ಪಂಜಾಬ್: ಎಎಪಿ ಶಾಸಕ ಬಲ್ದೇವ್ ಸಿಂಗ್ ರಾಜೀನಾಮೆ
ಚಂಡಿಗಢ, ಜನವರಿ 16: ಪಂಜಾಬಿನ ಆಮ್ ಆದ್ಮಿ ಪಕ್ಷದ ನಾಯಕ ಬಲ್ದೇವ್ ಸಿಂಗ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುವ ಮೂಲಕ AAP ನಾಯಕರಿಗೆ ಭಾರೀ ಆಘಾತ ನೀಡಿದ್ದಾರೆ.
ಪಂಜಾಬಿನ ಜೈಟೋ ವಿಧಾನಸಭಾ ಕ್ಷೇತ್ರದ ಸದಸ್ಯರಾದ ಬಲ್ದೇವ್ ಸಿಂಗ್ ಅವರು, ಪಕ್ಷದ ಇಬ್ಬಂದಿ ನೀತಿಯಿಂದ ಬೇಸತ್ತು ರಾಜೀನಾಮೆ ನೀಡಿರುವುದಾಗಿ ಹೇಳಿಕೊಂಡಿದ್ದಾರೆ.
"ನಾನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ರಾಜೀನಾಮೆ ನೀಡುತ್ತಿರುವುದಾಗಿ ಈ ಮೂಲಕ ತಿಳಿಸಲು ವಿಷಾದಿಸುತ್ತೇನೆ. ಆದರೆ ಪಕ್ಷ ತನ್ನ ಮೂಲ ತತ್ವ ಮತ್ತು ಆದರ್ಶವನ್ನು ಮರೆತಿದೆ. ಪಕ್ಷದಲ್ಲಿ ಸರ್ವಾಧಿಕಾರಿ ಮನೋಭಾವ ತಲೆದೂರಿದೆ. ನನಗೆ ರಾಜೀನಾಮೆ ನೀಡದೆ ಬೇರೆ ದಾರಿ ಇರಲಿಲ್ಲ" ಎಂದು ಸಿಂಗ್ ಹೇಳಿದ್ದಾರೆ.

ಇದೇ ತಿಂಗಳು ಅಂದರೆ ಜನವರಿ 06 ರಂದು ಆಮ್ ಆದ್ಮಿ ಪಕ್ಷದ ಶಾಸಕ ಸುಖ್ಪಾಲ್ ಖೈರಾ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಅವರೂ ಸಹ 'ಪಕ್ಷದ ಮುಖಂಡ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸರ್ವಾಧಿಕಾರಿ ಪ್ರವೃತ್ತಿಯೇ ರಾಜೀನಾಮೆಗೆ ಕಾರಣ' ಎಂದಿದ್ದರು.












Click it and Unblock the Notifications