Bhagwant Mann : ಪಂಜಾಬ್ ಸಿಎಂ ಪಟ್ಟಕ್ಕೇರಲು ಸಜ್ಜಾದ 'ಕಾಮಿಡಿಯನ್' ಭಗವಂತ್ ಮಾನ್
ಪಂಜಾಬ್‌ನ ಜನರು ಕಳೆದ 44 ವರ್ಷಗಳಿಂದ ಕಾಂಗ್ರೆಸ್ ಮತ್ತು ಎಸ್‌ಎಡಿಗೆ ಅವಕಾಶಗಳನ್ನು ನೀಡಿ ಬೇಸತ್ತಿದ್ದಾರೆ ಮತ್ತು ಈಗ ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬರಲಿ ಎಂದು ಬಯಸುತ್ತಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಭಗವಂತ್ ಮಾನ್ ತಮ್ಮ ಭಾಷಣದಲ್ಲಿ ಹೇಳಿದ್ದರು. ಪಂಚ ನದಿಗಳ ನಾಡಿನಲ್ಲಿ ಎಎಪಿ ಹೊಸ ಇತಿಹಾಸ ನಿರ್ಮಿಸಲು ಮುಂದಾಗಿದ್ದು, ಒಂದು ಕಾಲದಲ್ಲಿ ಕಾಮಿಡಿಯನ್ ಆಗಿ ಜನರನ್ನು ನಗಿಸುತ್ತಿದ್ದ ಭಗವಂತ್ ಮಾನ್ ಇಂದು ಮುಖ್ಯಮಂತ್ರಿ ಸ್ಥಾನಕ್ಕೇರಲು ಸಜ್ಜಾಗುತ್ತಿದ್ದಾರೆ
ಧುರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ 48 ವರ್ಷದ ಮಾನ್ ಅವರನ್ನು ಸಿಎಂ ಅಭ್ಯರ್ಥಿಯಾಗಿ ಘೋಷಿಸಿದ ಎಎಪಿ ತನ್ನ ಮೊದಲ ಪ್ರಯತ್ನದಲ್ಲೇ ಬಂಪರ್ ಹೊಡೆದಿದೆ.
2017 ರ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸದೆ ಚುನಾವಣೆಯನ್ನು ಎದುರಿಸಿತ್ತು. ಆದರೆ ಸರ್ಕಾರ ರಚನೆ ಮಾಡುವಲ್ಲಿ ವಿಫಲವಾಗಿದೆ. ಈ ಬಾರಿ ಯಾವುದೇ ರಿಸ್ಕ್ ತೆಗೆದುಕೊಳ್ಳದೆ ಸಂಗ್ರೂರು ಸಂಸದರನ್ನು ಆಮ್ ಆದ್ಮಿ ಪಕ್ಷವು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಣೆ ಮಾಡಿತ್ತು. ಹಾಗಾದರೆ ಭಗವಂತ್ ಮನ್ ಯಾರು ಎಂಬ ಬಗ್ಗೆ ತಿಳಿಯೋಣ..

48 ವರ್ಷದ ಭಗವಂತ್ ಮನ್ ಅಕ್ಟೋಬರ್ 17, 1973 ರಂದು ಸಂಗ್ರೂರಿನ ಸರ್ತೋಜ್ ಗ್ರಾಮದಲ್ಲಿ ಜನಿಸಿದರು. ಹಾಸ್ಯನಟ-ನಟ-ರಾಜಕಾರಣಿಯಾಗಿ ಪರಿವರ್ತನೆಗೊಂಡ ಭಗವಂತ್ ಮನ್ ಹೆಚ್ಚಾಗಿ ವಿವಾದದ ವಿಚಾರಗಳಲ್ಲಿ ಸುದ್ದಿಯಾಗಿದ್ದಾರೆ. ಜಟ್ ಸಿಖ್, ಭಗವಂತ್ ಮನ್ ಪಂಜಾಬ್‌ನ ಸಂಗ್ರೂರ್ ಕ್ಷೇತ್ರದ ಲೋಕಸಭಾ ಸಂಸದರಾಗಿದ್ದಾರೆ. ಭಗವಂತ್ ಮನ್ ಒಂದು ದಶಕದ ಹಿಂದೆ 2011 ರಲ್ಲಿ ಪೀಪಲ್ಸ್ ಪಾರ್ಟಿ ಆಫ್ ಪಂಜಾಬ್ ಮೂಲಕ ರಾಜಕೀಯ ಪ್ರವೇಶಿಸಿದರು. ಮೊದಲು 2012 ರಲ್ಲಿ ಪಂಜಾಬ್‌ನ ಲೆಹ್ರಾ ಕ್ಷೇತ್ರಕ್ಕೆ ಸ್ಪರ್ಧಿಸಿ, ಪರಾಭವವಗೊಂಡಿದ್ದಾರೆ.

ಬಳಿಕ 2014 ರಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ಹಾಸ್ಯನಟ-ರಾಜಕಾರಣಿಯನ್ನು ತಮ್ಮ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಭಗವಂತ್ ಮನ್ 2014 ರಲ್ಲಿ ಸಂಗ್ರೂರ್ ಕ್ಷೇತ್ರದಿಂದ ಸಾರ್ವತ್ರಿಕ ಚುನಾವಣೆಯಲ್ಲಿ ಯಶಸ್ವಿಯಾಗಿ ಸ್ಪರ್ಧಿಸಿದ್ದರು. 2019 ರಲ್ಲಿ ಅದೇ ಸ್ಥಾನದಿಂದ ಮತ್ತೆ ಗೆಲುವು ಸಾಧಿಸಿದರು. ಪ್ರಸ್ತುತ ಪಂಜಾಬ್‌ನ ಏಕೈಕ ಎಎಪಿ ಸಂಸದರಾಗಿದ್ದಾರೆ. ಭಗವಂತ್ ಮನ್ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಕೇವಲ್ ಧಿಲ್ಲೋನ್ ಅವರನ್ನು 1,10,211 ಮತಗಳ ಅಂತರದಿಂದ ಸೋಲಿಸಿ ಸತತ ಎರಡನೇ ಬಾರಿಗೆ ಸ್ಥಾನ ಪಡೆದರು. 2019 ರಲ್ಲಿ ಪಂಜಾಬ್‌ನಲ್ಲಿ ನಡೆದ ರ್‍ಯಾಲಿಯಲ್ಲಿ ಭಗವಂತ್ ಮನ್ ಇನ್ನು ಮುಂದೆ ಮದ್ಯ ಸೇವಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡುವುದಾಗಿ ಘೋಷಿಸಿದ್ದರು.

ಭಗವಂತ್ ಮನ್ ದೂರದರ್ಶನ ಕಾರ್ಯಕ್ರಮ 'ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್' ನಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಆಗಿ ಕೆಲಸ ಮಾಡಿದರು. ಇನ್ನು ಮುಂದೆ ಫೆಬ್ರವರಿಯಲ್ಲಿ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಪಂಜಾಬ್‌ನ ಸಂಗ್ರೂರ್ ಜಿಲ್ಲೆಯ ಧುರಿ ವಿಧಾನಸಭಾ ಕ್ಷೇತ್ರದಿಂದ ಭಗವಂತ್ ಮನ್ ಸ್ಪರ್ಧಿಸುವ ಭಗವಂತ್ ಮನ್ ತಮ್ಮದೇ ಆದ ಚಾರಿಟಬಲ್ ಫೌಂಡೇಶನ್ ಅನ್ನು ಹೊಂದಿದ್ದಾರೆ, ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಹಾಯ ಮಾಡುವ ಲೋಕ್ ಲೆಹರ್ ಫೌಂಡೇಶನ್ ಅದಾಗಿದೆ. ಈ ಹಿಂದೆ ಇರಾಕ್‌ನಿಂದ ಸಿಕ್ಕಿಬಿದ್ದ ಭಾರತೀಯರನ್ನು ಮರಳಿ ಕರೆತರಲು ಭಗವಂತ್ ಮನ್ ಕಾರ್ಯ ನಿರ್ವಹಿಸಿದ್ದಾರೆ.












Click it and Unblock the Notifications