9.44 ಕೋಟಿ ರು. ಮೌಲ್ಯದ ಆಸ್ತಿ ಘೋಷಿಸಿದ ಪಂಜಾಬ್‌ ಸಿಎಂ ಚನ್ನಿ

ಚಂಡೀಗಢ, ಫೆಬ್ರವರಿ 01: ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಚನ್ನಿ ಬರ್ನಾಲಾ ಜಿಲ್ಲೆಯ ಭದೌರ್ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಎರಡು ವಿಧಾನಸಭಾ ಕ್ಷೇತ್ರಗಳಿಂದ ಚನ್ನಿ ಅವರನ್ನು ಕಣಕ್ಕಿಳಿಸಿದ್ದು, ಇನ್ನೊಂದು ಕ್ಷೇತ್ರ ಚಮ್ಕೌರ್ ಸಾಹಿಬ್ ಆಗಿದೆ. ಚರಣ್‌ಜೀತ್‌ ಸಿಂಗ್‌ ನಾಮಪತ್ರ ಸಲ್ಲಿಕೆ ಮೂಲಕ ತನ್ನ ಆಸ್ತಿಯನ್ನು ಘೋಷಣೆ ಮಾಡಿದ್ದು ಅವರ ಘೋಷಿತ ಆಸ್ತಿ ಮೌಲ್ಯ 9.44 ಕೋಟಿ ರೂಪಾಯಿ ಆಗಿದೆ.

ಪಂಜಾಬ್ ಮುಖ್ಯಮಂತ್ರಿ ಚರಣ್‌ಜೀತ್‌ ಸಿಂಗ್‌ ಚನ್ನಿ ಬಳಿ 32.57 ಲಕ್ಷ ರೂಪಾಯಿ ಮೌಲ್ಯದ ಟೊಯೊಟಾ ಫಾರ್ಚುನರ್ ಎಂಬ ಎಸ್‌ಯುವಿ ಇದೆ. ವೈದ್ಯೆಯಾಗಿರುವ ಅವರ ಪತ್ನಿ 45.99 ಲಕ್ಷ ರೂಪಾಯಿ ಮೌಲ್ಯದ ಎರಡು ವಾಹನಗಳನ್ನು ಹೊಂದಿದ್ದಾರೆ. ಪಂಜಾಬ್‌ನ ಮೊದಲ ದಲಿತ ಮುಖ್ಯಮಂತ್ರಿಯ ಸ್ವಂತ ಆಸ್ತಿ ಮೌಲ್ಯ 2.62 ಕೋಟಿ ಮತ್ತು ಅವರ ಪತ್ನಿ ಆಸ್ತಿ ಮೌಲ್ಯ 6.82 ಕೋಟಿ ಆಗಿದೆ ಒಟ್ಟಗಿ ಚರಣ್‌ಜೀತ್‌ ಸಿಂಗ್‌ ಚನ್ನಿ 9.44 ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿಯನ್ನು ಹೊಂದಿರುವುದಾಗಿ ಘೋಷಣೆ ಮಾಡಿಕೊಂಡಿದ್ದಾರೆ.

ಚರಣ್‌ಜೀತ್‌ ಸಿಂಗ್‌ ಚನ್ನಿ ಮೊಹಾಲಿ ಮತ್ತು ರೂಪನಗರದ ಖರಾರ್‌ನಲ್ಲಿ ಕೃಷಿ, ಕೃಷಿಯೇತರ ಭೂಮಿ ಮತ್ತು ವಾಣಿಜ್ಯ ಆಸ್ತಿಯನ್ನು ಹೊಂದಿದ್ದಾರೆ. ಚನ್ನಿ ಹೆಸರಿನಲ್ಲಿ ಮೊರಿಂಡಾದಲ್ಲಿ 14,062 ಚದರ ಅಡಿ ವಿಸ್ತೀರ್ಣದ ಒಂದು ಮನೆಯಿದೆ. ಚನ್ನಿ ಪತ್ನಿಯ ಹೆಸರಿನಲ್ಲಿ ಮೊಹಾಲಿಯ ಖರಾರ್‌ನಲ್ಲಿ 13,500 ಚದರ ಅಡಿ ವಿಸ್ತೀರ್ಣದ ಮತ್ತೊಂದು ಆಸ್ತಿ ಇದೆ.

Punjab Poll: Charanjit Singh Channi has assets worth Rs 9.44 cr

ಪಂಜಾಬ್ ಮುಖ್ಯಮಂತ್ರಿ ಚನ್ನಿ ಅಫಿಡವಿಟ್ ಪ್ರಕಾರ ಚನ್ನಿ ಮತ್ತು ಅವರ ಪತ್ನಿಯ ಕಾರು ಸಾಲ ಸೇರಿದಂತೆ ಒಟ್ಟು 88.35 ಲಕ್ಷ ರೂ ಸಾಲವನ್ನು ಹೊಂದಿದ್ದಾರೆ. 2020-21ರ ತನ್ನ ಆಸ್ತಿಯನ್ನು ಚರಣ್‌ಜೀತ್‌ ಸಿಂಗ್‌ ಚನ್ನಿ 27.84 ಲಕ್ಷ ಎಂದು ಘೋಷಿಸಿದ್ದಾರೆ. ಚನ್ನಿ ವ್ಯಾಪಾರವನ್ನೇ ವೃತ್ತಿ ಎಂದು ಘೋಷಿಸಿಕೊಂಡಿದ್ದಾರೆ.

58 ವರ್ಷದ ಚನ್ನಿ, ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿದ್ದು, ಸೆಪ್ಟೆಂಬರ್‌ನಲ್ಲಿ ಅಮರಿಂದರ್ ಸಿಂಗ್ ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸ್ಥಾನವನ್ನು ತೊರೆದ ಬಳಿಕ ಪಂಜಾಬ್‌ನಲ್ಲಿ ಉನ್ನತ ಹುದ್ದೆಯನ್ನು ಪಂಜಾಬ್‌ನಲ್ಲಿ ಉನ್ನತ ಹುದ್ದೆಯನ್ನು ಪಡೆದುಕೊಂಡಿದ್ದಾರೆ. ಇನ್ನು ಈಗಾಗಲೇ ಪಕ್ಷದ ರಾಜ್ಯಾಧ್ಯಕ್ಷ ನವಜೋತ್ ಸಿಧು ಜೊತೆಗಿನ ವೈಮನಸ್ಸಿನಿಂದಾಗಿ ಅಮರಿಂದರ್ ಸಿಂಗ್ ಕಾಂಗ್ರೆಸ್‌ ತೊರೆದಿದ್ದು, ಈಗ ಹೊಸ ಮುಖ್ಯಮಂತ್ರಿ ಚನ್ನಿ ಜೊತೆಗೂ ನವಜೋತ್ ಸಿಧು ವಿವಾದವಿದೆ. ಇಬ್ಬರು ಕೂಡಾ ಮುಖ್ಯಮಂತ್ರಿ ಆಕಾಂಕ್ಷಿಗಳಾಗಿದ್ದಾರೆ.

ನವಜೋತ್ ಸಿಧು ಆಸ್ತಿ ಎಷ್ಟಿದೆ?

ಸಿಧು ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಎರಡು ಅತ್ಯಾಧುನಿಕ ಎಸ್‌ಯುವಿಗಳು, ರೂ 44 ಲಕ್ಷ ಮೌಲ್ಯದ ವಾಚ್‌ಗಳು ಮತ್ತು ರೂ 35 ಕೋಟಿ ಮೌಲ್ಯದ ವಸತಿ ಆಸ್ತಿ(ಸ್ಥಿರಾಸ್ತಿ)ಗಳಿವೆ. ನಾಮಪತ್ರದ ಜತೆಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸಿಧು ಒಟ್ಟು ಆಸ್ತಿ 44.63 ಕೋಟಿ ರೂ ಎಂದು ದಾಖಲಿಸಿದ್ದಾರೆ. ಪತ್ನಿ ಹಾಗೂ ಮಾಜಿ ಶಾಸಕಿ ನವಜೋತ್ ಕೌರ್ ಸಿಧು ಅವರ ಕ್ರಮವಾಗಿ 3.28 ಕೋಟಿ ಹಾಗೂ 41.35 ಕೋಟಿ ಚರ ಮತ್ತು ಸ್ಥಿರ ಆಸ್ತಿ ವಿವರ ಕೂಡಾ ಸೇರಿದೆ. ಕಾಂಗ್ರೆಸ್ ನಾಯಕ 2020-21 ರ ಹಣಕಾಸು ವರ್ಷದಲ್ಲಿ ತನ್ನ ಒಟ್ಟು ಆದಾಯವನ್ನು 22.58 ಲಕ್ಷಕ್ಕೆ ಘೋಷಿಸಿದ್ದಾರೆ, ಇದು 2016-17 ರಲ್ಲಿ 94.18 ಲಕ್ಷಕ್ಕೆ ಇಳಿದಿದೆ ಎಂದು ಅಫಿಡವಿಟ್ ಪ್ರಕಾರ ತಿಳಿದು ಬಂದಿದೆ. ಸಿದ್ದು ಘೋಷಿಸಿರುವ ಚರ ಆಸ್ತಿಗಳ ಪೈಕಿ 1.19 ಕೋಟಿ ರೂಪಾಯಿ ಮೌಲ್ಯದ ಎರಡು ಟೊಯೊಟಾ ಲ್ಯಾಂಡ್ ಕ್ರೂಸರ್, 11.43 ಲಕ್ಷ ರೂಪಾಯಿ ಮೌಲ್ಯದ ಟೊಯೊಟಾ ಫಾರ್ಚೂನರ್ ಕಾರು, 30 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 44 ಲಕ್ಷ ರೂಪಾಯಿ ಮೌಲ್ಯದ ವಾಚ್‌ಗಳಿವೆ.

ಉತ್ತರ ಪ್ರದೇಶದಲ್ಲಿ ಫೆಬ್ರವರಿ 10, 14, 20, 23 ಮತ್ತು ಮಾರ್ಚ್ 3 ಮತ್ತು 7 ರಂದು ಚುನಾವಣೆ ನಡೆಯಲಿದೆ. ಗೋವಾ ಮತ್ತು ಉತ್ತರಾಖಂಡದಲ್ಲಿ ಫೆಬ್ರವರಿ 14 ರಂದು ಮತದಾನ ನಡೆಯಲಿದೆ. ಪಂಜಾಬ್‌ನಲ್ಲಿ ಫೆಬ್ರವರಿ 20 ರಂದು ಮತದಾನ ನಡೆಯಲಿದೆ. ಮಣಿಪುರದಲ್ಲಿ ಫೆಬ್ರವರಿ 27 ಮತ್ತು ಮಾರ್ಚ್ 3 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ. (ಒನ್‌ಇಂಡಿಯಾ ಸುದ್ದಿ)

Recommended Video

      Budget ಮಂಡಿಸುವ ಆರಂಭದಲ್ಲೇ Modi ಕನಸಿಗೆ ಗರಿ | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+