ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹರಿಯಾಣದಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ

|
Google Oneindia Kannada News

ಚಂಡೀಗಢ,ಜುಲೈ. 30: ರಕ್ಷಾ ಬಂಧನದ ಉಡುಗೊರೆಯಾಗಿ ಹರಿಯಾಣ ಸರ್ಕಾರ ಶುಕ್ರವಾರ ರಾಜ್ಯ ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ 36 ಗಂಟೆಗಳ ಉಚಿತ ಬಸ್ ಪ್ರಯಾಣವನ್ನು ಘೋಷಿಸಿದೆ.

ಸರ್ಕಾರದ ಪ್ರಕಾರ ಉಚಿತ ಬಸ್ ಪ್ರಯಾಣವು ಆಗಸ್ಟ್ 10ರ ಮಧ್ಯಾಹ್ನ 12 ರಿಂದ ಆಗಸ್ಟ್ 11ರ ಮಧ್ಯರಾತ್ರಿ 12ರವರೆಗೆ ಜಾರಿಯಲ್ಲಿರಲಿದೆ.

ಈ ಬಗ್ಗೆ ಹರಿಯಾಣ ಮುಖ್ಯಮಂತ್ರಿ ಕಚೇರಿ ಟ್ವೀಟ್ ಮಾಡಿ, "ರಾಜ್ಯದ ಮಹಿಳೆಯರಿಗೆ ರಕ್ಷಾಬಂಧನದ ಉಡುಗೊರೆಯನ್ನು ನೀಡುತ್ತಾ, ಹರಿಯಾಣ ಸರ್ಕಾರವು ಈ ವರ್ಷವೂ ಹರಿಯಾಣ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯವನ್ನು ಒದಗಿಸಲು ನಿರ್ಧರಿಸಿದೆ. ಉಚಿತ ಪ್ರಯಾಣದ ಸೌಲಭ್ಯವು 10 ಆಗಸ್ಟ್, 2022 ರಂದು ಮಧ್ಯಾಹ್ನ 12 ರಿಂದ 11 ಆಗಸ್ಟ್, 2022 ರ ಮಧ್ಯರಾತ್ರಿ 12 ರವರೆಗೆ ಜಾರಿಯಲ್ಲಿರಲಿದೆ," ಎಂದು ಹೇಳಿದೆ.

Free bus travel for women in Haryana on raksha bhandhan

ಈ ವರ್ಷ ಒಡಹುಟ್ಟಿದವರ ನಡುವಿನ ಪ್ರೀತಿಯ ಬಾಂಧವ್ಯವನ್ನು ಸೂಚಿಸುವ ರಕ್ಷಾ ಬಂಧನ ಹಬ್ಬವನ್ನು ಆಗಸ್ಟ್ 11 ರಂದು ಆಚರಿಸಲಾಗುತ್ತದೆ. ಕಳೆದ ಹಲವಾರು ವರ್ಷಗಳಿಂದ ಹರಿಯಾಣ ರಾಜ್ಯದಲ್ಲಿ ರಕ್ಷಾ ಬಂಧನ ಹಬ್ಬದ ಸಂದರ್ಭದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಉಡುಗೊರೆಗಳನ್ನು ನೀಡಲಾಗುತ್ತಿತ್ತು. ಆದಾಗ್ಯೂ, ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಅದನ್ನು ನಿಲ್ಲಿಸಲಾಗಿತ್ತು. ಕೋವಿಡ್ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡು ಬಂದ ಕಾರಣ ರಾಜ್ಯ ಸರ್ಕಾರವು ಸೌಲಭ್ಯವನ್ನು ಪುನರಾರಂಭಿಸಲು ನಿರ್ಧರಿಸಿದೆ.

ಮಹಿಳೆಯರಿಗೆ ರಕ್ಷಾ ಬಂಧನದ ಉಡುಗೊರೆ ನೀಡಲು, ಹರಿಯಾಣ ಸರ್ಕಾರವು ಈ ವರ್ಷವೂ ಹರಿಯಾಣ ಸಾರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯವನ್ನು ಒದಗಿಸಲು ನಿರ್ಧರಿಸಿದೆ. ಉಚಿತ ಪ್ರಯಾಣದ ಸೌಲಭ್ಯವು ಆಗಸ್ಟ್ 10, 2022 ರಂದು ಮಧ್ಯಾಹ್ನ 12 ರಿಂದ ಆಗಸ್ಟ್ 11, 2022 ರ ಮಧ್ಯರಾತ್ರಿ 12 ರವರೆಗೆ ಇರಲಿದೆ ಎಂದು ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

Free bus travel for women in Haryana on raksha bhandhan

ಮಹಿಳೆಯರಿಗೆ ಈ ಉಚಿತ ಪ್ರಯಾಣ ಸೌಲಭ್ಯವನ್ನು ರಾಜ್ಯದಾದ್ಯಂತ ಮತ್ತು ಹರಿಯಾಣದ ಯಾವುದೇ ಸ್ಥಳದಿಂದ ದೆಹಲಿ ಮತ್ತು ಚಂಡೀಗಢದವರೆಗೆ ಪ್ರಯಾಣಿಸಲು ಅನುಮತಿಸಲಾಗುತ್ತದೆ. ಒಡಹುಟ್ಟಿದವರ ನಡುವಿನ ಪ್ರೀತಿ, ಕಾಳಜಿ ಮತ್ತು ಗೌರವದ ಏಕೀಕೃತ ಮತ್ತು ಶಾಶ್ವತವಾದ ಬಾಂಧವ್ಯವನ್ನು ಆಚರಿಸಲು ರಕ್ಷಾ ಬಂಧನವನ್ನು ಮಂಗಳಕರ ಸಂದರ್ಭವೆಂದು ಪರಿಗಣಿಸಲಾಗಿದೆ.

ಈ ಸಂದರ್ಭವನ್ನು ಭಾರತದಲ್ಲಿ ಸಹೋದರಿಯರು ತಮ್ಮ ಸಹೋದರರಿಗೆ ರಾಖಿ ಕಟ್ಟುತ್ತಾರೆ. ಅವರ ಬಂಧವನ್ನು ಗುರುತಿಸಲು ಉಡುಗೊರೆಗಳು ಮತ್ತು ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಈ ವರ್ಷ ರಕ್ಷಾ ಬಂಧನ ಆಗಸ್ಟ್ 11 ರಂದು ನಡೆಯಲಿದೆ.

Recommended Video

ಆತುರ ಪಟ್ಟು ಶುಬ್ಮನ್ ಗಿಲ್ ವಿಚಾರದಲ್ಲಿ ಮಾಡಿದ ಎಡವಟ್ಟಿನಿಂದ RCB ಗೆ ಭಾರಿ ಅವಮಾನ | *Cricket | OneIndia Kannada

English summary
As a Raksha Bandhan gift, the Haryana government on Friday announced 36 hours of free bus travel for women on state transport buses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X