ಪಂಜಾಬ್ ಕಾಂಗ್ರೆಸ್ ಸಿಎಂ ಅಭ್ಯರ್ಥಿ ಚರಣ್‌ಜೀತ್ ಬಹುತೇಕ ಪಕ್ಕಾ?
ಚಂಡೀಗಢ, ಜನವರಿ 28: ಪಂಜಾಬ್‌ನಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಇನ್ನು ಕೂಡಾ ಘೋಷಣೆ ಮಾಡಿಲ್ಲ. ಆದರೆ ಈ ನಡುವೆ ಹಾಲಿ ಮುಖ್ಯಮಂತ್ರಿ ಚರಣ್‌ಜೀತ್ ಸಿಂಗ್ ಚನ್ನಿರನ್ನು ಪಂಜಾಬ್‌ನಲ್ಲಿ ಕಾಂಗ್ರೆಸ್‌ನ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಬಹುದು ಎಂದು ಮೂಲಗಳು ದಿ ಕ್ವಿಂಟ್‌ಗೆ ಮಾಹಿತಿ ನೀಡಿದೆ. "ಇದು ಬಹುತೇಕ ಪಕ್ಕಾ ಆಗಿದೆ. ಕೆಲವು ವಿಧಾನಗಳು ಇನ್ನೂ ಬಾಕಿಯಿದೆ," ಎಂದು ಕಾಂಗ್ರೆಸ್‌ನಲ್ಲಿ ಮೂಲಗಳು ತಿಳಿಸಿದೆ.
ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಕೂಡಾ ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದಾರೆ. ಈ ಹಿನ್ನೆಲೆಯಿಂದಾಗಿ ಪಂಜಾಬ್ ಕಾಂಗ್ರೆಸ್‌ನಲ್ಲಿ ಬಿಕ್ಕಟ್ಟು ಇನ್ನಷ್ಟು ತೀವ್ರವಾಗುವುದೇ ಎಂಬ ಅನುಮಾನ ಉಂಟಾಗಿದೆ. ಮೂಲಗಳ ಪ್ರಕಾರ, ಪಕ್ಷದ ಆಯ್ಕೆಯು ಚನ್ನಿ ಮತ್ತು ಸಿಧು ನಡುವೆ ಅಲ್ಲ. ಆದರೆ ಈಗ ಚನ್ನಿಯನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಿ ಬಳಿಕ ಚುನಾವಣೆಯ ನಂತರ ನಿರ್ಧಾರವನ್ನು ಮತ್ತೆ ಕೈಗೊಳ್ಳಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಇತ್ತೀಚಿಗೆ ಆಮ್ ಆದ್ಮಿ ಪಕ್ಷವು ಭಗವಂತ್ ಮಾನ್ ಅವರನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದ್ದು ಈ ಹಿನ್ನೆಲೆಯಿಂದಾಗಿ ಈಗ ಪಂಜಾಬ್ ಕಾಂಗ್ರೆಸ್‌ನ ಸಿಎಂ ಅಭ್ಯರ್ಥಿ ಯಾರು ಎಂಬುವುದು ಭಾರೀ ಚರ್ಚೆಗೆ ಕಾರಣವಾಗಿದೆ.
ಆದರೆ ಪಂಜಾಬ್ ಘಟಕದ ವಿವಿಧ ನಾಯಕರು ಪಂಜಾಬ್ ಭೇಟಿಯ ಸಂದರ್ಭದಲ್ಲಿ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜೊತೆ ಪಂಜಾಬ್‌ನಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡುವುದು ತೀರಾ ಅಗತ್ಯ ಎಂದು ಹೇಳಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಸುಳಿವು ನೀಡುವಂತೆ ನಿನ್ನೆ ಮಾತನಾಡಿದ್ದ ರಾಹುಲ್ ಗಾಂಧಿ, "ಮುಖ್ಯಮಂತ್ರಿ ಅಭ್ಯರ್ಥಿ ಬೇಕು ಎಂಬ ನಿಮ್ಮ ಬೇಡಿಕೆಯನ್ನು ಆದಷ್ಟು ಬೇಗ ಈಡೇರಿಸುತ್ತೇವೆ. ಸಾಮಾನ್ಯವಾಗಿ ಮುಖ್ಯಮಂತ್ರಿ ಘೋಷಣೆ ಮಾಡುವುದಿಲ್ಲ ಆದರೆ ಕಾಂಗ್ರೆಸ್ ಕಾರ್ಯಕರ್ತರು ಬೇಕಾದರೆ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತೇವೆ," ಎಂದು ತಿಳಿಸಿದ್ದಾರೆ.

ಚುನಾವಣೆ ಮುನ್ನ ಸಿಎಂ ಅಭ್ಯರ್ಥಿ ಘೋಷಣೆ: ರಾಹುಲ್ ಸುಳಿವು
ಜನವರಿ 27 ರಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ಚುನಾವಣೆಗೂ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿ ಘೋಷಿಸಬಹುದು ಎಂದು ಸ್ಪಷ್ಟಪಡಿಸಿದೆ. "ಚನ್ನಿ ಜೀ, ಸಿಧು ಜೀ, ಪಂಜಾಬ್‌ನ ಜನರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಸಿಎಂ ಅಭ್ಯರ್ಥಿ ಎಂದು ಘೋಷಿಸಲು ಬಯಸುತ್ತಾರೆ. ಶೀಘ್ರದಲ್ಲೇ ನಾವು ಎಲ್ಲರ ಆಯ್ಕೆಯ ಹೆಸರನ್ನು ನಿಮ್ಮ ಮುಂದೆ ಇಡುತ್ತೇವೆ ಎಂದು ನಾನು ಭರವಸೆ ನೀಡುತ್ತೇನೆ. ಪಂಜಾಬ್‌ನ ಇತರ ಎಲ್ಲಾ ನಾಯಕರು ಮತ್ತು ನಾನು ಒಟ್ಟಾಗಿ ಹೊಸ ಸರ್ಕಾರವನ್ನು ಬಲಪಡಿಸುತ್ತೇವೆ," ಎಂದು ತಿಳಿಸಿದ್ದಾರೆ.
ಪಂಜಾಬ್ ಘಟಕದ ವಿವಿಧ ನಾಯಕರು ಪಂಜಾಬ್ ಭೇಟಿಯ ಸಂದರ್ಭದಲ್ಲಿ ಮಾಜಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಮುಖ್ಯಮಂತ್ರಿ ಘೋಷಿಸುವುದು ಪಕ್ಷಕ್ಕೆ ಸಂಪೂರ್ಣವಾಗಿ ಅತ್ಯಗತ್ಯ ಎಂದು ಮಾತನಾಡಿದ್ದಾರೆ ಎಂದು ವರದಿಯು ಉಲ್ಲೇಖ ಮಾಡಿದೆ.

ಚನ್ನಿ ಸಿಎಂ ಅಭ್ಯರ್ಥಿ ಯಾಕಾಗಬಹುದು?
* ಚನ್ನಿ ರಾಜ್ಯದಲ್ಲಿ ಅತ್ಯಂತ ಜನಪ್ರಿಯ ಕಾಂಗ್ರೆಸ್ ನಾಯಕರಾಗಿದ್ದಾರೆ. ಹಲವಾರು ಅಭಿಪ್ರಾಯ ಸಮೀಕ್ಷೆಗಳು ಮತ್ತು ಪಕ್ಷದ ಸ್ವಂತ ಆಂತರಿಕ ಸಮೀಕ್ಷೆಗಳು ಚನ್ನಿ ಇತರ ಕಾಂಗ್ರೆಸ್ ನಾಯಕರಷ್ಟೇ ಅಲ್ಲ, ಇತರ ಪಕ್ಷಗಳ ಪ್ರತಿಸ್ಪರ್ಧಿಗಳಾದ ಭಗವಂತ್ ಮಾನ್ ಮತ್ತು ಸುಖಬೀರ್ ಬಾದಲ್ ಅವರ ಮುಖ್ಯಮಂತ್ರಿ ಪ್ರತಿಸ್ಫರ್ಧಿ ಎಂದು ತೋರಿಸಿದೆ.
* ಕ್ಯಾಪ್ಟನ್ ಅಮರಿಂದರ್ ಸಿಂಗ್ ರಾಜೀನಾಮೆ ನೀಡಿದ ಬಳಿಕ ಕಡಿಮೆ ಅವಧಿಯಲ್ಲಿ, ಕಾಂಗ್ರೆಸ್ ಅನ್ನು ಒಂದು ನಿರ್ದಿಷ್ಟ ಸೋಲಿನಿಂದ ಪಾರುಮಾಡಲು ಚನ್ನಿ ಸಹಾಯ ಮಾಡಿದ್ದಾರೆ.
* ಚನ್ನಿ ಹೆಸರು ಘೋಷಣೆ ಮಾಡದಿರುವುದು ದಲಿತರಲ್ಲಿ ತಪ್ಪು ಸಂದೇಶ ರವಾನಿಸುತ್ತದೆ ಎಂಬ ಭಯ ಕಾಂಗ್ರೆಸ್‌ನಲ್ಲಿದೆ. ಪಕ್ಷವು ಚುನಾವಣೆಯಲ್ಲಿ ಗೆದ್ದರೆ ಚನ್ನಿಯನ್ನು ಸಿಎಂ ಮಾಡದಿರುವ ಸಾಧ್ಯತೆಯಿದೆ. 2009ರಲ್ಲಿ ದಲಿತ ಸಿಎಂ ಸುಶೀಲ್‌ಕುಮಾರ್ ಶಿಂಧೆ ನೇತೃತ್ವದಲ್ಲಿ ಚುನಾವಣೆ ನಡೆದ ಸಂದರ್ಭದಲ್ಲಿ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮಾಡಿದ್ದ ರೀತಿಯಲ್ಲಿಯೇ ಇಲ್ಲಿ ಮಾಡುವ ಸಾಧ್ಯತೆ ಇದೆ. ಗೆದ್ದ ನಂತರ ಅದು ಮರಾಠ ನಾಯಕ ವಿಲಾಸ್‌ರಾವ್ ದೇಶಮುಖ್ ಅವರನ್ನು ಸಿಎಂ ಮಾಡಿತು ಎಂದು ಆಪ್ ಸಂಚಾಲಕ ಅರವಿಂದ್ ಕೇಜ್ರಿವಾಲ್ ಈಗಾಗಲೇ ಆರೋಪಿಸುತ್ತಿದ್ದಾರೆ.
* ಪಂಜಾಬ್‌ನ ಮೊದಲ ದಲಿತ ಸಿಎಂ ನೇಮಕವನ್ನು ಇತರ ರಾಜ್ಯಗಳಲ್ಲಿಯೂ ದಲಿತರನ್ನು ಸಿಎಂ ಮಾಡುವ ಬಗ್ಗೆ ಚರ್ಚೆಗೆ ನಾಂದಿ ಹಾಡಿದೆ. ಉತ್ತರಾಖಂಡದ ಪಕ್ಷದ ಪ್ರಮುಖ ನಾಯಕ ಹರೀಶ್ ರಾವತ್ ಚನ್ನಿ ಅವರನ್ನು ಸಿಎಂ ಆಗಿ ನೇಮಕ ಮಾಡುವ ಬಗ್ಗೆ ಮತ್ತು ಪಂಜಾಬ್‌ನ ಕಾಂಗ್ರೆಸ್ ಉಸ್ತುವಾರಿಯಾಗಿ ಈ ವಿಷಯದಲ್ಲಿ ಅವರದೇ ಪಾತ್ರದ ಬಗ್ಗೆ ಒತ್ತು ನೀಡುತ್ತಿದ್ದಾರೆ. ಇದು ಉತ್ತರಾಖಂಡದ ದಲಿತರ ಮತವನ್ನು ಗುರಿಯಾಗಿಸಿಕೊಂಡಂತೆ ಕಂಡುಬಂದಿದೆ. ಉತ್ತರ ಪ್ರದೇಶದಲ್ಲಿ ಪಕ್ಷವು ಇದೇ ತಂತ್ರ ಮಾಡಬಹುದು. (ಒನ್‌ಇಂಡಿಯಾ ಸುದ್ದಿ)












Click it and Unblock the Notifications