ಕಾಂಗ್ರೆಸ್‌ಗೆ ಮತ ನೀಡಿ, ಎಎಪಿಗೆ ನೀಡಬೇಡಿ ಎಂದ ಪಂಜಾಬ್‌ ಬಿಜೆಪಿ ಮುಖ್ಯಸ್ಥ

ಚಂಡೀಗಢ, ಫೆಬ್ರವರಿ 19: ನೀವು ಬಿಜೆಪಿಗೆ ಮತ ಹಾಕದಿದ್ದರೆ, ಕಾಂಗ್ರೆಸ್‌ಗೆ ಮತ ಹಾಕಿ, ಆದರೆ ಆಮ್ ಆದ್ಮಿ ಪಕ್ಷಕ್ಕೆ ಮತ ಹಾಕಬೇಡಿ ಎಂದು ಪಂಜಾಬ್ ಬಿಜೆಪಿ ಮುಖ್ಯಸ್ಥರು ಅಶ್ವನಿ ಕುಮಾರ್‌ ಶರ್ಮಾ ಚುನಾವಣಾ ಪ್ರಚಾರ ರ್‍ಯಾಲಿಯಲ್ಲಿ ಹೇಳಿದ್ದರು. ಪಂಜಾಬ್‌ ಚುನಾವಣೆಗೂ ಒಂದು ದಿನದ ಮುನ್ನ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

"ಎಎಪಿಗೆ ಮತ ಎಂದರೆ ಭಯೋತ್ಪಾದನೆಗೆ ಮತ. ನೀವು ನಮಗೆ (ಬಿಜೆಪಿ) ಮತ ಹಾಕಲು ಬಯಸದಿದ್ದರೆ ಕಾಂಗ್ರೆಸ್‌ಗೆ ಮತ ಹಾಕಿ. ಆದರೆ ದೇಶ ದ್ರೋಹ ಮಾಡುವವರಿಗೆ ಮತ ಹಾಕಬೇಡಿ," ಎಂದು ಪಂಜಾಬ್ ಬಿಜೆಪಿ ಮುಖ್ಯಸ್ಥರು ಅಶ್ವನಿ ಕುಮಾರ್‌ ಶರ್ಮಾ ಹೇಳಿರುವುದು ಈ ವೀಡಿಯೋದಲ್ಲಿ ಕಂಡು ಬಂದಿದೆ.

"ಎಎಪಿಗೆ ಮತ ಎಂದರೆ ಭಯೋತ್ಪಾದನೆಗೆ ಮತ. ಪಂಜಾಬ್ ಒಡೆಯುವ ಮತ ಅದಾಗುತ್ತದೆ. ಎಎಪಿಗೆ ಮತ ಹಾಕುವ ಯಾವುದೇ ವ್ಯಕ್ತಿ ದೇಶ ಮತ್ತು ಪಂಜಾಬ್‌ಗೆ ದ್ರೋಹ ಬಗೆದಂತಾಗುತ್ತದೆ. ನೀವು ನಮಗೆ (ಬಿಜೆಪಿ) ಮತ ಹಾಕಲು ಬಯಸದಿದ್ದರೆ ಕಾಂಗ್ರೆಸ್‌ಗೆ ಮತ ಹಾಕಿ. ಆದರೆ ದೇಶ ದ್ರೋಹ ಮಾಡುವವರಿಗೆ ಮತ ಹಾಕಬೇಡಿ," ಎಂದು ಪಂಜಾಬ್ ಬಿಜೆಪಿ ಮುಖ್ಯಸ್ಥರು ಅಶ್ವನಿ ಕುಮಾರ್‌ ಶರ್ಮಾ ತಿಳಿಸಿದ್ದಾರೆ.

Punjab Poll: Vote Congress But Not AAP Says Punjab BJP Chief, Then Clarifies

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಂಜಾಬ್ ಬಿಜೆಪಿ ಮುಖ್ಯಸ್ಥರು ಅಶ್ವನಿ ಕುಮಾರ್‌ ಶರ್ಮಾ, "ಇದು ತಿರುಚಿದ ಹೇಳಿಕೆ" ಎಂದಿದ್ದಾರೆ. "ಸುಳ್ಳುಗಳನ್ನು ಹರಡುವುದು ಕಾಂಗ್ರೆಸ್‌ನ ಹಳೆಯ ತಂತ್ರವಾಗಿದೆ. ರಾಜ್ಯದ ಜನರನ್ನು ಮೂರ್ಖರನ್ನಾಗಿಸಲು ನನ್ನ ಹೇಳಿಕೆಯನ್ನು ತಿರುಚಲಾಗಿದೆ," ಎಂದು ಹೇಳಿದ್ದಾರೆ.

ಇದು ತಿರುಚಿದ ಹೇಳಿಕೆ, ಕಾಂಗ್ರೆಸ್‌ ಹಳೆಯ ತಂತ್ರ ಎಂದ ಬಿಜೆಪಿ ಮುಖ್ಯಸ್ಥ

"ಸುಳ್ಳುಗಳನ್ನು ಹರಡುವುದು ಕಾಂಗ್ರೆಸ್‌ನ ಹಳೆಯ ತಂತ್ರವಾಗಿದೆ. ರಾಜ್ಯದ ಜನರನ್ನು ಮೂರ್ಖರನ್ನಾಗಿಸಲು ನನ್ನ ಹೇಳಿಕೆಯನ್ನು ತಿರುಚಲಾಗಿದೆ ಮತ್ತು ಈ ವಿಧಾನಸಭೆ ಕ್ಷೇತ್ರ ಚುನಾವಣೆಯ ಸಂದರ್ಭದಲ್ಲಿ ವೈರಲ್‌ ಮಾಡಲಾಗಿದೆ. ಕಾಂಗ್ರೆಸ್ ಮತ್ತು ಎಎಪಿ ಎರಡೂ ಪಂಜಾಬ್‌ಗೆ ಯಾವುದೇ ಒಳ್ಳೆಯದನ್ನು ಮಾಡಲು ಸಾಧ್ಯವಿಲ್ಲ ಮತ್ತು ಎರಡೂ ಪಕ್ಷಗಳು ಪಂಜಾಬ್‌ಗೆ ಅಪಾಯಕಾರಿ. ಬಿಜೆಪಿಗಾಗಿ ಕಮಲದ ಬಟನ್‌ ಅನ್ನು ಒತ್ತಿ. ಇದರಿಂದ ರಾಜ್ಯವು ಸುರಕ್ಷಿತವಾಗಿ ಉಳಿಯುತ್ತದೆ ಮತ್ತು ಅಭಿವೃದ್ಧಿಯಾಗುತ್ತದೆ," ಎಂದು ಪಂಜಾಬ್ ಬಿಜೆಪಿ ಮುಖ್ಯಸ್ಥರು ಅಶ್ವನಿ ಕುಮಾರ್‌ ಶರ್ಮಾ ಸ್ಪಷ್ಟಪಡಿಸಿದ್ದಾರೆ.

ಚುನಾವಣೆ ಕಣದಲ್ಲಿ ಪಂಜಾಬ್‌ ಬಿಜೆಪಿ ಮುಖ್ಯಸ್ಥ

ಫೆಬ್ರವರಿ 20 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಗೆ ಪಂಜಾಬ್ ಬಿಜೆಪಿ ಮುಖ್ಯಸ್ಥ ಅಶ್ವನಿ ಕುಮಾರ್ ಶರ್ಮಾ ಅವರನ್ನು ಪಠಾಣ್‌ಕೋಟ್‌ನಿಂದ ಕಣಕ್ಕಿಳಿಸಲಾಗಿದೆ ಎಂದು ಪಕ್ಷವು ಬಿಜೆಪಿ ಈಗಾಗಲೇ ಹೇಳಿಕೆಯಲ್ಲಿ ತಿಳಿಸಿದೆ. ಶರ್ಮಾ ಪಠಾಣ್‌ಕೋಟ್‌ನ ಮಾಜಿ ಶಾಸಕರಾಗಿದ್ದಾರೆ.

ಬಿಜೆಪಿ ಈಗಾಗಲೇ ತನ್ನ ಪ್ರಣಾಳಿಕೆಯಲ್ಲಿ ಹಲವಾರು ಭರವಸೆಗಳನ್ನು ನೀಡಿದೆ. ಬಿಜೆಪಿ ಪಂಜಾಬ್‌ನಲ್ಲಿ ಸರ್ಕಾರವನ್ನು ರಚಿಸಿದರೆ ಜನರಿಗೆ ನಿರುದ್ಯೋಗ ಭತ್ಯೆ, ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ 35 ಪ್ರತಿಶತ ಮೀಸಲಾತಿ ಮತ್ತು ರಾಜ್ಯದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಬೃಹತ್ ಮೂಲಸೌಕರ್ಯ ಅಭಿವೃದ್ಧಿಗೆ ಭರವಸೆ ನೀಡಿದೆ. ಪ್ರಣಾಳಿಕೆಯಂತೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಮುನ್ನ ಮದ್ಯ ವ್ಯಸನದ ಪರೀಕ್ಷೆಯನ್ನು ನಡೆಸುವ ಕಡ್ಡಾಯಗೊಳಿಸಲಾಗಿದೆ ಎಂದು ಕೂಡಾ ಉಲ್ಲೇಖ ಮಾಡಿದೆ.

ಎಲ್ಲಾ ಪದವೀಧರರಿಗೆ ಅವರ ಪದವಿ ಮುಗಿದ ನಂತರ ಎರಡು ವರ್ಷಗಳವರೆಗೆ ಮಾಸಿಕ ರೂ 4,000 ನಿರುದ್ಯೋಗ ಭತ್ಯೆ ನೀಡಲಾಗುವುದು ಎಂದು ಕೂಡಾ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಸೇರ್ಪಡೆ ಮಾಡಿದೆ. ಗುತ್ತಿಗೆ ಉದ್ಯೋಗ ಸೇರಿದಂತೆ ಎಲ್ಲ ಸರಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ.35ರಷ್ಟು ಮೀಸಲಾತಿ ನೀಡುವುದಾಗಿಯೂ ಬಿಜೆಪಿ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿದೆ. (ಒನ್‌ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+