ಮೋದಿಯನ್ನು ದುರ್ಯೋಧನನಿಗೆ ಹೋಲಿಸಿದ ಪ್ರಿಯಾಂಕಾ ಗಾಂಧಿ

ಅಂಬಾಲ, ಮೇ 7: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ದೇಶದ ನಂಬರ್ ಒನ್ ಭ್ರಷ್ಟಾಚಾರಿಯಾಗಿ ಅಂತ್ಯಕಂಡವರು ಎಂದು ಹೇಳಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಪ್ರಿಯಾಂಕಾ ಗಾಂಧಿ ವಾಗ್ದಾಳಿ ನಡೆಸಿದರು.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಹರಿಯಾಣದ ಅಂಬಾಲಾದಲ್ಲಿ ಮಂಗಳವಾರ ಚುನಾವಣಾ ಪ್ರಚಾರ ನಡೆಸಿದ ಅವರು, ಮೋದಿ ಅವರನ್ನು ಮಹಾಭಾರತದ ದುರ್ಯೋಧನನಿಗೆ ಹೋಲಿಸಿದರು.

'ನಮ್ಮ ಕುಟುಂಬದ ಹುತಾತ್ಮರ (ರಾಜೀವ್ ಗಾಂಧಿ) ಕುರಿತು ಮಾತನಾಡಿದ್ದಾರೆ. ಈ ಚುನಾವಣೆಯು ಒಂದು ಕುಟುಂಬದ ಕುರಿತಾಗಿದ್ದಲ್ಲ, ಆದರೆ ಬಿಜೆಪಿ ಸರ್ಕಾರದ ವೈಫಲ್ಯದ ಕುರಿತದ್ದಾಗಿದೆ. ರೈತರ ಸಮಸ್ಯೆಗಳನ್ನು ಆಲಿಸಲು ಪ್ರಧಾನಿಗೆ ಸಮಯವಿಲ್ಲ. ಆದರೆ, ನನ್ನ ಕುಟುಂಬದ ಹುತಾತ್ಮರ ಹೆಸರನ್ನು ಹೇಳಿಕೊಂಡು ಮತ ಕೇಳಲು ಅವರಿಗೆ ಸಮಯವಿದೆ' ಎಂದು ಟೀಕಿಸಿದರು.

Lok Sabha elections 2019 priyanka gandhi compared narendra modi with Duryodhan in Haryana

ಇಂದು ದೇಶದ ಮುಂದಿರುವ ಅತಿ ದೊಡ್ಡ ಸಮಸ್ಯೆಯೆಂದರೆ ಉದ್ಯೋಗಾವಕಾಶ, ರೈತರ ಅಭಿವೃದ್ಧಿ, ಮಹಿಳೆಯರ ಭದ್ರತೆ. 2014 ರ ಚುನಾವಣೆ ಸಂದರ್ಭದಲ್ಲಿ ಭಾರಿ ಭರವಸೆಗಳಿದ್ದವು. ಹರಿಯಾಣದ ಜನತೆ ಕೇಂದ್ರದ ಮೇಲೆ ಭರವಸೆ ಹೊಂದಿದ್ದರು. ಆದರೆ, ಕಳೆದ ಐದು ವರ್ಷಗಳಲ್ಲಿ ಉದ್ಯೋಗಾವಕಾಶಗಳಲ್ಲಿ ಕುಸಿತವಾಗಿದೆ ಎಂದರು.

ತಾವು ತಮ್ಮ ಭರವಸೆಗಳನ್ನು ಈಡೇರಿಸಿದ್ದೇವೆಯೇ ಇಲ್ಲವೇ ಎಂಬುದನ್ನು ಬಿಜೆಪಿ ಮುಖಂಡರು ತಮ್ಮ ಚುನಾವಣಾ ಪ್ರಚಾರದಲ್ಲಿ ಎಲ್ಲಿಯೂ ಹೇಳಿಲ್ಲ. ಅವರು ನನ್ನ ಕುಟುಂಬದ ಹುತಾತ್ಮರ ಹೆಸರಿನಲ್ಲಿ ಮತ ಯಾಚಿಸುತ್ತಿದ್ದಾರೆ. ದುರ್ಯೋಧನನಿಗೆ ತುಂಬಾ ಗರ್ವವಿತ್ತು. ಆ ಗರ್ವವೇ ಆತನ ಸೋಲಿಗೆ ಕಾರಣವಾಯಿತು ಎಂದು ಪ್ರಧಾನಿ ಮೋದಿ ಅವರನ್ನು ದುರ್ಯೋಧನನಿಗೆ ಹೋಲಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+