಖ್ಯಾತ ಗಾಯಕ ಸಿಧು ಮುಸೇವಾಲಾ ಅವರನ್ನು ಭಾನುವಾರ ಸಂಜೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಪಂಜಾಬ್‌ನ ಮಾನ್ಸಾ ಜಿಲ್ಲೆಯ ಜವಾಹರ್ಕೆ ಗ್ರಾಮದ ಬಳಿ ಸಿಧು ಮುಸೇವಾಲಾ ಮೇಲೆ ಗುಂಡಿನ ದಾಳಿ ನಡೆಸಲಾಗಿದೆ. ಕೆನಡಾ ಮೂಲದ ಹಂತಕ ಗೋಲ್ಡಿ ಬ್ರಾರ್ ಅವರು ಸಿಧು ಮುಸೇವಾಲಾ ಅವರ ಸಾವಿನ ಹೊಣೆಯನ್ನು ಹೊತ್ತುಕೊಂಡಿದ್ದಾರೆ. ಇದೀಗ ಸಿಸಿಟಿವಿ ವಿಡಿಯೋವೊಂದು ಹೊರಬಿದ್ದಿದ್ದು, ಇದರಲ್ಲಿ ಎರಡು ಕಾರುಗಳು ಸಿದ್ದು ಮುಸೇವಾಲಾ ಅವರ ಕಾರನ್ನು ಹಿಂಬಾಲಿಸುತ್ತಿರುವುದು ಕಂಡುಬಂದಿದೆ.
ಹೊರಬಿದ್ದಿರುವ ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಕಾಂಗ್ರೆಸ್ ನಾಯಕನ ಕಪ್ಪು ಬಣ್ಣದ ಎಸ್‌ಯುವಿ ಹಲವಾರು ವಾಹನಗಳೊಂದಿಗೆ ಜನನಿಬಿಡ ರಸ್ತೆಯ ಮೂಲಕ ಹಾದುಹೋಗುವುದನ್ನು ಕಾಣಬಹುದು. ಈ ಸ್ಥಳದಿಂದ ಕೆಲವು ನಿಮಿಷಗಳ ನಂತರ ದಾಳಿ ನಡೆದಿದೆ ಎಂದು ನಂಬಲಾಗಿದೆ. ಘಟನೆಯ ಸ್ವಲ್ಪ ಮೊದಲು, ಎರಡೂ ವಾಹನಗಳು ಗಾಯಕನ ಕಪ್ಪು ಬಣ್ಣದ ಥಾರ್ ಹಿಂದೆ ಹೋಗುತ್ತಿರುವುದು ವಿಡಿಯೊದಲ್ಲಿ ಕಂಡುಬರುತ್ತದೆ. ಇದರ ನಂತರ, ಬಿಳಿ ಬಣ್ಣದ ಬುಲೆರೋ ಹಿಂದಿನಿಂದ ವೇಗವಾಗಿ ಹೋಗುತ್ತಿರುವುದು ಕಂಡುಬರುತ್ತದೆ.

ಆಲ್ಟೋ ಕಾರುದೋಚಿ ಪರಾರಿ
ಪೊಲೀಸರು ಆ ಬುಲೆರೋವನ್ನು ಶಂಕಿತ ಎಂದು ಪರಿಗಣಿಸುತ್ತಿದ್ದಾರೆ. ಪಂಜಾಬ್ ಪೊಲೀಸರ ಹೊರತಾಗಿ ಹರಿಯಾಣ ಮತ್ತಿತರ ರಾಜ್ಯಗಳ ಪೊಲೀಸರಿಗೂ ಎಚ್ಚರಿಕೆ ನೀಡಲಾಗಿದೆ. ಎರಡೂ ವಾಹನಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ದಬ್ವಾಲಿ ಗಡಿಯಲ್ಲೂ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಶಸ್ತ್ರಸಜ್ಜಿತ ಆರೋಪಿಗಳು ಹರಿಯಾಣ ನಂಬರ್ ಆಲ್ಟೋ ಕಾರನ್ನು ದೋಚಿ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಮಾನಸ ಪೊಲೀಸರು ಬೊಲೆರೊ ಮತ್ತು ಸ್ಕಾರ್ಪಿಯೊ ವಾಹನಗಳ ಹುಡುಕಾಟ ಆರಂಭಿಸಿದ್ದಾರೆ. ಇತರ ಸಿಸಿಟಿವಿ ದೃಶ್ಯಗಳನ್ನು ಸಹ ಸ್ಕ್ಯಾನ್ ಮಾಡಲಾಗುತ್ತಿದೆ.

ನಾಲ್ವರು ಕಮಾಂಡೋ ಕಾವಲು
ನಿನ್ನೆ ರಾತ್ರಿ ಮಾಧ್ಯಮಗೋಷ್ಠಿಯಲ್ಲಿ, ಪಂಜಾಬ್ ಪೊಲೀಸ್ ಮುಖ್ಯಸ್ಥರು ಸಿಧು ಮೂಸ್ ವಾಲಾ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ನಿಧನರಾದರು ಎಂದು ಹೇಳಿದರು. ಕಾಂಗ್ರೆಸ್ ಟಿಕೆಟ್‌ನಲ್ಲಿ ರಾಜ್ಯ ಚುನಾವಣೆಗೆ ಸ್ಪರ್ಧಿಸಿದ್ದ ಪಂಜಾಬಿ ಗಾಯಕರನ್ನು ನಿನ್ನೆಯವರೆಗೆ ನಾಲ್ವರು ಕಮಾಂಡೋಗಳನ್ನು ಕಾವಲು ಕಾಯುತ್ತಿದ್ದರು, ಅವರಲ್ಲಿ ಇಬ್ಬರನ್ನು ಆಮ್ ಆದ್ಮಿ ಪಕ್ಷ ಸರ್ಕಾರ ತೆಗೆದುಹಾಕಿತ್ತು. "ನಿನ್ನೆ, ಸಿಧು ಮೂಸ್ ವಾಲಾ ಉಳಿದ ಇಬ್ಬರು ಕಮಾಂಡೋಗಳನ್ನು ತನ್ನೊಂದಿಗೆ ಹೋಗದಂತೆ ಕೇಳಿಕೊಂಡರು ಮತ್ತು ಅವರು ತಮ್ಮ ಬುಲೆಟ್ ಪ್ರೂಫ್ ವಾಹನವನ್ನು ತೆಗೆದುಕೊಂಡಿಲ್ಲ" ಎಂದು ಪೊಲೀಸ್ ಮುಖ್ಯಸ್ಥ ವಿಕೆ ಭಾವರಾ ಕಳೆದ ರಾತ್ರಿ ಸುದ್ದಿಗಾರರಿಗೆ ತಿಳಿಸಿದರು.

ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಮೂಸೇ ವಾಲಾ
"ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿರುವ ದರೋಡೆಕೋರರು ಕೆನಡಾದಲ್ಲಿ ನೆಲೆಸಿದ್ದಾರೆ" ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಸಿಧು ಮೂಸ್ ವಾಲಾ ಕಾಂಗ್ರೆಸ್ ಸೇರಿದ್ದರು. ಈ ವರ್ಷದ ಆರಂಭದಲ್ಲಿ ನಡೆದ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ, ಸಿಧು ಮೂಸ್ ವಾಲಾ ಅವರು ಮಾನ್ಸಾದಿಂದ ಸ್ಪರ್ಧಿಸಿ ಎಎಪಿಯ ವಿಜಯ್ ಸಿಂಗ್ಲಾ ವಿರುದ್ಧ ಸೋತಿದ್ದರು.
Recommended Video

ಹಂತಕರ ಭೇಟೆಗಾಗಿ ಪೊಲೀಸ್ ಬಲೆ
ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ತನಿಖೆಗೆ ಪಂಜಾಬ್ ಪೊಲೀಸರು ಎಸ್‌ಐಟಿ ರಚಿಸಿದ್ದಾರೆ. ಸಿಧು ಮುಸೇವಾಲಾ ಹತ್ಯೆಗೆ ಮೂರು ಆಯುಧಗಳನ್ನು ಹಾರಿಸಲಾಗಿದೆ. ಪಂಜಾಬ್ ಪೊಲೀಸರು ಮುಸೇವಾಲಾ ಕೊಲೆ ಪ್ರಕರಣವನ್ನು ಆದಷ್ಟು ಬೇಗ ಬಗೆಹರಿಸುತ್ತಾರೆ ಎಂದು ಪೊಲೀಸರು ಹೇಳಿದ್ದಾರೆ. ಸಿಧು ಮುಸೇವಾಲಾ ಅವರ ನಿಜವಾದ ಹೆಸರು ಶುಭದೀಪ್ ಸಿಂಗ್ ಸಿಧು. ಸಿಧು ಮೂಸೆವಾಲಾ ಅವರು 11 ಜೂನ್ 1993 ರಂದು ಮನ್ಸಾದ ಮೂಸಾ ಗ್ರಾಮದಲ್ಲಿ ಭೋಲಾ ಸಿಂಗ್ ಮತ್ತು ಚರಣ್ ಕೌರ್ ದಂಪತಿಗೆ ಜನಿಸಿದರು. 28ರ ಹರೆಯದ ಸಿಧು ಸಂಗೀತ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.











Click it and Unblock the Notifications