ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಂಜಾಬ್ ಚುನಾವಣೆ 2022: 18 ಸ್ಥಾನಗಳಿಗೆ ಎಎಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

|
Google Oneindia Kannada News

ಚಂಡೀಗಢ ಡಿಸೆಂಬರ್ 24: ಪಂಜಾಬ್ ವಿಧಾನಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ (ಎಎಪಿ) ಭರ್ಜರಿ ತಯಾರಿ ನಡೆಸಿದೆ. ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷವು ಪಂಜಾಬ್‌ನಲ್ಲಿ ಅಧಿಕಾರ ಹಿಡಿಯಲು ಪ್ರಯತ್ನಿಸುತ್ತಿದ್ದು, ಈ ಮಧ್ಯೆ ಪಕ್ಷವು ತನ್ನ ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದೆ. ಎಎಪಿ ಬಿಡುಗಡೆ ಮಾಡಿರುವ ಮೂರನೇ ಪಟ್ಟಿಯಲ್ಲಿ 18 ಅಭ್ಯರ್ಥಿಗಳ ಹೆಸರು ಸೇರಿದೆ.

117 ಸದಸ್ಯ ಬಲದ ಪಂಜಾಬ್ ವಿಧಾನಸಭೆಗೆ ಆಮ್ ಆದ್ಮಿ ಪಕ್ಷ ಇದುವರೆಗೆ 58 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಿದೆ. ಈ ಹಿಂದೆ ಎರಡು ಪಟ್ಟಿಗಳಲ್ಲಿ ಕ್ರಮವಾಗಿ 10 ಮತ್ತು 30 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿತ್ತು. ಆಮ್ ಆದ್ಮಿ ಪಕ್ಷವು (ಎಎಪಿ) ಸುಲ್ತಾನ್‌ಪುರ ಲೋಧಿಯಿಂದ ಸಜ್ಜನ್ ಸಿಂಗ್ ಚೀಮಾ, ಫಿಲೌರ್‌ನಿಂದ ಪ್ರಾಂಶುಪಾಲ ಪ್ರೇಮ್ ಕುಮಾರ್, ಹೊಶಿಯಾರ್‌ಪುರದಿಂದ ಪಂಡಿತ್ ಬ್ರಹ್ಮ ಶಂಕರ್ ಜಿಂಪಾ, ಅಜ್ನಾಲಾದಿಂದ ಕುಲದೀಪ್ ಸಿಂಗ್ ಧಲಿವಾಲ್, ಜಲಾಲಾಬಾದ್‌ನಿಂದ ಜಗದೀಪ್ ಗೋಲ್ಡಿ ಕಾಂಬೋಜ್, ಅಟ್ಟಾರಿ ಮತ್ತು ಲುಧಿಯಾನ ಸೆಂಟ್ರಲ್‌ನಿಂದ ಜಸ್ರವಿಂದರ್ ಸಿಂಗ್ ಸ್ಪರ್ಧಿಸಲಿದ್ದಾರೆ.

ಈ ಪಟ್ಟಿಯಲ್ಲಿ ಖೇಮ್‌ಕರನ್‌ನಿಂದ ಸರ್ವಾನ್ ಸಿಂಗ್ ಧುನ್, ಆನಂದಪುರ ಸಾಹಿಬ್‌ನಿಂದ ಹರ್ಜೋತ್ ಸಿಂಗ್ ಬೈನ್ಸ್, ಬಾಬಾ ಬಕಾಲದಿಂದ ದಲ್ಬೀರ್ ಸಿಂಗ್ ಟಾಂಗ್, ಸರ್ದುಲ್‌ಗಢದಿಂದ ಗುರುಪ್ರೀತ್ ಸಿಂಗ್ ಬನಾವಾಲಿ, ಸತ್ರಾನಾದಿಂದ ಕುಲ್ವಂತ್ ಸಿಂಗ್ ಬಾಜಿಗರ್, ಛಬ್ಬೇವಾಲ್‌ನಿಂದ ಹರ್ಮಿಂದರ್ ಸಿಂಗ್ ಸಂಧು, ಬಾಲಾಚೌರ್‌ನಿಂದ ಸಂತೋಷ್ ಕಟಾರಿಯಾರ್ ಮತ್ತು ಸಿಂಗ್ ಸುಖಾನಂದ್, ಭುಚೋ ಮಂಡಿಯಿಂದ ಮಸ್ಟರ್ ಜಗ್‌ಸೀರ್ ಸಿಂಗ್, ಜೈತುದಿಂದ ಅಮೋಲಾಕ್ ಸಿಂಗ್ ಮತ್ತು ಪಟಿಯಾಲಾ ಗ್ರಾಮಾಂತರದಿಂದ ಡಾ.ಬಲ್ವೀರ್ ಸಿಂಗ್ ಅವರ ಹೆಸರುಗಳನ್ನು ಸೇರಿಸಲಾಗಿದೆ.

Punjab Election 2022: AAP released third list of candidates

ಇದಕ್ಕೂ ಮೊದಲು ನವೆಂಬರ್ ಡಿಸೆಂಬರ್ ನಲ್ಲಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎರಡನೇ ಪಟ್ಟಿಯನ್ನು ಡಿಸೆಂಬರ್ 10 ರಂದು ಬಿಡುಗಡೆ ಮಾಡಲಾಯಿತು. ಡಿಸೆಂಬರ್ 10 ರಂದು ಆಮ್ ಆದ್ಮಿ ಪಕ್ಷ ಪಂಜಾಬ್ ಚುನಾವಣೆಗೆ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ನಂತರ ಪಕ್ಷವು ಇತರ 30 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. 30 ಅಭ್ಯರ್ಥಿಗಳ ಪಟ್ಟಿಯಲ್ಲಿ ಪಕ್ಷ ವಿಶ್ವಾಸವಿಟ್ಟು ಮತ್ತೆ ಟಿಕೆಟ್ ನೀಡಿದ ಕೆಲವರಿದ್ದಾರೆ. ಪಠಾಣ್‌ಕೋಟ್ ವಿಧಾನಸಭಾ ಕ್ಷೇತ್ರದಿಂದ ವಿಭೂತಿ ಶರ್ಮಾ, ಗುರುದಾಸ್‌ಪುರದಿಂದ ರಾಮನ್ ಬಹೆಲ್ ಮತ್ತು ದೀನಾ ನಗರದಿಂದ (ಎಸ್‌ಸಿ) ಶಂಶೇರ್ ಸಿಂಗ್ ಕಣಕ್ಕಿಳಿದಿದ್ದಾರೆ.

ಅಲ್ಲದೆ, ಖಾಡಿಯನ್ ವಿಧಾನಸಭಾ ಕ್ಷೇತ್ರದಿಂದ ಜಗ್ರೂಪ್ ಸಿಂಗ್ ಶೇಖವಾನ್, ಫತೇಘರ್ ಚುರಿಯನ್‌ನಿಂದ ಬಲ್ಬೀರ್ ಸಿಂಗ್ ಪನ್ನು, ಅಮೃತಸರ ಉತ್ತರದಿಂದ ಕುನ್ವರ್ ವಿಜಯ್ ಪ್ರತಾಪ್, ಅಮೃತಸರ ದಕ್ಷಿಣದಿಂದ ಡಾ ಇಂದರ್‌ಬೀರ್ ಸಿಂಗ್ ನಿಜ್ಜರ್, ಬಟಾಲಾದಿಂದ ಶೆರ್ರಿ ಕಲ್ಸಿ, ಪಟ್ಟಿಯಿಂದ ಲಾಲ್ಜಿತ್ ಸಿಂಗ್ ಭುಲ್ಲರ್, ಕರ್ತಾರ್‌ಪುರದಿಂದ ಡಿಸಿಪಿ (ಎಸ್‌ಸಿ). ಬಾಲ್ಕರ್ ಸಿಂಗ್, ಶಾಮ್ ಚೌರಾಸಿ (SC) ನಿಂದ ಡಾ. ರಾವ್ಜೋತ್ ಸಿಂಗ್, ನವನ್ ಶಹರ್‌ನಿಂದ ಲಲಿತ್ ಮೋಹನ್ 'ಬಲ್ಲು' ಪಾಠಕ್, ಖರಾರ್‌ನಿಂದ ಅನ್ಮೋಲ್ ಗಗನ್ ಮಾನ್ ಮತ್ತು ಲುಧಿಯಾನ ಪೂರ್ವದಿಂದ ದಲ್ಜತ್ ಸಿಂಗ್ 'ಭೋಲಾ' ಗ್ರೆವಾಲ್ ಸ್ಪರ್ಧಿಸಲಿದ್ದಾರೆ.

Punjab Election 2022: AAP released third list of candidates

ಆಮ್ ಆದ್ಮಿ ಪಕ್ಷ ಕಳೆದ ತಿಂಗಳು ನವೆಂಬರ್ 12 ರಂದು ಪಂಜಾಬ್ ವಿಧಾನಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಮೊದಲ ಪಟ್ಟಿಯಲ್ಲಿ 10 ಅಭ್ಯರ್ಥಿಗಳ ಹೆಸರನ್ನು ಪ್ರಕಟಿಸಲಾಗಿತ್ತು. ಪಕ್ಷದ ಮೊದಲ ಪಟ್ಟಿಯಲ್ಲಿ ಯಾವುದೇ ಹೊಸ ಮುಖವನ್ನು ಸೇರಿಸಿಲ್ಲ. ಪಂಜಾಬ್ ವಿಧಾನಸಭೆಯಲ್ಲಿ ಎಎಪಿ ಮುಖ್ಯಸ್ಥರಾಗಿರುವ ಹರ್ಪಾಲ್ ಸಿಂಗ್ ಅವರಿಗೆ ದಿರ್ಬಾದಿಂದ ಟಿಕೆಟ್ ನೀಡಲಾಗಿದೆ.

ಪಕ್ಷವು ತನ್ನ ಮೊದಲ ಪಟ್ಟಿಯಲ್ಲಿ ಗರ್ಶಂಕರ್‌ನಿಂದ ಜೈ ಕಿಶನ್ ರೋಡಿ, ಜಾಗರೌನ್‌ನಿಂದ ಸರ್ವಜಿತ್ ಕೌರ್ ಮನುಕೆ, ಕೊಟ್ಕಾಪುರದಿಂದ ಕುಲ್ತಾರ್ ಸಿಂಗ್ ಸಂಧ್ವಾ, ನಿಹಾಲ್ ಸಿಂಗ್ ವಾಲಾದಿಂದ ಮಂಜಿತ್ ಬಿಲಾಸ್‌ಪುರ್, ಬುಧ್ಲಾದದಿಂದ ಪ್ರಾಂಶುಪಾಲ ಬುಧ್ರಾಮ್, ತಲ್ವಂಡಿ ಸಾಬೊದಿಂದ ಬಲ್ಜಿಂದರ್ ಕೌರ್, ಧೀರ್ಬಾದಿಂದ ಹರ್ಪಾಲ್ ಸಿಂಗ್, ಚೀಮಾ ಬರ್ನಾಲಾದಿಂದ ಗುರ್ಮೀತ್ ಸಿಂಗ್, ಸುನಮ್‌ನಿಂದ ಅಮನ್ ಅರೋರಾ ಮತ್ತು ಮೆಹಲ್ ಕಲಾನ್‌ನಿಂದ ಕುಲ್ವಂತ್ ಪಂಡೋರಿ ಅವರನ್ನು ಕಣಕ್ಕಿಳಿಸಲಿದೆ.

English summary
Aam Aadmi Party (AAP) has released the third list of candidates for the Punjab Assembly elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X