ಪಂಜಾಬ್ ಚುನಾವಣೆ: ಡೇರಾ ಬಲ್ಲನ್‌ನಲ್ಲಿ ನೆಲದ ಮೇಲೆ ಮಲಗಿದ ಚನ್ನಿ
ಜಲಂಧರ್, ಜನವರಿ 27: ಪಂಜಾಬ್ ಚುನಾವಣೆ ಸನ್ನಿಹಿತವಾಗುತ್ತಿರುವ ಹಿನ್ನೆಲೆಯಲ್ಲಿ ದಲಿತರ ಮತಗಳನ್ನು ಪಡೆಯಲು ಕಾಂಗ್ರೆಸ್ ಸರ್ಕಸ್ ನಡೆಸುತ್ತಿದೆ.
ಪಂಜಾಬ್ ಮುಖ್ಯಮಂತ್ರಿ ಚರಣ್‌ಜಿತ್ ಸಿಂಗ್ ಚನ್ನಿ ಡೇರಾ ಸಚ್‌ಖಂಡ್ ಬಲ್ಲನ್‌ನಲ್ಲಿ ರಾತ್ರಿ ಇಡೀ ನೆಲದ ಮೇಲೆ ಮಲಗಿದ್ದ ಘಟನೆ ಎಲ್ಲೆಡೆ ಸದ್ದು ಮಾಡುತ್ತಿದೆ. ಕಪುರ್ತಲಾ ಜಿಲ್ಲೆಯ ಫಗ್ವಾರಾದಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ ಚನ್ನಿ ಡೇರಾ ಸಚ್‌ಖಂಡ್ ಬಲ್ಲನ್‌ನಲ್ಲಿ ಅಧಿಕಾರಿಗಳ ವಿರೋಧದ ನಡುವೆಯೂ ಉಳಿದುಕೊಂಡರು.
ಜಲಂಧರ್‌ನಲ್ಲಿ ಗಣರಾಜ್ಯೋತ್ಸವದಂದು ರಾಷ್ಟ್ರಧ್ವಜ ಹಾರಿಸಬೇಕಾಗಿರುವುದರಿಂದ ಡೇರಾದಲ್ಲಿ ಉಳಿಯಬಾರದು ಎಂದು ಸಲಹೆ ನೀಡಲಾಗಿತ್ತು, ಆದರೆ ಚನ್ನಿ ಅದನ್ನು ತಿರಸ್ಕರಿಸಿದ್ದರು.

ಡೇರಾದ ಮುಖ್ಯಸ್ಥ ಸಂತ ನಿರಂಜನ್ ದಾಸ್ ಅವರು ಉಳಿದುಕೊಂಡಿದ್ದ ಕೋಣೆಯಲ್ಲಿ ರಾತ್ರಿ ಕಳೆಯಲು ಸಂತರ ಉಪದೇಶಗಳನ್ನು ಆಲಿಸಲು ನನಗೆ ತುಂಬಾ ಸಂತೋಷವಾಯಿತು ಎಂದು ಹೇಳಿದ್ದಾರೆ.
ಹಾಗೆಯೇ, ಇತ್ತೀಚೆಗೆ ಡೇರಾಗೆ ಭೇಟಿ ನೀಡಿದ ಏಕೈಕ ರಾಜಕಾರಣಿ ಚನ್ನಿ ಅಲ್ಲ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್, ಬಿಜೆಪಿಯ ಹಿರಿಯ ನಾಯಕರೂ ಕೂಡ ಭೇಟಿ ನೀಡಿದ್ದರು.
ಪಂಜಾಬ್ ವಿಧಾನಸಭಾ ಚುನಾವಣೆಯು ಫೆಬ್ರವರಿ 20ರಂದು ನಡೆಯಲಿದೆ. ಜನವರಿ 25ರಂದು ಅಧಿಸೂಚನೆ ಹೊರಬೀಳಲಿದ್ದು, ನಾಮಪತ್ರ ಸಲ್ಲಿಸಲು ಜನವರಿ 28 ಕೊನೆಯ ದಿನಾಂಕವಾಗಿರುತ್ತದೆ, ಜನವರಿ 29ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ, ನಾಮಪತ್ರ ಹಿಂಪಡೆಯಲು ಜನವರಿ 31 ಕೊನೆಯ ದಿನಾಂಕವಾಗಿರುತ್ತದೆ.
ಸುವಿಧಾ ಆ್ಯಪ್ ಮೂಲಕ ಆನ್‌ಲೈನ್‌ನಲ್ಲಿ ನಾಮಪತ್ರ ಸಲ್ಲಿಕೆ ಮಾಡಬಹುದು. 5 ರಾಜ್ಯಗಳ ಚುನಾವಣಾ ನೀತಿಸಂಹಿತೆ ಇಂದಿನಿಂದಲೇ ಜಾರಿ ಆಗಲಿದೆ. ಚುನಾವಣಾ ಸಿಬ್ಬಂದಿ 2 ಡೋಸ್ ಲಸಿಕೆ ಪಡೆದಿರಬೇಕು ಎಂದು ದೆಹಲಿಯಲ್ಲಿ ಕೇಂದ್ರ ಚುನಾವಣಾ ಆಯೋಗದ ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗಿದೆ.
ಚುನಾವಣೆಗೆ 900 ವೀಕ್ಷಕರ ನೇಮಕ ಮಾಡಲಾಗುವುದು. ಅಭ್ಯರ್ಥಿಗಳು ತಮ್ಮ ಅಪರಾಧ ಹಿನ್ನೆಲೆಯನ್ನು ತಿಳಿಸಬೇಕು. ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿ ಬಗ್ಗೆ ಪಕ್ಷ ಕಾರಣ ನೀಡಬೇಕು. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ನಾಮಪತ್ರವನ್ನು ಸಲ್ಲಿಸಬಹುದು.












Click it and Unblock the Notifications