ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ಸೇರ್ಪಡೆಗೊಂಡ ಮಾಜಿ ಕ್ರಿಕೆಟರ್ ದಿನೇಶ್ ಮೊಂಗಿಯಾ

|
Google Oneindia Kannada News

ಚಂಡೀಗಢ, ಡಿಸೆಂಬರ್ 28: ಪಂಜಾಬ್ ವಿಧಾನಸಭೆ ಚುನಾವಣೆ ಕಾವು ಏರುತ್ತಿದೆ. ಪಕ್ಷದಿಂದ ಪಕ್ಷಕ್ಕೆ ಹಾರುವವರು, ಹೊಸಬರು ರಾಜಕೀಯ ರಂಗಕ್ಕೆ ಎಂಟ್ರಿ ಕೊಡುವ ಸುದ್ದಿಗಳು ಬರುತ್ತಿವೆ. ಟೀಂ ಇಂಡಿಯಾದ ಮಾಜಿ ಕ್ರಿಕೆಟರ್ ದಿನೇಶ್ ಮೊಂಗಿಯಾ, ಹಾಲಿ ಶಾಸಕ ಫಾತೇಹ್ ಸಿಂಗ್ ಬಾಜ್ವಾ ಅವರು ಇಂದು ಭಾರತೀಯ ಜನತಾ ಪಕ್ಷ(ಬಿಜೆಪಿ)ಕ್ಕೆ ಸೇರ್ಪಡೆಗೊಂಡಿದ್ದಾರೆ.

ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಬಿಜೆಪಿಗೆ ಸೇರ್ಪಡೆಗೊಂಡ ಹೊಸ ಸದಸ್ಯರನ್ನು ಸ್ವಾಗತಿಸಿದರು. ಹಿರಿಯ ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಅವರ ಸೋದರ ಫಾತೇಹ್ ಸಿಂಗ್ ಬಾಜ್ವಾ ಅವರಲ್ಲದೆ ಬಲ್ವಿಂದರ್ ಸಿಂಗ್ ಲಡ್ಡಿ ಅವರು ಮಂಗಳವಾರದಂದು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.

NewsX ಚುನಾವಣಾಪೂರ್ವ ಸಮೀಕ್ಷೆ: ಪಂಜಾಬ್‌ನಲ್ಲಿ ಕಾಂಗ್ರೆಸ್ 'ಕೈ' ತಪ್ಪಲಿದೆ ಅಧಿಕಾರNewsX ಚುನಾವಣಾಪೂರ್ವ ಸಮೀಕ್ಷೆ: ಪಂಜಾಬ್‌ನಲ್ಲಿ ಕಾಂಗ್ರೆಸ್ 'ಕೈ' ತಪ್ಪಲಿದೆ ಅಧಿಕಾರ

ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಹಾಗೂ ಕೇಂದ್ರದ ಮಾಜಿ ಸಚಿವ ಸುಖದೇವ್ ಸಿಂಗ್ ಧಿಂಡ್ಸಾ ಅವರ ಭೇಟಿ ಹಾಗೂ ಕೇಂದ್ರ ನಾಯಕರ ಜೊತೆಗಿನ ಮಾತುಕತೆ ನಂತರ ಬಿಜೆಪಿ ಸೇರುವವರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಹೊಸಬರ ಸೇರ್ಪಡೆಯಿಂದ ಪಂಜಾಬ್ ರಾಜ್ಯದಲ್ಲಿ ಬಿಜೆಪಿ ಬಲ ಹೆಚ್ಚಾಗಿದೆ ಎಂದು ಶೇಖಾವತ್ ಹೇಳಿದ್ದಾರೆ.

Dinesh Mongia, Fateh Bajwa join BJP ahead of Punjab Assembly polls

ಪಂಜಾಬ್ ವಿಧಾನಸಭೆ ಚುನಾವಣೆ ಹಿನ್ನೆಲೆ ಭಾರತೀಯ ಜನತಾ ಪಕ್ಷ ಮತ್ತು ಪಂಜಾಬ್ ಲೋಕ ಕಾಂಗ್ರೆಸ್(PLC) ಪಕ್ಷದ ನಡುವೆ ಸೀಟು ಹಂಚಿಕೆ ಕುರಿತು ಚರ್ಚೆ ಜೋರಾಗಿದೆ. ಪಿಎಲ್ ಸಿ ಮುಖ್ಯಸ್ಥ ಹಾಗೂ ಪಂಜಾಬ್ ಮಾಜಿ ಸಿಎಂ ಅಮರೀಂದರ್ ಸಿಂಗ್ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ಥಾನ ಹಂಚಿಕೆ ಬಗ್ಗೆ ಚರ್ಚೆ ನಡೆಸಿದರು.

ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಮೈತ್ರಿ ರಚಿಸಿಕೊಂಡಿರುವ ಬಿಜೆಪಿ ಹೆಚ್ಚು ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ ಎಂದು ತಿಳಿದು ಬಂದಿದೆ. ಮೈತ್ರಿಕೂಟದಲ್ಲಿ 117 ಕ್ಷೇತ್ರಗಳ ಪೈಕಿ ಬಿಜೆಪಿಯೇ 70ಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿಸ್ಪರ್ಧಿಸಲಿದೆ. ಪಂಜಾಬ್ ಲೋಕ ಕಾಂಗ್ರೆಸ್ ಪಕ್ಷಕ್ಕೆ 30 ರಿಂದ 35 ಕ್ಷೇತ್ರಗಳನ್ನು ಬಿಟ್ಟುಕೊಡಲಾಗುತ್ತಿದ್ದು, ದಿಂಡಾ ಒಕ್ಕೂಟಕ್ಕೆ 10 ರಿಂದ 15 ಕ್ಷೇತ್ರಗಳನ್ನು ನೀಡುವ ಸಾಧ್ಯತೆಗಳಿವೆ. ಪಂಜಾಬ್‌ನಲ್ಲಿ ಜನವರಿ ಮೊದಲ ವಾರದಲ್ಲಿ ಚುನಾವಣಾ ಮೆರವಣಿಗೆ ಮೂಲಕ ಪ್ರಧಾನಿ ಮೋದಿ ಮೈತ್ರಿ ಪ್ರಚಾರಕ್ಕೆ ಚಾಲನೆ ನೀಡುವ ಸಾಧ್ಯತೆಯಿದೆ.

ಪಂಜಾಬ್ ರಾಜ್ಯದ 117 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಬಹುಮತ ಪಡೆಯಲು ಬೇಕಾದ ಮ್ಯಾಜಿಕ್ ನಂಬರ್ 59. ಈಗ ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರದಲ್ಲಿದೆ. ಕ್ಯಾಪ್ಟನ್ ಅಮರಿಂದರ್ ಸಿಂಗ್‌ರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಬಳಿಕ, ಚರಣ್ ಜೀತ್ ಸಿಂಗ್ ಚನ್ನಿ ಸಿಎಂ ಆಗಿದ್ದಾರೆ. ಈ ಬೆಳವಣಿಗೆಗಳ ನಂತರ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ. ನವಜೋತ್ ಸಿಂಗ್ ಸಿಧು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದು, ಅವರ ನೇತೃತ್ವದಲ್ಲಿಯೇ ಚುನಾವಣೆ ನಡೆಯಲಿದೆ.

ಪಂಜಾಬ್ ವಿಧಾನಸಭೆ 117 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಶೇ.35.20ರಷ್ಟು ಮತಗಳೊಂದಿಗೆ 40 ರಿಂದ 45 ಕ್ಷೇತ್ರಗಳಲ್ಲಿ ಜಯ ಸಾಧಿಸಲಿದೆ ಎಂದು ಸಮೀಕ್ಷೆ ತಿಳಿಸಿದೆ. ದೆಹಲಿಯಲ್ಲಿ ಆಡಳಿತ ನಡೆಸುತ್ತಿರುವ ಆಮ್ ಆದ್ಮಿ ಪಕ್ಷ ಪಂಜಾಬ್ ವರೆಗೆ ಹರಡಲಿದೆ. ಪಂಜಾಬ್‌ನಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಲು ಪ್ರಯತ್ನಿಸುತ್ತಿರುವ ಆಮ್ ಆದ್ಮಿ ಪಕ್ಷವು ಶೇ.38.83ರಷ್ಟು ಮತಗಳೊಂದಿಗೆ 47 ರಿಂದ 52 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಅನ್ನು ಕಡಿಮೆ ಅಂತರದಲ್ಲಿ ಸೋಲಿಸುತ್ತದೆ ಎಂದು ಪೋಲ್ ಸ್ಟ್ರಾಟ್-ನ್ಯೂಸ್ ಎಕ್ಸ್ ಚುನಾವಣಾ ಪೂರ್ವ ಸಮೀಕ್ಷೆಯು ಭವಿಷ್ಯ ನುಡಿದಿದೆ.

ಪಂಜಾಬ್‌ನಲ್ಲಿ ಮೂರರಲ್ಲಿ ಒಬ್ಬರು ಹೊಸಬರಿಗೆ ಮುಖ್ಯಮಂತ್ರಿ ಸ್ಥಾನವನ್ನು ಸಿಗಬೇಕು ಎಂದು ಬಯಸುತ್ತಿದ್ದಾರೆ. 2022ರ ಚುನಾವಣೆ ನಂತರದಲ್ಲಿ ಹೊಸ ಮುಖಕ್ಕೆ ಮುಖ್ಯಮಂತ್ರಿ ಸ್ಥಾನವನ್ನು ನೀಡಬೇಕು ಎಂದು ಶೇ.33.60ರಷ್ಟು ಜನರು ಎದುರು ನೋಡುತ್ತಿದ್ದಾರೆ. ಇದರ ಹೊರತಾಗಿ ಮಾಜಿ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಪರ ಶೇ.16.70, ನವಜೋತ್ ಸಿಂಗ್ ಸಿಧು ಪರ ಶೇ.9.80ರಷ್ಟು, ಚರಂಜಿತ್ ಸಿಂಗ್ ಚನ್ನಿ ಪರ ಶೇ.22.20ರಷ್ಟು ಮತ್ತು ಸುಖ್ಬೀರ್ ಸಿಂಗ್ ಬಾದಲ್ ಪರ ಶೇ.17.70ರಷ್ಟು ಜನರು ಮತ ನೀಡಿದ್ದಾರೆ.

Recommended Video

South Africa vs India: ಛೇ!!ಸಖತ್ ಬೌಲಿಂಗ್ ಮಾಡ್ತಿದ್ದ ಯಾರ್ಕರ್ ಕಿಂಗ್ ಬುಮ್ರಾ ಕಾಲಿಗೆ ಗಾಯ | Oneindia Kannada

English summary
Ahead of the Punjab Assembly election, former India cricketer Dinesh Mongia and sitting Congress MLA Fateh Singh Bajwa joined the BJP in New Delhi on Tuesday in the presence of Union minister Gajendra Singh Shekhawat. Bajwa, MLA from Qadian, is the brother of senior Congress leader Pratap Singh Bajwa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X