ವೀರಪ್ಪನ್ ಸಹಚರನ ಪತ್ನಿ ಬಂಧನ: ಎಷ್ಟು ಪ್ರಕರಣಗಳಲ್ಲಿ ಭಾಗಿಯಾಗಿದ್ಲು?
ಕೊಳ್ಳೇಗಾಲ, ಫೆಬ್ರವರಿ 2: ನರಹಂತಕ ವೀರಪ್ಪನ್ ಸಹಚರನ ಪತ್ನಿ ಸೆಲ್ವಮೇರಿಯನ್ನು ಕೊಳ್ಳೇಗಾಲ ಪೊಲೀಸರು ಬಂಧಿಸಿದ್ದಾರೆ.
ವೀರಪ್ಪನ ಸಹಚರ ವೇಲೆಯನ್ ಪತ್ನಿ ಸೆಲ್ವಮೇರಿ ವಿರುದ್ಧ ಮೂರು ಪ್ರಕರಣಗಳು ದಾಖಲಾಗಿದ್ದವು.ಕಾಡಿನಲ್ಲಿ ಭೂಮಿಯೊಳಗೆ ಅಡಗಿಸಿಟ್ಟಿದ್ದ ಹಣ ಸೆಲ್ವಮೇರಿ ಭಾವ ಶೇಷರಾಜ್ಗೆ ಸಿಕ್ಕಿತ್ತು.
ಆ ಹಣದಲ್ಲಿ ಜಮೀನು ಖರೀದಿಸಲು ಶೇಷರಾಜ್ ಪ್ರಯತ್ನಿಸುತ್ತಿದ್ದ. ಈ ವಿಷಯ ತಿಳಿದ ವೀರಪ್ಪನ್ ಶೇಷರಾಜ್ ಮತ್ತು ಆತನ ಪತ್ನಿ, ನಾದಿನಿ ಸೆಲ್ವಮೇರಿಯನ್ನು ಕಾಡಿಗೆ ಕರೆದುಕೊಂಡು ಬಂದಿದ್ದ.

ವೇಲೆಯನ್ ಹಾಗೂ ಆತನ ಪತ್ನಿ ಸೆಲ್ವಮೇರಿ ಇಬ್ಬರೂ ಪಾಲಾರ್ ಬಾಂಬ್ ಸ್ಫೋಟ, ರಾಮಾಪುರ ಠಾಣೆ ಮೇಲೆ ಎರಡು ಬಾರಿ ದಾಳಿ ಮಾಡಿ ಶಸ್ತ್ರಾಸ್ತ್ರ ಕಳ್ಳತನ ಮಾಡಿದ್ದರು. ಅದಾದ ಬಳಿಕ ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದರು.
ಸೆಲ್ವಮೇರಿ ಇನ್ನೊಂದು ಮದುವೆಯಾಗಿ ಕೊಳ್ಳೇಗಾಲದ ಜಾಗೇರಿಯಲ್ಲಿ ಇದ್ದಳು. ಅದನ್ನು ಪತ್ತೆ ಹಚ್ಚಿದ ಪೊಲೀಸರು ಮೈಸೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಶೇಷರಾಜ್ ಕದ್ದಿದ್ದ ಹಣವನ್ನು ವಾಪಸ್ ನೀಡುತ್ತೇನೆ ನಮ್ಮನ್ನು ಬಿಟ್ಟುಬಿಡಿ ಎಂದು ಬೇಡಿಕೊಂಡಿದ್ದ, ಸೆಲ್ವಮೇರಿಯನ್ನು ನೋಡಿ ವೀರಪ್ಪನ್ ಸಹಚರ ವೇಲೆಯನ್ ಇಷ್ಟಪಟ್ಟಿದ್ದರಿಂದ ಆಕೆಯನ್ನು ಅಲ್ಲಿಯೇ ಉಳಿಸಿಕೊಂಡಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications