ದಾಳಿ ಮಾಡಿದ ಸೀಳುನಾಯಿಗಳನ್ನು ಅಟ್ಟಾಡಿಸಿದ ಹೆಣ್ಣಾನೆ

ಚಾಮರಾಜನಗರ, ಜುಲೈ 18: ಜಿಂಕೆ ಮರಿಯನ್ನು ಅಟ್ಟಾಡಿಸಿಕೊಂಡು ಬಂದಿದ್ದ ಸೀಳುನಾಯಿಗಳು, ಜಿಂಕೆ ತಪ್ಪಿಸಿಕೊಂಡಾಗ ಅದೇ ದಾರಿಯಲ್ಲಿ ಬಂದ ಹೆಣ್ಣಾನೆ ಮೇಲೆ ದಾಳಿ ಮಾಡಲು ಮುಂದಾದ ಘಟನೆ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಬೆಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ.

Recommended Video

      ಹೆಂಡತಿಗೆ ಮಕ್ಕಳೊಂದಿಗೆ 4 Km ನಡೆದುಕೊಂಡು ಸಿಎಂ ಮನೆಮುಂದೆ ಬಂದ ಕೊರೊನ ಸೊಂಕಿತ | Oneindia Kannada

      ಯಳಂದೂರು ಮಾರ್ಗವಾಗಿ ಬಿಳಿಗಿರಿರಂಗನ ಬೆಟ್ಟದ ಕಾಡು ದಾರಿಯಲ್ಲಿ ತೆರಳುತ್ತಿದ್ದವರು ಈ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಆ ದೃಶ್ಯ ಇದೀಗ ವೈರಲ್ ಆಗಿದೆ.

      ಬಿಳಿಗಿರಿರಂಗನ ಬೆಟ್ಟದ ಅರಣ್ಯದ ಹಾದಿಯಲ್ಲಿ ಸಾಗುತ್ತಿದ್ದಾಗ ಸೀಳುನಾಯಿ ಗುಂಪೊಂದು ಕಾಡಾನೆ ಮೇಲೆ ದಾಳಿಗೆ ಪ್ರಯತ್ನಿಸಿದೆ. ಒಮ್ಮೆಗೆ ಸೀಳುನಾಯಿಗಳು ದಾಳಿ ಮಾಡಲು ಬಂದಿದ್ದರಿಂದ ಗಾಬರಿಗೊಂಡ ಹೆಣ್ಣಾನೆ ಒಂದಷ್ಟು ದೂರ ಓಡಿದೆ. ಆನಂತರ ತಿರುಗಿ ನಿಂತ ಅದು ಸೀಳು ನಾಯಿಗಳನ್ನು ಅಟ್ಟಾಡಿಸಿದೆ.

      Video Of Elephant Attack On Cuon Alpinus In Biligiri Ranga Hills Of Chamarajanagar Viral

      ಮೊದಲಿಗೆ ಸುಮಾರು 10ಕ್ಕೂ ಹೆಚ್ಚು ಸೀಳುನಾಯಿಗಳ ಗುಂಪೊಂದು ಜಿಂಕೆಮರಿಯೊಂದನ್ನು ಬೇಟೆಯಾಡಲು ಅಟ್ಟಾಡಿಸಿಕೊಂಡು ಹೋಗಿವೆ. ಈ ವೇಳೆ ಅಡ್ಡಾದಿಡ್ಡಿ ಓಡಿದ ಜಿಂಕೆ ಮರಿ ಪೊದೆಯಲ್ಲಿ ಅವಿತುಕೊಂಡು ಪ್ರಾಣಾಪಾಯದಿಂದ ಪಾರಾಗಿದೆ. ಆದರೆ ಆ ವೇಳೆಗೆ ಸರಿಯಾಗಿ ಅದೇ ದಾರಿಯಲ್ಲಿ ಒಂದು ಹೆಣ್ಣಾನೆ ಬಂದಿದೆ. ಜಿಂಕೆ ಮರಿಯನ್ನು ಬೇಟೆಯಾಡುವ ಹುರುಪಿನಲ್ಲಿದ್ದ ಸೀಳುನಾಯಿಗಳು ಹೆಣ್ಣಾನೆ ಮೇಲೆಯೇ ದಾಳಿ ಮಾಡಲು ಮುಂದಾಗಿವೆ.

      ಮೊದಲಿಗೆ ಗಾಬರಿಗೊಂಡ ಹೆಣ್ಣಾನೆ ಸ್ವಲ್ಪ ದೂರ ಓಡಿತ್ತಾದರೂ ಮತ್ತೆ ತಿರುಗಿ ನಿಂತಿದೆ. ಬಳಿಕ ರೊಚ್ಚಿಗೆದ್ದು, ತನ್ನ ಸೀಳುನಾಯಿಗಳ ಮೇಲೆ ಘೀಳಿಡುತ್ತಾ ಪ್ರತಿದಾಳಿ ನಡೆಸಿದೆಯಲ್ಲದೆ, ಸೊಂಡಿಲಿನಿಂದ ಎತ್ತಿ ನಾಯಿಗಳನ್ನು ದೂರಕ್ಕೆ ಎಸೆದಿದೆ. ಹೆಣ್ಣಾನೆಯ ದಾಳಿಗೆ ಬೆಚ್ಚಿದ ಸೀಳುನಾಯಿಗಳು ಬದುಕಿದರೆ ಸಾಕೆಂದು ಕಾಡಿನತ್ತ ಓಡಿ ಹೋಗಿವೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+