• search
  • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಾಂಗ್ರೆಸ್‌ನಲ್ಲಿಯೂ ಶುರುವಾಯ್ತು ಸಿಧು ರಂಪಾಟ: ಸಿಎಂ ವಿರುದ್ಧ ಗರಂ

|

ಚಂಡೀಗಡ, ಮೇ 17: ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ ಪಕ್ಷದಿಂದ ಹೊರಬಂದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು, ಈಗ ಸ್ವಪಕ್ಷದ ವಿರುದ್ಧವೇ ಕಿಡಿಕಾರಿದ್ದಾರೆ.

ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಸಿಧು ಮತ್ತು ಅವರ ಪತ್ನಿ ಇಬ್ಬರೂ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮೇಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದ, ಬಿಜೆಪಿ ಕುರಿತು ನಿರಂತರ ಟೀಕಾಪ್ರಹಾರ ನಡೆಸುತ್ತಿದ್ದ ಸಿಧು, ತಮ್ಮದೇ ಪಕ್ಷದ ವಿರುದ್ಧ ತಿರುಗಿಬಿದ್ದಂತಾಗಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ತಮಗೆ ಅಮೃತಸರ ಕ್ಷೇತ್ರದಿಂದ ಲೋಕಸಭೆಗೆ ಟಿಕೆಟ್ ನೀಡುವಂತೆ ಕೋರಲಾಗಿತ್ತು. ಆದರೆ, ಅದನ್ನು ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಿರಸ್ಕರಿಸಿದ್ದರು ಎಂದು ಸಿಧು ಪತ್ನಿ ನವಜೋತ್ ಕೌರ್ ಸಿಧು ಆರೋಪಿಸಿದ್ದಾರೆ. ಈ ಆರೋಪವನ್ನು ಅಮರಿಂದರ್ ಸಿಂಗ್ ಅಲ್ಲಗಳೆದಿದ್ದಾರೆ. ಅಮರಿಂದರ್ ವಿರುದ್ಧ ಹರಿಹಾಯ್ದಿರುವ ಸಿಧು, ತಮ್ಮ ಪತ್ನಿ ಎಂದಿಗೂ ಸುಳ್ಳು ಹೇಳುವವರಲ್ಲ ಎಂದಿದ್ದಾರೆ.

ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಮತ್ತು ರಾಜ್ಯದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಉಸ್ತುವಾರಿ ಆಶಾ ಕುಮಾರಿ ಇಬ್ಬರೂ ಸೇರಿ ತಮಗೆ ಲೋಕಸಭೆ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸಿದ್ದರು ಎಂದು ನವಜೋತ್ ಕೌರ್ ಆರೋಪಿಸಿದ್ದರು.

ರಾಹುಲ್ ಗಾಂಧಿ ಫಿರಂಗಿ, ನಾನು AK 47: ಸಿಧು ಸಿಡಿಗುಂಡು!

ಇದಕ್ಕೂ ಮೊದಲು, ಕೌರ್ ಅವರು ಚಂಡೀಗಡದಿಂದ ಸ್ಪರ್ಧಿಸಲು ಬಯಸಿದ್ದರು. ಆದರೆ ಅವರಿಗೆ ಟಿಕೆಟ್ ನಿರಾಕರಿಸಿದ್ದ ಪಕ್ಷ, ಮಾಜಿ ಸಚಿವ ಪವನ್ ಕುಮಾರ್ ಬನ್ಸಾಲ್ ಅವರಿಗೆ ಟಿಕೆಟ್ ನೀಡಿತ್ತು ಎನ್ನಲಾಗಿತ್ತು.

ಅರ್ಹತೆ ಇಲ್ಲ ಎಂದು ಟಿಕೆಟ್ ನಿರಾಕರಣೆ

ಅರ್ಹತೆ ಇಲ್ಲ ಎಂದು ಟಿಕೆಟ್ ನಿರಾಕರಣೆ

'ನನಗೆ ಎಂಟಿ ಟಿಕೆಟ್ ನೀಡುವಷ್ಟು ಅರ್ಹತೆ ಇಲ್ಲ ಎಂದು ಅಮರಿಂದರ್ ಸಿಂಗ್ ಮತ್ತು ಆಶಾ ಕುಮಾರಿ ಅಂದುಕೊಂಡಿದ್ದಾರೆ. ಅಮೃತಸರದಿಂದ ನನಗೆ ಗೆಲ್ಲುವ ಸಾಮರ್ಥ್ಯ ಇಲ್ಲ ಎಂಬ ಕಾರಣಕ್ಕೆ ಟಿಕೆಟ್ ನಿರಾಕರಿಸಲಾಯಿತು. ಕ್ಯಾಪ್ಟನ್ ಅಮರಿಂದರ್ ಅವರು ಮಹಿಳೆಯರನ್ನು ಗೌರವಿಸಬೇಕು. ಮಹಿಳೆಯರ ಮೀಸಲಾತಿ ನೀಡುವ ಬಗ್ಗೆ ಮಾತನಾಡುತ್ತೀರಿ. ಹಾಗಾದರೆ ಇದನ್ನು ಪರಿಗಣಿಸಿ. ನನ್ನಂತಹ ವಿದ್ಯಾವಂತ ನಾಯಕಿಯರು ಸೇವೆ ಸಲ್ಲಿಸಲು ಸಿದ್ಧರಿದ್ದಾಗ ಯಾರು ಉತ್ತಮರು ಎಂದು ನಮಗೆ ಹೇಳುವುದು ಒಂದು ಶಿಸ್ತು. ಆದರೆ, ಸುಳ್ಳು ಹೇಳಿಕೆ ನಮಗೆ ಟಿಕೆಟ್ ನಿರಾಕರಿಸಬೇಡಿ' ಎಂದು ನವಜೋತ್ ಕೌರ್ ವಾಗ್ದಾಳಿ ನಡೆಸಿದ್ದರು.

ಮಾತಾಡಿ ಮಾತಾಡಿ ನವಜೋತ್ ಸಿಂಗ್ ಸಿಧು ಗಂಟಲಿಗೆ ಗಾಯ

ನನ್ನ ಪಾತ್ರವೇನೂ ಇಲ್ಲ

ಇದಕ್ಕೆ ಪ್ರತಿಕ್ರಿಯೆ ನೀಡಿದ ಅಮರಿಂದರ್ ಸಿಂಗ್, ಟಿಕೆಟ್ ಹಂಚಿಕೆ ಮಾಡುವುದು ದೆಹಲಿಯಲ್ಲಿರುವ ಹೈಕಮಾಂಡ್. ನವಜೋತ್ ಕೌರ್ ಅವರು ಚಂಡೀಗಡದಿಂದ ಸ್ಪರ್ಧಿಸಲು ಟಿಕೆಟ್ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅಂಗೀಕರಿಸದೆ ಇರಲು ಹೈಕಮಾಂಡ್ ತೀರ್ಮಾನಿಸಿತ್ತು. ಚಂಡೀಗಡ ಕ್ಷೇತ್ರವು ಪಂಜಾಬ್ ಅಡಿಯಲ್ಲಿ ಬರುವುದಿಲ್ಲ. ಹೀಗಾಗಿ ಅಲ್ಲಿನ ಅಭ್ಯರ್ಥಿಯ ಆಯ್ಕೆಯಲ್ಲಿ ನನ್ನ ಪಾತ್ರ ಏನೂ ಇಲ್ಲ ಎಂದು ಹೇಳಿದ್ದಾರೆ.

ಮೋದಿ, ಅಂಬಾನಿ-ಅದಾನಿಯ ಬಿಜಿನೆಸ್ ಮ್ಯಾನೇಜರ್: ಸಿಧು ಟೀಕೆ

ಅಮೃತಸರ ಆಫರ್ ನೀಡಲಾಗಿತ್ತು

ಅಮೃತಸರ ಆಫರ್ ನೀಡಲಾಗಿತ್ತು

'ಆದರೆ, ಅಲ್ಲಿಗೆ ಅಭ್ಯರ್ಥಿ ಆಯ್ಕೆಯ ಕುರಿತಂತೆ ನನ್ನ ಸಲಹೆ ಕೇಳಿದಾಗ ನಾನು ಪ್ರಾಮಾಣಿಕವಾಗಿ ಪವನ್ ಬನ್ಸಾಲ್ ಅವರ ಹೆಸರು ಸೂಚಿಸಿದ್ದೆ. ಅವರು ಉತ್ತಮ ಆಯ್ಕೆಯಾಗಿದ್ದರು. ನವಜೋತ್ ಅವರಿಗೆ ಅಮೃತಸರ ಮತ್ತು ಬತಿಂಡಾದಿಂದ ಸ್ಪರ್ಧಿಸಲು ಆಹ್ವಾನ ನೀಡಲಾಗಿತ್ತು. ಆದರೆ ಅದನ್ನು ಅವರು ನಿರಾಕರಿಸಿದ್ದರು' ಎಂದು ಅಮರಿಂದರ್ ಆರೋಪಿಸಿದ್ದಾರೆ.

ಪತ್ನಿ ಪರ ಸಿಧು ಬ್ಯಾಟಿಂಗ್

ಪತ್ನಿ ಪರ ಬ್ಯಾಟ್ ಬೀಸಿರುವ ನವಜೋತ್ ಸಿಂಗ್ ಸಿಧು, 'ನನ್ನ ಹೆಂಡತಿ ಧೈರ್ಯಸ್ಥೆಯಾಗಿದ್ದು, ಆಕೆ ಎಂದಿಗೂ ಸುಳ್ಳು ಹೇಳುವುದಿಲ್ಲವಾದ್ದರಿಂದ ನೈತಿಕ ಅಧಿಕಾರವಿದೆ' ಎಂದು ಹೇಳಿದ್ದಾರೆ. ಈ ಮೂಲಕ ಪತ್ನಿಯನ್ನು ಬೆಂಬಲಿಸಿರುವ ಅವರು, ಅಮರಿಂದರ್ ಸಿಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

English summary
Lok Sabha elections 2019: Wife of Navjot Singh Sidhu, Navjot Kaur alleged that Punjab CM Amarinder Singh and State Congress general secretary Asha Kumari had denied tickets to her from Amritsar. Amarinder rejected the allegations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more