ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್‌ ಚುನಾವಣೆ: ರೈತರ ಪಕ್ಷದಿಂದ ಮತ್ತೆ 17 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

|
Google Oneindia Kannada News

ಚಂಡೀಗಢ, ಜನವರಿ 20: ಪಂಜಾಬ್ ವಿಧಾನಸಭೆ ಚುನಾವಣೆ 2022ಕ್ಕೆ ರೈತ ಸಂಘಟನೆಗಳ ಪಕ್ಷವಾದ ಸಂಯುಕ್ತ ಸಮಾಜ ಮೋರ್ಚಾ ತನ್ನ 17 ಅಭ್ಯರ್ಥಿಗಳ ಮೂರನೇ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ. ಜನವರಿ 17 ರಂದು, ಸಂಯುಕ್ತ ಸಮಾಜ ಮೋರ್ಚಾ (ಎಸ್‌ಎಸ್‌ಎಂ) ಮುಂಬರುವ ಪಂಜಾಬ್‌ ವಿಧಾನಸಭೆ ಚುನಾವಣೆಗೆ 20 ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು.

ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧ ಮಾಡಿ ಒಂದು ವರ್ಷಗಳ ಕಾಲ ಹಲವಾರು ರೈತ ಸಂಘಟನೆಗಳು ಹೋರಾಟ ನಡೆಸಿದ್ದವು. ಕೇಂದ್ರ ಸರ್ಕಾರವು ಮೂರು ಕೃಷಿ ಕಾಯ್ದೆಯನ್ನು ರದ್ದು ಮಾಡಿದ ಬಳಿಕ, ಪಂಜಾಬ್‌ನಲ್ಲಿ ಹಲವಾರು ಪಂಜಾಬ್ ರೈತ ಸಂಘಟನೆಗಳು ರಾಜಕೀಯ ರಂಗವನ್ನು ರಚನೆ ಮಾಡಿದೆ. ಹಾಗೆಯೇ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿಯೂ ಹೇಳಿದೆ. ಈ ರೈತ ಸಂಘಟನೆಗಳ ಒಕ್ಕೂಟದ ಪಕ್ಷ ಸಂಯುಕ್ತ ಸಮಾಜ ಮೋರ್ಚಾ (ಎಸ್‌ಎಸ್‌ಎಂ) ಈಗಾಗಲೇ ತನ್ನ ಅಭ್ಯರ್ಥಿಗಳ ಮೂರು ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಯುಪಿ ಚುನಾವಣೆ: ಎಎಪಿ 150 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯುಪಿ ಚುನಾವಣೆ: ಎಎಪಿ 150 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ರೈತರ ಸಂಘಟನೆಯು ಚುನಾವಣಾ ರಾಜಕೀಯಕ್ಕೆ ಇಳಿದಿರುವುದನ್ನು ಎಎಪಿ ಸೇರಿದಂತೆ ಹಲವಾರು ರಾಜಕೀಯ ಪಕ್ಷಗಳು ಮತ್ತು ರೈತರ ಒಂದು ವಿಭಾಗವೂ ಸಹ ಟೀಕಿಸುತ್ತಿದೆ. ರೈತರ ಸಂಘಟನೆ ಸಂಯುಕ್ತ ಸಮಾಜ ಮೋರ್ಚಾ ಫೆಬ್ರವರಿ 20, 2022 ರಂದು ನಡೆಯಲಿರುವ ಪಂಜಾಬ್ ವಿಧಾನಸಭೆ ಚುನಾವಣೆಗೆ ಎಲ್ಲಾ 117 ಸ್ಥಾನಗಳಲ್ಲಿ ಸ್ಪರ್ಧಿಸುವುದಾಗಿ ಈಗಾಗಲೇ ಘೋಷಿಸಿದೆ. ರಾಜಕೀಯದ ಹೊಸ ಯುಗವನ್ನು ಪ್ರಾರಂಭಿಸುವುದಾಗಿ ಹೇಳಿಕೊಂಡಿರುವ ಎಸ್‌ಎಸ್‌ಎಂ ಈಗಾಗಲೇ 47 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.

Punjab Poll: Sanyukt Samaj Morcha Releases Third List of 17 Candidates

ಚಾರುಣಿ ನೇತೃತ್ವದ ರಾಜಕೀಯ ಸಂಘಟನೆಯೊಂದಿಗೆ ಎಸ್‌ಎಸ್‌ಎಂ ಮೈತ್ರಿ

ಪಂಜಾಬ್ ವಿಧಾನಸಭಾ ಚುನಾವಣೆಗೆ ಗುರ್ನಾಮ್ ಸಿಂಗ್ ಚಾರುಣಿ ನೇತೃತ್ವದ ರಾಜಕೀಯ ಸಂಘಟನೆಯೊಂದಿಗೆ ಸಂಯುಕ್ತ ಸಮಾಜ ಮೋರ್ಚಾ ಮೈತ್ರಿಯನ್ನು ಸೋಮವಾರ ಘೋಷಿಸಿತು. ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ಚಳವಳಿಯಲ್ಲಿ ಭಾಗವಹಿಸಿದ್ದ ರೈತ ಸಂಘಗಳ ರಾಜಕೀಯ ಒಕ್ಕೂಟವಾದ ಸಂಯುಕ್ತ ಸಮಾಜ ಮೋರ್ಚಾದ (ಎಸ್‌ಎಸ್‌ಎಂ) ನೇತೃತ್ವ ಬಲ್ಬೀರ್ ಸಿಂಗ್ ರಾಜೇವಾಲ್ ವಹಿಸಿದ್ದಾರೆ. ಚಾರುಣಿ ಹರಿಯಾಣ ಮೂಲದ ಭಾರತೀಯ ಕಿಸಾನ್ ಯೂನಿಯನ್ (ಚಾರುಣಿ) ಮುಖ್ಯಸ್ಥರಾಗಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ಈ ಹಿಂದೆ ಸಂಯುಕ್ತ ಸಂಘರ್ಷ್ ಪಕ್ಷವನ್ನು (ಎಸ್‌ಎಸ್‌ಪಿ) ರಚಿಸಿದ್ದರು. ಚಾರುಣಿ ನೇತೃತ್ವದ ಪಕ್ಷಕ್ಕೆ ಎಸ್‌ಎಸ್‌ಎಂ 10 ಸ್ಥಾನಗಳನ್ನು ನೀಡಿದೆ. ಚಾರುಣಿ ಬುಧವಾರ ಚುನಾವಣೆಗೆ ಒಂಬತ್ತು ಅಭ್ಯರ್ಥಿಗಳನ್ನು ಹೆಸರಿಸಿದ್ದಾರೆ.

ಜ.21ಕ್ಕೆ ಲಖಿಂಪುರಕ್ಕೆ ಭೇಟಿ: ಜ.31ರಂದು 'ವಿರೋಧ್ ದಿವಸ್’-ಟಿಕಾಯತ್ ಜ.21ಕ್ಕೆ ಲಖಿಂಪುರಕ್ಕೆ ಭೇಟಿ: ಜ.31ರಂದು 'ವಿರೋಧ್ ದಿವಸ್’-ಟಿಕಾಯತ್

ಸಂಯುಕ್ತ ಕಿಸಾನ್‌ ಮೋರ್ಚಾದ ಅಭ್ಯರ್ಥಿಗಳ ಮೂರು ಪಟ್ಟಿಗಳು

ರೈತ ಸಂಘಟನೆಗಳು ಗುಂಪು ಮೊದಲಿಗೆ 10 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಮೊದಲ ಪಟ್ಟಿಯ ಪ್ರಕಾರ ಎಸ್‌ಎಸ್‌ಎಂ ನಾಯಕ ಬಲ್ಬೀರ್ ಸಿಂಗ್ ರಾಜೇವಾಲ್ ಸಮ್ರಾಲಾದಲ್ಲಿ ಮತ್ತು ಪ್ರೇಮ್ ಸಿಂಗ್ ಭಂಗು ಘಾನೈರ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಖಾದೂರ್ ಸಾಹಿಬ್‌ನಲ್ಲಿ ಹರ್ಜಿಂದರ್ ಸಿಂಗ್ ತಾಂಡ, ಮೊಹಾಲಿಯಲ್ಲಿ ರವನೀತ್ ಸಿಂಗ್ ಬ್ರಾರ್ ಹಾಗೂ ತರ್ನ್ ತರಣ್‌ನಲ್ಲಿ ಡಾ ಸುಖಮನ್‌ದೀಪ್ ಸಿಂಗ್ ಸ್ಫರ್ಧಿಸಲಿದ್ದಾರೆ ಎಂದು ಪಟ್ಟಿ ಬಹಿರಂಗಪಡಿಸಿದೆ.

ಇನ್ನು ಕರ್ತಾರ್‌ಪುರದಲ್ಲಿ ರಾಜೇಶ್ ಕುಮಾರ್, ಫಿಲೌರ್‌ನಲ್ಲಿ ಅಜಯ್ ಕುಮಾರ್, ಜೈಟನ್‌ನಲ್ಲಿ ರಮಣದೀಪ್‌ ಸಿಂಗ್‌, ಕಾಡಿಯನ್‌ನಲ್ಲಿ ಬಲರಾಜ್ ಸಿಂಗ್, ಮೊಗಾದಲ್ಲಿ ಡಾ ನವದೀಪ್ ಸಿಂಗ್ ಸ್ಪರ್ಧಿಸಲಿದ್ದಾರೆ. ಪಕ್ಷವು ಫಿರೋಜ್‌ಪುರ ನಗರದಿಂದ ಲಖ್ವಿಂದರ್ ಸಿಂಗ್ ಅವರಿಗೆ ಟಿಕೆಟ್ ನೀಡಿದೆ. ನವನ್‌ಶಹರ್‌ನಿಂದ ಕುಲದೀಪ್ ಸಿಂಗ್ ವಜೀರ್‌ಪುರ್, ಬಟಾಲಾದಿಂದ ಬಲ್ವಿಂದರ್ ಸಿಂಗ್, ಲುಧಿಯಾನದಿಂದ (ಪಶ್ಚಿಮ) ತರುಣ್ ಬಾವಾ ಜೈನ್, ಆತಮ್ ನಗರದಿಂದ ಹರ್ಕಿರತ್ ಸಿಂಗ್, ಗಿಡ್ಡರ್‌ಬಾಹಾದಿಂದ ಗುರ್‌ಪ್ರೀತ್ ಸಿಂಗ್ ಕೋಟ್ಲಿ, ಮಲೌಟ್‌ನಿಂದ ಸುಖ್‌ಮಿಂದರ್ ಕುಮಾರ್, ಮುಕ್ತ್ಸರ್‌ನಿಂದ ಅನ್ರೂಪ್ ಕೌರ್ ಮತ್ತು ಸನೌರ್‌ನಿಂದ ಬೂಟಾ ಸಿಂಗ್ ಶಾದಿಪುರ್‌ ಸ್ಫರ್ಧಿಸಲಿದ್ದಾರೆ.

ಚಮ್ಕೌರ್ ಸಿಂಗ್ ಭೂಚೋ ಕ್ಷೇತ್ರದಿಂದ, ಧುರಿಯಿಂದ ಸರಬ್ಜಿತ್ ಸಿಂಗ್, ಫಿರೋಜ್‌ಪುರ ಗ್ರಾಮಾಂತರದಿಂದ ಮೋರಾ ಸಿಂಗ್, ರಾಜಾ ಸಾನ್ಸಿಯಿಂದ ಸತ್ನಾಮ್ ಸಿಂಗ್, ಜಲಾಲಾಬಾದ್‌ನಿಂದ ಸುರೀಂದರ್ ಸಿಂಗ್, ಸುನಮ್‌ನಿಂದ ಅಮರ್ಜಿತ್ ಸಿಂಗ್ ಮಾನ್, ಭದೌರ್‌ನಿಂದ ಭಗವಂತ್ ಸಿಂಗ್, ಬರ್ನಾಲಾದಿಂದ ಅಭಿಕರ್ನ್ ಸಿಂಗ್, ಮಾನ್ಸಾದಿಂದ ಗುರ್ನಾಮ್ ಸಿಂಗ್ ಬಿಖಿ, ಸರ್ದುಲ್‌ಗಢದಿಂದ ಚೋಟಾ ಸಿಂಗ್ ಮಿಯಾನ್ ಮತ್ತು ಪಾಯಲ್‌ನಿಂದ ಸಿಮರ್ದೀಪ್ ಸಿಂಗ್ ಸ್ಪರ್ಧಿಸಲಿದ್ದಾರೆ.

Recommended Video

KL Rahul ಪ್ರಕಾರ ಪಂದ್ಯ ಸೋಲಲು ಇದೇ ಮುಖ್ಯ ಕಾರಣ | Oneindia Kannada

ಇನ್ನು ಮೂರನೇ ಅಭ್ಯರ್ಥಿಗಳ ಪಟ್ಟಿಯ ಪ್ರಕಾರ, ಹರ್‌ಪ್ರೀತ್ ಸಿಂಗ್ ಧರಮ್‌ಕೋಟ್‌ನಿಂದ, ಮೇಘರಾಜ್ ರಲ್ಲಾ ಝಿರಾದಿಂದ, ಕ್ರಿಶನ್ ಚೌಹಾಣ್ ಬುಧ್ಲಾಡಾದಿಂದ, ಗುರ್ದಿತ್ತ ಸಿಂಗ್ ನಿಹಾಲ್ ಸಿಂಗ್ ವಾಲಾದಿಂದ, ನವಜೋತ್ ಸಿಂಗ್ ಸೈನಿ ಡೇರಾ ಬಸ್ಸಿಯಿಂದ, ಸತ್ವಂತ್ ಸಿಂಗ್ ಲೆಹ್ರಗಾಗಾದಿಂದ, ಹರ್ವಿಂದರ್ ಸಿಂಗ್ ರಾಜಪುರ ಮತ್ತು ಬಾಬಾ ಬಕಾಲದಿಂದ ಪ್ರಿನ್ಸಿಪಾಲ್ ಗುರ್ನಮ್ ಕೌರ್ ಸ್ಫರ್ಧಿಸಲಿದ್ದಾರೆ. ಜಸ್ಬೀರ್ ಸಿಂಗ್ ಬ್ರಾರ್ ತಲ್ವಂಡಿ ಸಾಬೊದಿಂದ, ಅಮೃತಸರ ಪಶ್ಚಿಮದಿಂದ ಅಮರ್ಜಿತ್ ಸಿಂಗ್ ಅಸಲ್, ರೂಪನಗರದಿಂದ ದವೀಂದರ್ ಸಿಂಗ್, ಅಮೃತಸರ ಪೂರ್ವದಿಂದ ಅಪರ ಸಿಂಗ್ ರಾಂಧವಾ, ಪಟಿಯಾಲ ಗ್ರಾಮಾಂತರದಿಂದ ಧರ್ಮೇಂದರ್, ನಾಕೋದರ್‌ನಿಂದ ಮಂದೀಪ್ ಸಿಂಗ್ ಸರಪಂಚ, ಶಾಮ್ ಚೌರಾಸಿಯಿಂದ ತೆಕೇದಾರ್ ಭಗವಾನ್ ದಾಸ್ ಸಿಧು, ಡೇರಾ ಬಾಬಾಜಿ ನಾನಕ್‌ನಿಂದ ಜಗಜಿತ್ ಸಿಂಗ್ ಕಲನೌರ್ ಮತ್ತು ಮಾಸ್ಟರ್ ದಲ್ ಸಿಂಗ್ ಖೇಮಕರನ್ ಸ್ಫರ್ಧಿಸಲಿದ್ದಾರೆ. (ಒನ್‌ಇಂಡಿಯಾ ಸುದ್ದಿ)

English summary
Punjab Poll: Sanyukt Samaj Morcha releases third list of 17 candidates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X