ಪಂಜಾಬ್‌ನಲ್ಲಿ ಡಬಲ್ ಇಂಜಿನ್ ಸರ್ಕಾರ ರಚನೆಯಾಗಬೇಕು: ಮೋದಿ

ಚಂಡೀಗಢ, ಫೆಬ್ರವರಿ 17: ಪಂಜಾಬ್‌ನಲ್ಲಿ ಡಬಲ್ ಇಂಜಿನ್ ಸರ್ಕಾರ ರಚನೆಯಾಗಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆಶಯ ವ್ಯಕ್ತಪಡಿಸಿದ್ದಾರೆ.

ಪಂಜಾಬ್‌ನಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತಣಾಡಿದ ಅವರು, 'ಡಬಲ್ ಇಂಜಿನ್ ಸರ್ಕಾರ ಎಂದರೆ, ಈ ದಶಕದಲ್ಲಿ ಪಂಜಾಬ್‌ನ ವೇಗದ ಅಭಿವೃದ್ಧಿ. ಪಂಜಾಬ್ ನಿಂದ ಮರಳು ಮಾಫಿಯಾ, ಡ್ರಗ್ ಮಾಫಿಯಾ ವಿದಾಯ. ಪಂಜಾಬ್‌ನ ಕೈಗಾರಿಕಾ ಘಟಕಗಳಲ್ಲಿ ಹೊಸ ಶಕ್ತಿ. ಪಂಜಾಬ್‌ನ ಯುವಕರಿಗೆ ಉದ್ಯೋಗ, ಸ್ವಯಂ ಉದ್ಯೋಗಕ್ಕೆ ಹೊಸ ಅವಕಾಶಗಳು ಎಂದು ಹೇಳಿದ್ದಾರೆ.

ಪಂಜಾಬ್ ಸಿಎಂ ಚನ್ನಿ ಅವರ 'ಯುಪಿ-ಬಿಹಾರದ ಭಯ್ಯಾ' ಹೇಳಿಕೆಗೆ ಪ್ರಧಾನಿ ಮೋದಿ ತಿರುಗೇಟು ನೀಡಿದ್ದಾರೆ. 'ಕಾಂಗ್ರೆಸ್ ಯಾವಾಗಲೂ ಒಂದು ಪ್ರದೇಶದ ಜನರ ವಿರುದ್ಧ ಮತ್ತೊಂದು ಪ್ರದೇಶದ ವಿರುದ್ಧ ಹೋರಾಡುತ್ತಿದೆ. ದೆಹಲಿಯ ಕುಟುಂಬದವರು ಅವರ ಜೊತೆಯಲ್ಲಿ ನಿಂತು ಚಪ್ಪಾಳೆ ತಟ್ಟುವಂತೆ ಇಲ್ಲಿನ ಕಾಂಗ್ರೆಸ್ ಮುಖ್ಯಮಂತ್ರಿ ನೀಡಿದ ಹೇಳಿಕೆಯನ್ನು ಇಡೀ ದೇಶವೇ ನೋಡಿದೆ. ಇವರ ಹೇಳಿಕೆಗಳಿಂದ ಯಾರನ್ನು ಅವಮಾನಿಸುತ್ತಿದ್ದಾರೆ? ಉತ್ತರ ಪ್ರದೇಶ ಅಥವಾ ಬಿಹಾರದ ನಮ್ಮ ಸಹೋದರ ಸಹೋದರಿಯರು ಕಷ್ಟಪಟ್ಟು ದುಡಿಯದಂತಹ ಹಳ್ಳಿ ಇಲ್ಲಿ ಇರುವುದಿಲ್ಲ.

Modi Urged Voters To bring The BJP-led Alliance To Power In Punjab

ಫೆಬ್ರವರಿ 20 ರಂದು ಪಂಜಾಬ್ ವಿಧಾನಸಭೆ ಚುನಾವಣೆಗೆ ಮತದಾನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಫಜಿಲ್ಕಾದಲ್ಲಿ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಆಡಳಿತಾರೂಢ ಕಾಂಗ್ರೆಸ್ ಮತ್ತು ಸಿಎಂ ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಗುರಿಯಾಗಿಸಿದರು. ಈ ವೇಳೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಆಮ್ ಆದ್ಮಿ ಪಕ್ಷದ ವಿರುದ್ಧವೂ ಪ್ರಧಾನಿ ವಾಗ್ದಾಳಿ ನಡೆಸಿದರು.

'ದೇಶದ 50 ಕೋಟಿ ಜನರು ಆಯುಷ್ಮಾನ್ ಭಾರತ್ ಯೋಜನೆಯ ಪ್ರಯೋಜನವನ್ನು ಪಡೆಯುತ್ತಿದ್ದಾರೆ. ಆಯುಷ್ಮಾನ್ ಭಾರತ್ ಕಾರ್ಡ್‌ನೊಂದಿಗೆ, ಪಂಜಾಬ್‌ನ ನಾಗರಿಕರು ಭಾರತದಲ್ಲಿ ಎಲ್ಲಿ ಬೇಕಾದರೂ ಹೋಗುತ್ತಾರೆ, ಅವರಿಗೆ ಉಚಿತ ಚಿಕಿತ್ಸೆ ಸಿಗುತ್ತದೆ.

ಇನ್ನೂ ಒಂದು ದುಃಖದ ಸಂಗತಿ ಎಂದರೆ ಆಯುಷ್ಮಾನ್ ಕಾರ್ಡ್ ಇದ್ದರೆ ಭೋಪಾಲ್, ಅಹಮದಾಬಾದ್, ಲಕ್ನೋಗೆ ಹೋಗಿ ಚಿಕಿತ್ಸೆ ಕೊಡಿಸುತ್ತೇವೆ, ಆದರೆ ದೆಹಲಿಗೆ ಹೋಗಿ ಅಲ್ಲಿ ಕುಳಿತಿರುವ ಮುಖ್ಯಮಂತ್ರಿ ಚಿಕಿತ್ಸೆ ನಿರಾಕರಿಸುತ್ತಾರೆ. ಏಕೆಂದರೆ ಅವರು ಈ ಯೋಜನೆಯೊಂದಿಗೆ ಸೇರಲು ಸಿದ್ಧರಿಲ್ಲ. ನೀವು ದೆಹಲಿ ಪ್ರವೇಶಿಸುವುದು ಬೇಡವೆಂದವರು ಮತ ಕೇಳುತ್ತಿದ್ದಾರೆ. ಅಂಥವರಿಗೆ ಪಂಜಾಬ್‌ನಲ್ಲಿ ಏನಾದರೂ ಮಾಡುವ ಹಕ್ಕಿದೆಯೇ?

ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, 'ಈ ಚುನಾವಣೆಯಲ್ಲಿ ಪಂಜಾಬ್‌ನಲ್ಲಿ ಇದು ನನ್ನ ಕೊನೆಯ ಕಾರ್ಯಕ್ರಮವಾಗಿದೆ. ಕಳೆದ ಕೆಲವು ದಿನಗಳಲ್ಲಿ ನಾನು ಪಂಜಾಬ್‌ನ ವಿವಿಧ ಪ್ರದೇಶಗಳಿಗೆ ಹೋಗಿದ್ದೇನೆ. ಇಂದು ಇಡೀ ಪಂಜಾಬ್‌ನಲ್ಲಿ ಒಂದೇ ಧ್ವನಿ ಏಳುತ್ತಿದೆ, ಬಿಜೆಪಿ ಗೆಲ್ಲಬೇಕು, ಎನ್‌ಡಿಎ ಗೆಲ್ಲಬೇಕು ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+