ಗುಂಡ್ಲುಪೇಟೆ: ಗ್ರಾಮ ಲೆಕ್ಕಾಧಿಕಾರಿಗೆ ನಿಂದಿಸಿದ್ದ ವ್ಯಕ್ತಿ-ಮುಂದೇನಾಯ್ತು ನೋಡಿ

ಚಾಮರಾಜನಗರ, ಆಗಸ್ಟ್‌, 21: ಸರ್ಕಾರಿ ಕೆಲಸಕ್ಕೆ ಅಡ್ಡಿಪಡಿಸಿ, ಗ್ರಾಮ ಲೆಕ್ಕಾಧಿಕಾರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ ವ್ಯಕ್ತಿಗೆ ಗುಂಡ್ಲುಪೇಟೆ ಜೆಎಂಎಫ್ಸಿ ನ್ಯಾಯಾಲಯವು 3 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ. ಚಾಮರಾಜನಗರ ಜಿಲ್ಲೆ, ಗುಂಡ್ಲುಪೇಟೆ ತಾಲ್ಲೂಕಿನ ವಡೆಯನಪುರ ಗ್ರಾಮದ ಶ್ರೀಕಂಠಸ್ವಾಮಿ ಎಂಬವರು ಶಿಕ್ಷೆಗೊಳಗಾದ ವ್ಯಕ್ತಿಯಾಗಿದ್ದಾರೆ.

2018ರ ಆಗಸ್ಟ್‌ 1ರಂದು ಬೊಮ್ಮಲಾಪುರ ವೃತ್ತದ ಗ್ರಾಮ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಸವರಾಜು ಪುಜೇರಿ ಎಂಬವರಿಗೆ ಪೌತಿ ಖಾತೆ ಮಾಡಿಕೊಟ್ಟ ವಿಚಾರದಲ್ಲಿ ಶ್ರೀಕಂಠಸ್ವಾಮಿ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದರು.

Obscene words use to Village Accountant in Vadeyanapura 3 years in prison to a Man

3 ವರ್ಷ ಶಿಕ್ಷೆ, 10 ಸಾವಿರ ರೂ. ದಂಡ: ಈ ಬಗ್ಗೆ ಬಸವರಾಜು ಗುಂಡ್ಲುಪೇಟೆ ಠಾಣೆಯಲ್ಲಿ ಕಲಂ 353, 514 ರ ಅಡಿ ದೂರು ದಾಖಲಿಸಿದ್ದರು. ಪ್ರಕರಣದ ಬಗ್ಗೆ ವಾದ-ಪ್ರತಿವಾದ ನಡೆದು ನಿಂದನೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವುದು ಸಾಬೀತಾದ ಹಿನ್ನೆಲೆ ಪ್ರಧಾನ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾ.ಜೆ.ಶಿವಕುಮಾರ್ ಅಪರಾಧಿಗೆ 3 ವರ್ಷ ಸಾದಾ ಶಿಕ್ಷೆ, 10 ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ನೂರಾರು ಕೋಟಿ ಅಕ್ರಮ ಆಸ್ತಿ: ಮುಡಾ ಹಗರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುತ್ತಿದ್ದಂತೆ ಸಿಡಿದೆದ್ದಿರುವ ಕಾಂಗ್ರೆಸ್ ಪಡೆ ಇಂದು ಚಾಮರಾಜನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಾಜಿ ಸಂಸದ ಕಾಗಲವಾಡಿ ಶಿವಣ್ಣ ಮಾತನಾಡಿ, ಕೇಂದ್ರ ಸಚಿವ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಅಕ್ರಮ ಆಸ್ತಿ ಬಾಂಬ್ ಸಿಡಿಸಿದರು.

ಕೋಟಿ.. ಕೋಟಿ ಹಣ ಮಾಡುತ್ತಿದ್ದರು: ಡಿ ನೋಟಿಫೈ ವಿಚಾರವಾಗಿ ಮಾಜಿ ಸಂಸದ ಕಾಗಲವಾಡಿ ಶಿವಣ್ಣ ಮಾತನಾಡಿ, ನೂರಾರು ಹೆಕ್ಟೇರ್‌ ತೋಟಗಳನ್ನು ಡಿನೋಟಿಫೈ ಮಾಡಿ, ಕೋಟಿ.. ಕೋಟಿ ಹಣ ಮಾಡುತ್ತಿದ್ದರು. ಏನು ಸರ್ ಇವೆಲ್ಲಾ ಅಂತಾ ಕೇಳಿದ್ದಕ್ಕೆ ಏನು ಮಾಡೋದು ಪಕ್ಷಕ್ಕೆ ಹಣ ಬೇಕಲ್ಲ ಅಂತ ಹೇಳಿದ್ರು ಎಂದು ತಿಳಿಸಿದರು.

ಹಗರಣದ ವಿಚಾರವಾಗಿ ನನ್ನ ಬಳಿ ರೆಕಾರ್ಡ್ ಇದೆ: ಕೇಂದ್ರ ಸಚಿವ ಕುಮಾರಸ್ವಾಮಿ ಹಗರಣದ ದಾಖಲೆ ನನ್ನ ಬಳಿ ಇದೆ. ಡಿನೋಟಿಫೈ ಹಗರಣದ ವಿಚಾರವಾಗಿ ನನ್ನ ಬಳಿ ರೆಕಾರ್ಡ್ ಇದೆ. ಅದನ್ನು ಸಿಎಂ ಸಿದ್ದರಾಮಯ್ಯ ಇಲ್ಲವೇ ಡಿ.ಕೆ.ಶಿವಕುಮಾರ್‌ಗೆ ನೀಡಿ ದೂರು ದಾಖಲು ಮಾಡುವಂತೆ ಹೇಳುತ್ತೇನೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+