• search
  • Live TV
ಚಂಡೀಗಢ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಪಂಜಾಬ್ ಚುನಾವಣೆ ಹೊಸ್ತಿಲಿನಲ್ಲೇ ಗ್ರಾಹಕರಿಗೆ ಬಂಪರ್: ವಿದ್ಯುತ್ ಬೆಲೆಯಲ್ಲಿ 3 ರೂ. ಕಡಿತ

|
Google Oneindia Kannada News

ಚಂಡೀಗಢ, ನವೆಂಬರ್ 1: ಪಂಜಾಬ್ ವಿಧಾನಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ರಾಜ್ಯದ ಜನರಿಗೆ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಛನ್ನಿ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ. ರಾಜ್ಯದಲ್ಲಿ ಒಂದು ಯೂನಿಟ್ ವಿದ್ಯುತ್ ದರದ ಮೇಲೆ 3 ರೂಪಾಯಿ ಕಡಿತಗೊಳಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಣೆಗೆ ಪಂಜಾಬ್ ಸಿಎಂ ಚರಂಜಿತ್ ಸಿಂಗ್ ಛನ್ನಿ ತಿರುಗೇಟು ನೀಡಿದ್ದಾರೆ. ರಾಜ್ಯದ ಜನರಿಗೆ ಕಡಿಮೆ ದರದಲ್ಲಿ ವಿದ್ಯುತ್ ನೀಡಬೇಕೇ ವಿನಃ ಉಚಿತವಾಗಿ ನೀಡುವುದಲ್ಲ ಎಂದು ಹೇಳಿದ್ದಾರೆ. ಈ ಹಿಂದೆ ಪಂಜಾಬಿನಲ್ಲಿ ಪ್ರಚಾರದ ವೇಳೆ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೆ ಜನರಿಗೆ ಉಚಿತವಾಗಿ ವಿದ್ಯುತ್ ಸೇವೆ ಒದಗಿಸಲಾಗುವುದು ಎಂದು ಕೇಜ್ರಿವಾಲ್ ಘೋಷಿಸಿದ್ದರು.

ಕಾಂಗ್ರೆಸ್‌ಗೆ ಮತ್ತೆ ಸೇರುವ ವದಂತಿ: 'ಹೊಂದಾಣಿಕೆ ಸಮಯ ಮುಗಿದಿದೆ' ಎಂದ ಅಮರೀಂದರ್‌ಕಾಂಗ್ರೆಸ್‌ಗೆ ಮತ್ತೆ ಸೇರುವ ವದಂತಿ: 'ಹೊಂದಾಣಿಕೆ ಸಮಯ ಮುಗಿದಿದೆ' ಎಂದ ಅಮರೀಂದರ್‌

ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಚರಂಜಿತ್ ಸಿಂಗ್ ಛನ್ನಿ, ರಾಜ್ಯದ ಶೇ.95ರಷ್ಟು ಜನರಿಗೆ ಒದಗಿಸುವ ವಿದ್ಯುತ್ ದರದಲ್ಲಿ ಪ್ರತಿ ಯೂನಿಟ್ ಮೇಲೆ 3 ರೂಪಾಯಿ ಕಡಿತಗೊಳಿಸಲಾಗುವುದು ಎಂದು ಹೇಳಿದರು.

ಪಂಜಾಬ್ ವಿಧಾನಸಭೆ ಚುನಾವಣೆ ಮೇಲೆ ಕಣ್ಣು:

ಮುಂಬರುವ 2022ರಲ್ಲಿ ಪಂಜಾಬ್ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್, ಬಿಜೆಪಿ, ಶಿರೋಮಣಿ ಅಕಾಲಿ ದಳ ಹಾಗೂ ಆಪ್ ಆದ್ಮಿ ಪಕ್ಷ ಸೇರಿದಂತೆ ಬಹುತೇಕ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.

ವಿದ್ಯುತ್ ಶುಲ್ಕವೇ ಚುನಾವಣಾ ಅಸ್ತ್ರ:

ಪಂಜಾಬಿಗರಿಗೆ ವಿದ್ಯುತ್ ಶುಲ್ಕ ಎಂಬುದು ಬಹುಮುಖ್ಯ ಎನಿಸುತ್ತದೆ. ಹೀಗಾಗಿ ವಿದ್ಯುತ್ ಶುಲ್ಕ ಕಡಿತ ಹಾಗೂ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡುವ ಬಗ್ಗೆ ನಾಯಕರು ಚರ್ಚೆ ನಡೆಸುತ್ತಿದ್ದರು. ಇದರ ಮಧ್ಯೆ ರಾಜ್ಯದಲ್ಲಿ ವಿದ್ಯುತ್ ಶುಲ್ಕವು ಪ್ರಮುಖ ಚುನಾವಣಾ ಅಸ್ತ್ರವಾಗಿದ್ದು, ಇದನ್ನು ಮನಗಂಡ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಪ್ರತಿವರ್ಷ ವಿದ್ಯುತ್ ಸಬ್ಸಿಡಿಗಾಗಿ 3,316 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತದೆ ಎಂದು ಛನ್ನಿ ಹೇಳಿದ್ದಾರೆ.

"ಪಂಜಾಬ್ ಈಗಾಗಲೇ ವಿದ್ಯುತ್ ಸಬ್ಸಿಡಿಗಾಗಿ 10,628 ಕೋಟಿಗಳನ್ನು ಭರಿಸುತ್ತದೆ. ಈಗ ಒಟ್ಟು ಸಬ್ಸಿಡಿಗೆ 14,000 ಕೋಟಿ ರೂಪಾಯಿ ಖರ್ಚು ಮಾಡಲಾಗುತ್ತದೆ. ಇದು ದೆಹಲಿಯು ಖರ್ಚು ಮಾಡುವುದಕ್ಕಿಂತ ಏಳು ಪಟ್ಟು ಹೆಚ್ಚಾಗಿದೆ. ದೆಹಲಿ ಕೇವಲ 2,200 ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತದೆ" ಎಂದು ಛನ್ನಿ ಹೇಳಿದ್ದಾರೆ.

ಪ್ರತಿ ಯೂನಿಟ್ ಬೆಲೆ 1.19 ರೂಪಾಯಿ:

ಭಾನುವಾರವರೆಗೂ ಪಂಜಾಬ್ ನಲ್ಲಿ 100 ಯೂನಿಟ್ ವರೆಗೆ ಪ್ರತಿ ಯೂನಿಟ್ ವಿದ್ಯುತ್ ಬೆಲೆ 4.19 ರೂಪಾಯಿ ಆಗಿತ್ತು. ಆದರೆ ಸೋಮವಾರದಿಂದಲೇ ಹೊಸ ದರ ಜಾರಿಗೆ ಬರಲಿದ್ದು, ಪ್ರತಿ ಯೂನಿಟ್ ಮೇಲೆ 3 ರೂಪಾಯಿ ಕಡಿತಗೊಳಿಸಲಾಗಿದೆ. ಈಗ ರಾಜ್ಯದಲ್ಲಿ ಪ್ರತಿ ಯೂನಿಟ್ ಬೆಲೆ 1.19 ರೂಪಾಯಿ ಆಗಿದೆ. ಅದೇ ರೀತಿ 100 ರಿಂದ 300 ಯೂನಿಟ್ ವರೆಗೆ ಪ್ರತಿ ಯೂನಿಟ್ ಮೇಲೆ ಮೊದಲು 7 ರೂಪಾಯಿ ಚಾರ್ಜ್ ಮಾಡಲಾಗುತ್ತಿದ್ದು, ಈಗ ಅದರ ಬೆಲೆ 4 ರೂಪಾಯಿ ಆಗುತ್ತದೆ. 300 ಯೂನಿಟ್ ಗಿಂತ ಹೆಚ್ಚು ಬಳಕೆಯಾದ ಪ್ರತಿ ಯೂನಿಟ್ ಮೇಲೆ 8.76 ರೂಪಾಯಿ ವಿಧಿಸಲಾಗುತ್ತಿದ್ದು, ಅದರ ಬೆಲೆಯು ಈಗ 5.76 ರೂಪಾಯಿಗೆ ಇಳಿಕೆಯಾಗಿದೆ.

ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆ ಹೆಚ್ಚಳ:

ವಿದ್ಯುತ್ ಬಿಲ್ ಕಡಿತಗೊಳಿಸಿರುವುದರ ಜೊತೆಗೆ ರಾಜ್ಯ ಸರ್ಕಾರಿ ನೌಕರರಿಗೆ ಮುಖ್ಯಮಂತ್ರಿ ಚರೀಂಜಿತ್ ಸಿಂಗ್ ಛನ್ನಿ ಬಂಪರ್ ಗಿಫ್ಟ್ ಕೊಟ್ಟಿದ್ದಾರೆ. ರಾಜ್ಯ ಸರ್ಕಾರಿ ನೌಕರರ ತುಟ್ಟಿಭತ್ಯೆಯನ್ನು ಶೇ.11ರಷ್ಟು ಹೆಚ್ಚಿಸಲಾಗಿದ್ದು, ಅದಕ್ಕಾಗಿ 440 ಕೋಟಿ ರೂಪಾಯಿ ಮೀಸಲು ಇರಿಸಲಾಗಿದೆ.

English summary
Power Rates Cuts By 3 Rupees For Consumers In Punjab Ahead Of Assembly Election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X