Breaking: ಪಂಜಾಬ್‌ ಸ್ಫೋಟ, 11 ಆರೋಪಿಗಳ ಬಂಧನ

ಮೊಹಾಲಿ, ಮೇ 10: ಮೊಹಾಲಿಯ ಸೆಕ್ಟರ್ 77ರಲ್ಲಿರುವ ಪಂಜಾಬ್‌ನ ಅತ್ಯಂತ ಸುರಕ್ಷಿತ ಗುಪ್ತಚರ ಇಲಾಖೆ ಪ್ರಧಾನ ಕಚೇರಿಯಲ್ಲಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳನ್ನು ಬಂಧಿಸಲಾಗಿದೆ.

ಮೊಹಾಲಿಯಲ್ಲಿ ಸೋಮವಾರ ರಾತ್ರಿ ನಡೆದ ಸ್ಫೋಟದ ಕುರಿತು ಪಂಜಾಬ್ ಸಿಎಂ ಭಗವಂತ್ ಮಾನ್ ನಿವಾಸದಲ್ಲಿ ಡಿಜಿಪಿ ಮತ್ತು ಇತರ ಹಿರಿಯ ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ಮಂಗಳವಾರ ನಡೆಯಿತು.

"ಪಂಜಾಬ್‌ನ ವಾತಾವರಣವನ್ನು ಹಾಳುಮಾಡಲು ಪ್ರಯತ್ನಿಸುತ್ತಿರುವ ಆರೋಪಿಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ನಾನು ಡಿಜಿಪಿ ಮತ್ತು ಇತರ ಗುಪ್ತಚರ ಅಧಿಕಾರಿಗಳಿಂದ ವರದಿ ಕೇಳಿದ್ದೇನೆ. ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲಾಗುವುದು. ಸದ್ಯ ತನಿಖೆ ನಡೆಸಲಾಗುತ್ತಿದ್ದು, ಸಂಜೆಯ ವೇಳೆಗೆ ವಿಷಯಗಳು ಸ್ಪಷ್ಟವಾಗಲಿವೆ" ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದರು.

ಮೊಹಾಲಿ ಸ್ಫೋಟ; ಎಸ್‌ಎಎಸ್‌ನಗರದ ಸೆಕ್ಟರ್ 77ರಲ್ಲಿರುವ ಪಂಜಾಬ್‌ ಪೊಲೀಸ್‌ ಗುಪ್ತಚರ ಕೇಂದ್ರದಲ್ಲಿ ಸೋಮವಾರ ರಾತ್ರಿ 7:45ರ ಸುಮಾರಿಗೆ ಸಣ್ಣ ಸ್ಫೋಟ ಸಂಭವಿಸಿದೆ. ಯಾವುದೇ ಪ್ರಾಣಹಾನಿಯಾದ ಬಗ್ಗೆ ವರದಿಯಾಗಿಲ್ಲ. ಹಿರಿಯ ಅಧಿಕಾರಿಗಳು ಸ್ಥಳದಲ್ಲಿದ್ದು ತನಿಖೆ ನಡೆಸುತ್ತಿದ್ದಾರೆ. ವಿಧಿವಿಜ್ಞಾನ ಪ್ರಯೋಗಾಲಯ ತಂಡಗಳನ್ನು ಕರೆಸಲಾಗಿದೆ.

Punjab Police Intelligence Headquarters Blast Case 11 Accused Arrested

ಮೊಹಾಲಿಯಲ್ಲಿರುವ ಪಂಜಾಬ್ ಪೊಲೀಸ್‌ನ ಗುಪ್ತಚರ ಪ್ರಧಾನ ಕಛೇರಿ ಮೇಲೆ ರಸ್ತೆಯಿಂದ ರಾಕೆಟ್ ಚಾಲಿತ ಗ್ರೆನೇಡ್ ಅಥವಾ ಆರ್‌ಪಿಜಿಯನ್ನು ಹಾರಿಸಲಾಗಿದೆ. ಈ ಸ್ಫೋಟದಿಂದಾಗಿ ಗಾಜುಗಳು ಒಡೆದು ಹೋಗಿವೆ. ಪೊಲೀಸರು ಇದನ್ನು ಆರ್‌ಪಿಜಿ ಮಾದರಿಯ ದಾಳಿ ಎಂದು ಕರೆದಿದ್ದು, ತನಿಖೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+