ಪಂಜಾಬ್ ಚುನಾವಣೆ: ಮೂರು ಅಭ್ಯರ್ಥಿಗಳೊಂದಿಗೆ ಆಪ್ 8ನೇ ಪಟ್ಟಿ ಬಿಡುಗಡೆ

ಚಂಡೀಗಢ ಜನವರಿ 07: ಆಮ್ ಆದ್ಮಿ ಪಕ್ಷ (ಎಎಪಿ) ಶುಕ್ರವಾರ ಪಂಜಾಬ್ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಎಂಟನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಮೂವರು ಅಭ್ಯರ್ಥಿಗಳ ಪಟ್ಟಿಯಲ್ಲಿ, ಜಲಂಧರ್ ಸೆಂಟ್ರಲ್‌ನಿಂದ ರಾಮನ್ ಅರೋರಾ, ಗುರು ಹರ್ ಸಹಾಯ್‌ನಿಂದ ಫೌಜಾ ಸಿಂಗ್ ಸರಾರಿ ಮತ್ತು ಅಬೋರ್‌ನಿಂದ ದೀಪ್ ಕಾಂಬೋಜ್ ಅವರಿಗೆ ಆಪ್ ಟಿಕೆಟ್ ನೀಡಿದೆ. ಇತ್ತೀಚೆಗಷ್ಟೇ ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ದೊಡ್ಡ ಗೆಲುವು ದಾಖಲಿಸಿರುವ ಆಮ್ ಆದ್ಮಿ ಪಕ್ಷ ಇದುವರೆಗೆ ಒಟ್ಟು 104 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಪಂಜಾಬ್ ವಿಧಾನಸಭೆ ಚುನಾವಣೆಗೆ ರಾಜಕೀಯ ಪಕ್ಷಗಳ ತಯಾರಿ ಭರ್ಜರಿಯಾಗಿದೆ. ಅಧಿಕ ಯೋಜನೆಗಳ ಭರವಸೆ ಮೂಲಕ ಮತದಾರರನ್ನು ಆಕರ್ಷಿಸುವ ಪ್ರಯತ್ನಗಳು ನಡೆಯುತ್ತಿವೆ.

ಪಂಜಾಬ್‌ನಲ್ಲಿ ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ನಿಟ್ಟಿನಲ್ಲಿ ಎಎಪಿ ಎಲ್ಲಾ ಕಾರ್ಯತಂತ್ರವನ್ನು ರೂಪಿಸುತ್ತಿದೆ. ಪಂಜಾಬ್ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ (ಎಎಪಿ) ಭರ್ಜರಿ ತಯಾರಿ ನಡೆಸಿದೆ. ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಆಮ್‌ ಆದ್ಮಿ ಪಕ್ಷವು ಪಂಜಾಬ್‌ನಲ್ಲಿ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದ್ದು, ಈ ಮಧ್ಯೆ ಪಕ್ಷವು ತನ್ನ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ.

ಎಎಪಿ ಚುನಾವಣಾ ಪ್ರಚಾರ

ಪಂಜಾಬ್‌ನಲ್ಲಿ ಒಟ್ಟು 117 ವಿಧಾನಸಭಾ ಕ್ಷೇತ್ರಗಳು ಇದೆ. ಈ ಪೈಕಿ ಆಮ್‌ ಆದ್ಮಿ ಪಕ್ಷ ಈವರೆಗೆ 58 ವಿಧಾನಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಮೊದಲ ಪಟ್ಟಿಯನ್ನು ನವೆಂಬರ್‌ನಲ್ಲಿ ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಹತ್ತು ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಆ ಬಳಿಕ ಡಿಸೆಂಬರ್‌ ಆರಂಭದಲ್ಲಿ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಮೂವತ್ತು ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗಿದೆ. ಇನ್ನು ಆ ಬಳಿಕ ಎಎಪಿ ಮತ್ತೊಂದು ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ 18 ವಿಧಾನಸಭೆ ಕ್ಷೇತ್ರಗಳ ಅಭ್ಯರ್ಥಿಯನ್ನು ಘೋಷಿಸಿದೆ. ಈ ಮೂಲಕ ಎಎಪಿ ಈವರೆಗೆ ಎಂಟು ಪಟ್ಟಿಗಳನ್ನು ಬಿಡುಗಡೆ ಮಾಡಿದೆ.

Punjab elections: AAP has released its 8th list with three candidates
ಇನ್ನು ಪಂಜಾಬ್‌ನಲ್ಲಿ ಎಎಪಿ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್‌ ಭಾರೀ ಪ್ರಚಾರವನ್ನು ಈಗಾಗಲೇ ಆರಂಭ ಮಾಡಿದ್ದಾರೆ. ಹಲವಾರು ಚುನಾವಣಾ ಘೋಷಣೆಗಳನ್ನು ಕೂಡಾ ಮಾಡಿದ್ದಾರೆ. ಕಳೆದ ನವೆಂಬರ್‌ನಲ್ಲಿ ಪಂಜಾಬ್‌ನ ಮೋಗಾದಲ್ಲಿನ ಚುನಾವಣಾ ಸಭೆ ಉದ್ದೇಶಿಸಿ ಮಾತನಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದೊಡ್ಡ ಚುನಾವಣಾ ಭರವಸೆಯೊಂದನ್ನು ನೀಡಿದ್ದಾರೆ. ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಪ್ರತಿ ಮಹಿಳೆಗೆ ತಿಂಗಳಿಗೆ 1000 ರೂಪಾಯಿ ನೀಡಲಾಗುವುದು ಎಂದು ಅವರು ಘೋಷಿಸಿದ್ದಾರೆ. ಈ ಹಣ ಅವರ ಮಾಸಿಕ ಪಿಂಚಣಿ ಹೊರತಾಗಿ ಇರಲಿದ್ದು, ಇದು ವಿಶ್ವದಲ್ಲೇ ಅತಿ ದೊಡ್ಡ ಮಹಿಳಾ ಸಬಲೀಕರಣ ಅಭಿಯಾನವಾಗಲಿದೆ ಎಂದಿದ್ದಾರೆ.

ಒಂದು ಕುಟುಂಬದಲ್ಲಿ ಮೂವರು ಮಹಿಳೆಯರಿದ್ದರೆ ಮೂವರಿಗೂ ತಲಾ ಒಂದು ಸಾವಿರ ರೂ. ನೀಡಲಾಗುವುದು ಎಂದು ಅವರು ಹೇಳಿದ್ದಾರೆ. ಹಣ ಎಲ್ಲಿಂದ ಬರುತ್ತೆ ಎಂದು ತಮ್ಮ ವಿರೋಧಿಗಳು ಪ್ರಶ್ನೆ ಕೇಳುತ್ತಾರೆ. ಆದರೆ, ಪಂಜಾಬ್‌ನಿಂದ ಮಾಫಿಯಾವನ್ನು ತೊಡೆದುಹಾಕಲು ನಾನು ಬಯಸುತ್ತೇನೆ. ಹಣ ತಾನಾಗಿಯೇ ಹರಿದು ಬರಲಿದೆ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳು ವಿಮಾನವನ್ನು ಖರೀದಿಸುತ್ತಾರೆ. ನಾನು ಖರೀದಿಸಲಿಲ್ಲ. ನನಗೆ ಟಿಕೆಟ್ ಉಚಿತವಾಗಿಸಿದೆ. ಕೇಜ್ರಿವಾಲ್ ಹೇಳಿದ್ದನ್ನು ಮಾಡುತ್ತಾರೆ. ಈ ಚುನಾವಣೆಯು ಪಂಜಾಬ್‌ನ ಭವಿಷ್ಯವನ್ನು ಬದಲಾಯಿಸಲಿದೆ ಎಂದು ಅವರು ಹೇಳಿದ್ದಾರೆ. ಈ ಬಾರಿ ಪೋಷಕರಾಗಲಿ ಅಥವಾ ಪತಿ ಆಗಲಿ ಯಾರಿಗೆ ಮತ ಹಾಕಬೇಕೆಂದು ಹೇಳುವುದಿಲ್ಲ ಯಾರಿಗೆ ಮತ ಹಾಕಬೇಕೆಂದು ಮಹಿಳೆಯರು ನಿರ್ಧರಿಸಬೇಕು ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಈ ಬಾರಿ ಕೇಜ್ರಿವಾಲ್‌ಗೆ ಅವಕಾಶ ನೀಡಿ ನೋಡಿ ಎಂದು ಮಹಿಳೆಯರೆಲ್ಲ ತಮ್ಮ ಮನೆಯಲ್ಲಿ ಎಲ್ಲರಿಗೂ ಹೇಳಬೇಕು ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಆದರೆ ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಧು ಅವರು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಭರವಸೆಗಳನ್ನು ಲಾಲಿಪಾಪ್ ಎಂದು ಕರೆದಿದ್ದು ಕೇಜ್ರಿವಾಲ್ ಅವರಂತೇ ಸಿಧು ಕೂಡ ಮತದಾರರಿಗೆ ಭರವಸೆಗಳನ್ನು ನೀಡಿದ್ದಾರೆ. ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ವರ್ಷದಲ್ಲಿ 8 ಉಚಿತ ಸಿಲಿಂಡರ್‌ಗಳನ್ನು ನೀಡಲಾಗುವುದು ಎಂದಿದ್ದಾರೆ. ಜೊತೆಗೆ ಮಹಿಳೆಯರಿಗೆ ಮಾಸಿಕ 2 ಸಾವಿರ ರೂಪಾಯಿ ನೀಡುವುದಾಗಿ ಘೋಷಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+