ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಎಪಿ,ಬಿಜೆಪಿ ಎರಡೂ ಒಂದೇ ನಾಣ್ಯದ ಎರಡು ಮುಖವಿದ್ದಂತೆ: ಪ್ರಿಯಾಂಕಾ

|
Google Oneindia Kannada News

ಚಂಡೀಗಢ, ಫೆಬ್ರವರಿ 15: ಆಮ್ ಆದ್ಮಿ ಪಕ್ಷ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖವಿದ್ದಂತೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಜನ ಸಂಪರ್ಕ ಅಭಿಯಾದ ಅಂಗವಾಗಿ ರೂಪ್ನಗರ್ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಅವರೊಂದಿ ಟ್ರ್ಯಾಕ್ಟರ್ ಸವಾರಿ ಮಾಡಿದ ಪ್ರಿಯಾಂಕಾ ಗಾಂಧಿ, ಬಿಜೆಪಿ ಮತ್ತು ಎಎಪಿ ಒಂದೇ ನಾಣ್ಯದ ಎರಡು ಮುಖಗಳು ಎಂದು ಕರೆದರು.

ಮಣಿಪುರದಲ್ಲಿ ಕಾಂಗ್ರೆಸ್ ಗೆದ್ದರೆ ಯುವಕರಿಗೆ ನಿರುದ್ಯೋಗಿ ಭತ್ಯೆ; ಪ್ರಿಯಾಂಕಾ ಗಾಂಧಿಮಣಿಪುರದಲ್ಲಿ ಕಾಂಗ್ರೆಸ್ ಗೆದ್ದರೆ ಯುವಕರಿಗೆ ನಿರುದ್ಯೋಗಿ ಭತ್ಯೆ; ಪ್ರಿಯಾಂಕಾ ಗಾಂಧಿ

ಬಿಜೆಪಿ ಈ ಹಿಂದೆ ಗುಜರಾತ್ ಮಾದರಿ ಎಂದು ಹೇಳುತ್ತಿದ್ದಂತೆ ಈಗ ಎಎಪಿ ದೆಹಲಿ ಮಾದರಿ ಎನ್ನುತ್ತಿದೆ. ಆದರೆ ವಾಸ್ತವ ಏನು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು. ಪಂಜಾಬ್ ವಿಧಾನಸಭೆಗೆ ಫೆಬ್ರವರಿ 20 ರಂದು ಚುನಾವಣೆ ನಡೆಯಲಿದೆ.

Punjab Polls: Priyanka Gandhi Rides Tractor; Calls BJP & AAP Two Sides of Same Coin

ಜನರನ್ನು ಮರಳು ಮಾಡಲು ಬಿಜೆಪಿ ಹಾಗೂ ಎಎಪಿ ಹೊಸ ಹೊಸ ಬಗೆಯ ರಾಜಕೀಯ ಮಾಡುತ್ತಿವೆ. ಎಎಪಿಯ ಸಿದ್ದಾಂತ ಬಿಜೆಪಿಯ ಸಿದ್ಧಾಂತಕ್ಕೆ ಹೋಲಿಕೆಯಾಗುವಂತಿದ್ದು, ಆರ್ ಎಸ್ ಎಸ್ ನಿಂದ ಅದು ಹೊರಹೊಮ್ಮಿದೆ ಎಂದರು. ಪಂಜಾಬಿನ ಪ್ರಮುಖ ಪ್ರತಿಪಕ್ಷವಾಗಿರುವ ಎಎಪಿ, ದೆಹಲಿಯಲ್ಲಿ ಏನನ್ನೂ ಮಾಡಿಲ್ಲ.ಆಮ್ ಆದ್ಮಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿದರು.

ಪಂಜಾಬ್‌ನಲ್ಲಿ ಫೆಬ್ರವರಿ 20ರಂದು ಚುನಾವಣೆ ನಡೆಯಲಿದ್ದು, ಮಾರ್ಚ್ 10ರಂದು ಫಲಿತಾಂಶ ಹೊರಬೀಳಲಿದೆ. ಅಮರಿಂದರ್ ಸಿಂಗ್‌ರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ಇದ್ದ ಕಾರಣವನ್ನು ಈ ಹಿಂದೆ ತಿಳಿಸಿದ್ದರು.

ಪಂಜಾಬ್​​ನಲ್ಲಿ ಅಮರಿಂದರ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ ಅಲ್ಲಿ ಅನೇಕ ಕುಂದುಕೊರತೆಗಳಿದ್ದವು. ಆಡಳಿತ ವಿಫಲವಾಗುತ್ತಿತ್ತು. ಕೇಂದ್ರದಲ್ಲಿದ್ದ ಬಿಜೆಪಿ ಸರ್ಕಾರ ಅಮರಿಂದರ್​ ಸಿಂಗ್​ರನ್ನು ನಿಯಂತ್ರಿಸುತ್ತಿತ್ತು. ಹಾಗಾಗಿಯೇ ಅವರನ್ನು ಬದಲಿಸಿ, ಚರಣಜಿತ್​ ಸಿಂಗ್ ಚನ್ನಿಯವರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಲಾಯಿತು ಎಂದು ತಿಳಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ಅಮರಿಂದರ್​ ಸಿಂಗ್​ ಹೆಸರನ್ನು ಹೇಳದೆ ಇಷ್ಟು ಮಾತುಗಳನ್ನಾಡಿದ್ದಾರೆ. ಹಿಂದಿನ ಮುಖ್ಯಮಂತ್ರಿ ಎಂದು ಉಲ್ಲೇಖಿಸಿದ್ದಾರೆ. ನಮ್ಮ ಸರ್ಕಾರ ದೆಹಲಿಯಿಂದ ನಿಯಂತ್ರಿಸುತ್ತಿರುವುದು ಗೊತ್ತಾಗಿದ್ದಕ್ಕೆ ಈ ಕ್ರಮ ತೆಗೆದುಕೊಳ್ಳಬೇಕಾಯಿತು ಎಂದಿದ್ದಾರೆ.

ಹಾಗೇ, ಪಂಜಾಬ್​​ನಲ್ಲಿ ಇದೀಗ ಅಮರಿಂದರ್​ ಸಿಂಗ್​ ಅವರ ನೂತನ ಪಕ್ಷ ಪಂಜಾಬ್​ ಲೋಕ್​ ಕಾಂಗ್ರೆಸ್​ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದರ ಬಗ್ಗೆಯೂ ಕೂಡ ಪ್ರಿಯಾಂಕಾ ಗಾಂಧಿ ಇದೇ ವೇಳೆ ಮಾತನಾಡಿದ್ದಾರೆ.

2021ರ ಸೆಪ್ಟೆಂಬರ್​ನಲ್ಲಿ ಪಂಜಾಬ್​​ನಲ್ಲಿ ಮುಖ್ಯಮಂತ್ರಿ ಬದಲಾವಣೆ ಮಾಡಲಾಗಿದೆ. ಕ್ಯಾಪ್ಟನ್​ ಅಮರಿಂದರ್ ಸಿಂಗ್​​ರನ್ನು ಸ್ಥಾನದಿಂದ ಕೆಳಗಿಳಿಸಿ, ಚರಣಜಿತ್ ಸಿಂಗ್ ರನ್ನು ಮುಖ್ಯಮಂತ್ರಿ ಮಾಡಲಾಗಿದೆ.

ಅಲ್ಲಿಂದ ಇಲ್ಲಿಯವರೆಗೂ ಕಾಂಗ್ರೆಸ್​​ನ ವರಿಷ್ಠರು, ಅದರಲ್ಲೂ ಗಾಂಧಿ ಕುಟುಂಬದ ಯಾರೂ ಕೂಡ ಈ ಬಗ್ಗೆ ಮಾತನಾಡಿರಲಿಲ್ಲ. ಕಾಂಗ್ರೆಸ್​ ನ ಪಂಜಾಬ್​ ಪ್ರದೇಶ ಸಮಿತಿ ಅಧ್ಯಕ್ಷ ನವಜೋತ್​ ಸಿಂಗ್ ಸಿಧು ಮತ್ತು ಅಮರಿಂದರ್​ ಸಿಂಗ್​ ನಡುವಿನ ಮನಸ್ತಾಪ ಹೆಚ್ಚಾದ ಬೆನ್ನಲ್ಲೇ, ಅವರನ್ನು ಹುದ್ದೆಯಿಂದ ಕೆಳಗಿಳಿಸಲಾಗಿತ್ತು.

English summary
Congress leader Priyanka Gandhi Vadra on Tuesday campaigned for party candidates in Punjab and said like the BJP earlier propagated Gujarat model’, AAP supremo Arvind Kejriwal was publicising his Delhi model’, which she said was also a failure.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X