ದಾರಿ ಮಧ್ಯೆ ಚಿರತೆಗಳ ಮಿಲನ; ವೈರಲ್ ಆಯ್ತು ವೀಡಿಯೋ

ಚಾಮರಾಜನಗರ, ಜನವರಿ 02: ಚಾಮರಾಜನಗರ ತಾಲೂಕಿನ‌ ಅಮಚವಾಡಿ ಗ್ರಾಮದಲ್ಲಿ ರಾತ್ರಿ ಚಿರತೆಗಳೆರಡು ರಸ್ತೆ ಮಧ್ಯೆ ಕೆಲ ಕಾಲ ಮಿಲನ ನಡೆಸಿರುವ ವಿಡಿಯೋ ಕಾರು ಚಾಲಕನ ಮೊಬೈಲ್​ನಲ್ಲಿ ಸೆರೆಯಾಗಿದ್ದು, ಈ ವೀಡಿಯೋ ಸಾಮಾಜಿಕ‌ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಅಮಚವಾಡಿ ಗ್ರಾಮದ ಎಣ್ಣೆಹೊಳೆ ದೇವಸ್ಥಾನದ ಬಳಿ ಬುಧವಾರ ರಾತ್ರಿ 9 ಗಂಟೆ ಸಮಯದಲ್ಲಿ ಎರಡು ಚಿರತೆಗಳು ರಸ್ತೆಯಲ್ಲಿ ಕಾಣಿಸಿಕೊಂಡಿವೆ. ಇದೇ ವೇಳೆ ಕಾರು ಚಾಲಕ ಗಾಬರಿಗೊಂಡು ಕಾರು ನಿಲ್ಲಿಸಿದ್ದಾನೆ. ನಂತರ ಚಿರತೆಗಳು ಮಿಲನ ನಡೆಸುತ್ತಿರುವುದನ್ನು ನೋಡಿ ಮುಂದೆ ಸಾಗಲು ಪರದಾಟ‌ ನಡೆಸಿದ್ದಾನೆ. ಬಳಿಕ ತನ್ನ ಮೊಬೈಲ್​ನಲ್ಲಿ ಚಿರತೆಗಳ ಈ ದೃಶ್ಯವನ್ನು‌ ಸೆರೆ‌ ಹಿಡಿದಿದ್ದಾನೆ. ನಂತರ ಚಿರತೆಗಳು ವಾಹನ ನೋಡಿ ಓಡಿ ಹೋಗಿವೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡುತ್ತಿದ್ದು, ಚಿರತೆಗಳೆರಡರ ಅಪರೂಪದ ದೃಶ್ಯ ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

Video Of Leopards In Chamarajanagar Gone Viral

ಈ ರಸ್ತೆಯಲ್ಲೇ ಹಿಂದೊಮ್ಮೆ ಚಿರತೆಯೊಂದು ಕಾಣಿಸಿಕೊಂಡಿತ್ತು. ನಂತರ ಅರಣ್ಯ ಇಲಾಖೆ ಆ ಜಾಗದಲ್ಲಿ ಬೋನುಗಳನ್ನು ಇಟ್ಟಿತ್ತು. ಆದರೆ ಚಿರತೆ ಸೆರೆಯಾಗಿರಲಿಲ್ಲ. ಎಣ್ಣೆ ಹೊಳೆ ಸಮೀಪ ಕೆರೆಗಳಿದ್ದು, ಪೊದೆ, ಗುಡ್ಡಗಳೂ ಇರುವುದರಿಂದ ಚಿರತೆಗಳು ವಾಸಿಸಲು ಸೂಕ್ತವಾಗಿದೆ. ಹೀಗಾಗಿ ಆಗಾಗ ಇಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿರುತ್ತವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+