ಚಾಮರಾಜನಗರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹನೂರು: ಶವ ಹೂಳಲು ಸ್ಮಶಾನವಿಲ್ಲದೆ ಜಮೀನು ಮಾಲೀಕರಿಗೆ ಅಂಗಲಾಚಿದ ಕುಟುಂಬ

By ಚಾಮರಾಜನಗರ ಪ್ರತಿನಿಧಿ
|
Google Oneindia Kannada News

ಚಾಮರಾಜನಗರ, ಅಕ್ಟೋಬರ್‌, 10: ಹನೂರು ತಾಲೂಕಿನ‌ ವಿ.ಎಸ್.ದೊಡ್ಡಿ ಗ್ರಾಮದಲ್ಲಿ ಸ್ಮಶಾನ ಇಲ್ಲದ ಕಾರಣ, ಜಮೀನು ಮಾಲೀಕರೊಬ್ಬರನ್ನು ಅಂಗಲಾಚಿ ಮೃತ ರಾಚಶೆಟ್ಟಿ ಅವರ ಅಂತ್ಯಕ್ರಿಯೆ ನಡೆಸಿದ್ದಾರೆ. ಈ ದೃಶ್ಯ ಎಂಥವರ ಮನ ಕಲಕಿಬಿಡುತ್ತದೆ.

ಹನೂರು ತಾಲೂಕಿನ ಹುತ್ತೂರು ಗ್ರಾಪಂ ವ್ಯಾಪ್ತಿಯ ವೆಂಕಟಶೆಟ್ಟಿ ದೊಡ್ಡಿ ಗ್ರಾಮದಲ್ಲಿ ಇಂದು ರಾಚಶೆಟ್ಟಿ ಎಂಬವರು ಮೃತಪಟ್ಟಿದ್ದರು. ಗ್ರಾಮದಲ್ಲಿ ಸ್ಮಶಾನವಿಲ್ಲದ ಪರಿಣಾಮ ಮೃತನ ಕುಟುಂಬಸ್ಥರು ಖಾಸಗಿ ಜಮೀನಿನ ಮಾಲಿಕರೊಬ್ಬರನ್ನು ಅಂಗಲಾಚಿ, ಮೆಕ್ಕೆಜೋಳ ಫಸಲನ್ನು ಕಟಾವು ಮಾಡಿಸಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ: ಚಾಮರಾಜನಗರದಲ್ಲಿ ಸಂಭ್ರಮಾಚರಣೆಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ: ಚಾಮರಾಜನಗರದಲ್ಲಿ ಸಂಭ್ರಮಾಚರಣೆ

ಸುಮಾರು 400 ಕುಟುಂಬಗಳು ವಾಸವಿರುವ ವಿ.ಎಸ್ ದೊಡ್ಡಿ ಗ್ರಾಮದಲ್ಲಿ ಸರ್ಕಾರಿ ಜಮೀನುಗಳು ಇವೆ. ಆದರೆ, ಸ್ಮಶಾನಕ್ಕೆ ಜಮೀನುಗಳು ಮಂಜುರಾಗದೇ ಇಲ್ಲಿನವರು ಶವಗಳನ್ನು ಹೂಳಲು ಪರದಾಡುವಂತೆ ಆಗಿದೆ. 3-4 ಬಾರಿ ಸ್ಮಶಾನಕ್ಕೆ ಜಾಗ ಮಂಜೂರಾತಿ ಮಾಡಿಸಿ ಎಂದು ಡಿಸಿ, ಸಿಇಒ ಸೇರಿದಂತೆ ಸ್ಥಳೀಯ ಶಾಸಕರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ ಎಂದು ಇಲ್ಲಿನ ಜನರು ಅಳಲು ತೋಡಿಕೊಂಡಿದ್ದಾರೆ. ಈ ಹಿಂದೆ ಅರಣ್ಯದ ಪ್ರದೇಶದಲ್ಲೇ ಅಂತ್ಯಕ್ರಿಯೆ ನಡೆಸಲಾಗುತ್ತಿತ್ತು.‌ ಆದರೆ ಅರಣ್ಯ ಇಲಾಖೆಯು ಅಂತ್ಯಕ್ರಿಯೆಗೆ ಅವಕಾಶ ಕೊಡದಿರುವುದರಿಂದ ಸತ್ತ ವ್ಯಕ್ತಿಗೆ ಮುಕ್ತಿ ಕಾಣಿಸಲು ಹೆಣಗಾಡಬೇಕಿದೆ.

Chamarajanagar: people wandering without cemetery In Hanur taluk VS Doddi village

ಸ್ಮಶಾನ ಇಲ್ಲದೆ ಹೆಣ ಹೂಳಲು ಪರದಾಟ
ಜಮೀನು ಇದ್ದವರು ಮಾತ್ರ ತಮ್ಮ ಜಮೀನಿನಲ್ಲೇ ಅಂತ್ಯಕ್ರಿಯೆ ನೆರವೇರಿಸುತ್ತಾರೆ. ಆದರೆ, ಜಮೀನು ಇಲ್ಲದವರ ಪಾಡು ಹೇಳತೀರದಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಸ್ಮಶಾನಕ್ಕೆ ಜಾಗ ಮಂಜೂರು ಮಾಡಿ ಸಮಸ್ಯೆಗೆ ಮುಕ್ತಿ ಕಾಣಿಸಬೇಕಿದೆ ಎಂದು ಸ್ಥಳೀಯರಾದ ಮಂಜುನಾಥ್‌ ಆಗ್ರಹಿಸಿದ್ದಾರೆ. ಇದು ಚಾಮರಾಜನಗರ ಜಿಲ್ಲೆಯೊಂದರ ಕತೆಯಲ್ಲ. ರಾಜ್ಯದ ಅನೇಕ ಜಿಲ್ಲೆಗಳ ಗ್ರಾಮಗಳಲ್ಲಿ ಸ್ಮಶಾನಗಳ ವ್ಯವಸ್ಥೆ ಇಲ್ಲದೇ ಶವಗಳನ್ನು ಹೂಳಲು ಜನರು ಪರದಾಡುತ್ತಿದ್ದಾರೆ. ಕೊನೆಗೆ ಯಾವುದೇ ಪರ್ಯಾಯ ವ್ಯವಸ್ಥೆ ಇಲ್ಲದೇ ಬೇರೆಯವರ ಜಮೀನಿನಲ್ಲಿ ಶವವನ್ನು ಹೂಳಲು ಅಂಗಲಾಚಬೇಕಾದ ಪರಿಸ್ಥಿತಿಗಳು ಎದುರಾಗಿಬಿಡುತ್ತವೆ. ಇದಕ್ಕೆಲ್ಲ ಕಾರಣ ಸ್ಥಳೀಯ ಅಧಿಕಾರಿಗಳ ಬೇಜವಾಬ್ದಾರಿತನವೇ ಆಗಿರುತ್ತದೆ. ಸ್ಮಶಾನಕ್ಕೆ ಸರ್ಕಾರದಿಂದ ಹಣ ಮಂಜೂರಾದರೂ ಕೂಡ ಕೆಲವೆಡೆ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದು, ಇದರಿಂದ ಸಾಮಾನ್ಯ ಜನರು ತೊಂದರೆ ಅನುಭವಿಸುವಂತಾಗಿದೆ.

English summary
no cemetery in VS Doddi village of Hanur taluk, Rachashetty cremated in someone else land. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X