ಐದು ವರ್ಷಗಳಲ್ಲಿ ದುಪ್ಪಟ್ಟಾದ ಆರ್.ಧ್ರುವನಾರಾಯಣ್ ಆಸ್ತಿ

ಚಾಮರಾಜನಗರ, ಮಾರ್ಚ್ 26:ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಸದ ಆರ್ . ಧ್ರುವನಾರಾಯಣ್ ಕೋಟ್ಯಾಧೀಶ್ವರರಾಗಿದ್ದಾರೆ. ತಮ್ಮ ಹಾಗೂ ಕುಟುಂಬದ ಬಳಿ 9.24 ಕೋಟಿ ರೂ.ಮೌಲ್ಯದ ಆಸ್ತಿ ಇರುವುದಾಗಿ ಘೋಷಿಸಿಕೊಂಡಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಧ್ರುವನಾರಾಯಣ್ ಆಸ್ತಿಯ ವಿವರಗಳನ್ನು ಉಲ್ಲೇಖಿಸಿದ್ದು, 4,58,93,254 ರೂ.ಮೌಲ್ಯದ ಚರಾಸ್ತಿ ಹಾಗೂ 4,65,25,000 ರೂ. ಮೌಲ್ಯದ ಸ್ಥಿರಾಸ್ತಿ ಇರುವುದಾಗಿ ತಿಳಿಸಿದ್ದಾರೆ.

ಧ್ರುವ ನಾರಾಯಣ ಅವರು ಸಲ್ಲಿಸಿರುವ ಪ್ರಮಾಣಪತ್ರದ ಪ್ರಕಾರ, ಅವರ ಬಳಿ 15 ಲಕ್ಷ ನಗದು ಇದೆ. ವಿವಿಧ ಬ್ಯಾಂಕುಗಳಲ್ಲಿ 37.20 ಲಕ್ಷದಷ್ಟು ಠೇವಣಿ ಇಟ್ಟಿದ್ದಾರೆ. 19.80 ಲಕ್ಷ ಮೌಲ್ಯದ ಇಸುಜು ಕಾರು ಮತ್ತು 11.22 ಲಕ್ಷ ಮೌಲ್ಯದ ಇನ್ನೊವಾ ಹೊಂದಿದ್ದಾರೆ. 3.15 ಲಕ್ಷ ವಿಮೆಯನ್ನೂ ಪಾವತಿಸುತ್ತಿದ್ದಾರೆ. ಉದ್ಯಮದಲ್ಲಿ ಹೂಡಿಕೆ ಮಾಡಿರುವ ಬಂಡವಾಳದ ಮೌಲ್ಯ 3.35 ಕೋಟಿ.

R. Dhruvanarayan has declared assets worth 9 crore

ಪತ್ನಿ ವೀಣಾ ಅವರು 3 ಲಕ್ಷ ನಗದು, 10 ಲಕ್ಷದ ವಿಮೆ, 50 ಸಾವಿರ ಮೌಲ್ಯದ ಜೆನ್ ಕಾರು, 4.15 ಲಕ್ಷ ಮೌಲ್ಯದ ಚಿನ್ನಾಭರಣ, ಎರಡು ಬ್ಯಾಂಕುಗಳಲ್ಲಿ 43,271 ಠೇವಣಿ ಸೇರಿದಂತೆ 18.08 ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಇಬ್ಬರು ಪುತ್ರರು ಕ್ರಮವಾಗಿ 2.61 ಲಕ್ಷ ಹಾಗೂ 3.31 ಲಕ್ಷ ಮೌಲ್ಯದ ಚರಾಸ್ತಿ ಹೊಂದಿದ್ದಾರೆ ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ.

2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಧ್ರುವನಾರಾಯಣ ಅವರು ಹೊಂದಿದ್ದ ಆಸ್ತಿಗೆ ಹೋಲಿಸಿದರೆ, ಐದು ವರ್ಷಗಳಲ್ಲಿ ಅವರ ಆಸ್ತಿ ಮೌಲ್ಯ ಎರಡು ಪಟ್ಟು ಹೆಚ್ಚಾಗಿದೆ. 1.05 ಕೋಟಿ ಚರಾಸ್ತಿ ಹಾಗೂ 2.10 ಕೋಟಿ ಮೌಲ್ಯದ ಸ್ಥಿರಾಸ್ತಿ ಸೇರಿದಂತೆ ಒಟ್ಟು 3.15 ಕೋಟಿ ಮೌಲ್ಯದ ಆಸ್ತಿ ಇರುವುದಾಗಿ ಅವರು ಹಿಂದಿನ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಘೋಷಿಸಿಕೊಂಡಿದ್ದರು.

ಮೈಸೂರಿನ ಈ ಅಭ್ಯರ್ಥಿಯೂ ಕೋಟ್ಯಾಧೀಶ್ವರ
ಇನ್ನು ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ದಳ ಅಭ್ಯರ್ಥಿ ವಿಜಯಶಂಕರ್ ಅವರು 2.15 ಕೋಟಿ ಲಕ್ಷ ರೂ.ಸ್ಥಿರಾಸ್ತಿ 2.30 ರೂ.ಗಳ ಚರಾಸ್ತಿ ಹೊಂದಿದ್ದಾರೆ.
ಸಿ.ಎಚ್‌.ವಿಜಯಶಂಕರ್ ಅವರು ಪತ್ನಿಯಿಂದಲೇ 15 ಲಕ್ಷ ಸಾಲ ಪಡೆದಿದ್ದಾರೆ. ಪತ್ನಿ ಬಬಿತಾ ಬಳಿ ಕಾರು ಇದ್ದರೆ, ಪತಿ ಹೆಸರಿನಲ್ಲಿ ಸ್ಕೂಟರ್ ಮಾತ್ರ ಇದೆ. ಅವರ ಬಳಿ ಚರಾಸ್ತಿ, ಸ್ಥಿರಾಸ್ತಿ ಸೇರಿ 2.49 ಕೋಟಿ ಮೌಲ್ಯದ ಆಸ್ತಿ ಇದ್ದರೆ, ಬಬಿತಾ 2.06 ಕೋಟಿ ಮೌಲ್ಯದ ಆಸ್ತಿ ಹೊಂದಿದ್ದಾರೆ.

ಪುತ್ರ ವಿ.ಎಚ್‌.ಚೇತನ್‌ ಕುಮಾರ್ 7.70 ಲಕ್ಷ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಯಾವುದೇ ಪ್ರಕರಣ ದಾಖಲಾಗಿಲ್ಲ. ಹಾಸನದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ 2014ರಲ್ಲಿ ನಾಮಪತ್ರ ಸಲ್ಲಿಸಿದಾಗ ವಿಜಯಶಂಕರ್‌ ಒಟ್ಟು 4.2 ಕೋಟಿ ಆಸ್ತಿ ತೋರಿಸಿದ್ದರು.‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+