ಚಾಮರಾಜನಗರ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳ ನಡುವೆ ಭಿನ್ನಮತ: ಮುಂದೇನಾಯ್ತು..?

ಚಾಮರಾಜನಗರ, ಸೆಪ್ಟೆಂಬರ್‌ 14: ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ತಾಲೂಕು ಪಟ್ಟಣದ ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳ ನಡುವೆ ಭಿನ್ನಮತ ಭುಗಿಲೆದ್ದಿದೆ. ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಮಹಮದ್ದಾಯೆಜ್ ಮತ್ತು ಕೊಳ್ಳೇಗಾಲ ಟೌನ್ ಘಟಕದ ಅಧ್ಯಕ್ಷ ಜಗದೀಶ್ ಶಾಸ್ತ್ರಿ ಮತ್ತು ಅವರವರ ಕಟ್ಟ ಬೆಂಬಲಿಗ ಪದಾಧಿಕಾರಿಗಳು ಹಲವಾರು ದಿನಗಳಿಂದ ಒಂದೇ ಬಣ್ಣದ ಎರಡು ಘಟಕಗಳ ಪದಾಧಿಕಾರಿಗಳ ನಡುವೆ ಸಾಕಷ್ಟು ನಿನ್ನ ಅಭಿಪ್ರಾಯ ಸೃಷ್ಟಿಗೊಂಡಿದ್ದವು.

ಈ ವಿಷಯ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಮಿತಿಯವರೆಗೂ ಮಾಹಿತಿ ತಲುಪಿದೆ. ಈ ಕಾರಣ ಕೊಳ್ಳೇಗಾಲ ಪಟ್ಟಣಕ್ಕೆ ಆಗಮಿಸಿದ ಕರವೇ ರಾಜ್ಯ ಸಮಿತಿಯ ರಾಜ್ಯ ಉಪಾಧ್ಯಕ್ಷರು ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿಗಳಾದ ಮಂಜೇಶ್ ಮತ್ತು ತಂಡದವರು ಆಗಮಿಸಿ ಎರಡು ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳನ್ನು ಕರೆದು ಇಬ್ಬರ ನಡುವೆ ಮುಗಿಲೆದ್ದಿದ್ದ ಭಿನ್ನಮತ ಸಮಾನಗೊಳಿಸಿದರು. ಅಲ್ಲದೇ ಅವರ ನಡುವೆ ಇದ್ದ ಸಮಸ್ಯೆಗಳನ್ನು ಬಗೆಹರಿಸಿದ್ದಾರೆ.

Misunderstanding Between Chamarajanagar Karnataka Rakshana Vedike Members

ಕೊಳ್ಳೇಗಾಲ ಪಟ್ಟಣಕ್ಕೆ ಆಗಮಿಸಿದ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ ಬಣದ ರಾಜ್ಯ ಉಪಾಧ್ಯಕ್ಷ ಮಂಜೇಶ್ ರವರು ಮೊದಲು ಆಗಮಿಸಿದಾಗ ಕೊಳ್ಳೇಗಾಲ ತಾಲೂಕು ಘಟಕ ಹಾಗೂ ಟೌನ್ ಘಟಕದ ಪದಾಧಿಕಾರಿಗಳು ಹಾರ ಹಾಕಿ ಆತ್ಮೀಯವಾಗಿ ಸ್ವಾಗತಿಸಿ ಬರಮಾಡಿಕೊಂಡರು.

ನಂತರ ಪಟ್ಟಣದ ಅಂಬೇಡ್ಕರ್ ವೃತ್ತದ ಬಳಿ ಇರುವ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ನಾವು ಕನ್ನಡ, ನಾಡು, ನುಡಿ, ಜಲ, ಭಾಷೆಗೋಸ್ಕರ ಹೋರಾಟ ನಡೆಸಬೇಕು. ಹಾಗೂ ಎಲ್ಲಾ ಸರ್ಕಾರಿ ಕಚೇರಿಗಳು ವ್ಯವಸ್ಥಿತವಾದ ರೀತಿಯಲ್ಲಿ ಸಾರ್ವಜನಿಕರ ಕೆಲಸ ನಿರ್ವಹಿಸುತ್ತಿದೆಯಾ ಅಥವಾ ವಿಳಂಬ ಮಾಡುತ್ತಿದೆಯೋ ಎಂಬುದನ್ನು ಪರಿಶೀಲಿಸಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಸ್ಪಂದನೆ ನೀಡಬೇಕು ಎಂದು ತಿಳಿಸಿದರು.

ಈ ವೇಳೆ ನೂತನವಾಗಿ ನಮ್ಮ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ ಬಣಕ್ಕೆ ನೂತನವಾಗಿ ಸೇರ್ಪಡೆ ಗೊಳ್ಳುತ್ತಿರುವವರಿಗೆ ಸ್ವಾಗತಿಸುವುದಕೋಸ್ಕರ, ಹಾಗೂ ಕೆಲವು ಜಿಲ್ಲೆಗಳಲ್ಲಿ ಹಾಗೂ ತಾಲೂಕುಗಳಲ್ಲಿ ಇರುವ ಕುಂದು ಕೊರತೆ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಎಂದು ಸೂಚನೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ ಬಣ ಜಿಲ್ಲಾಧ್ಯಕ್ಷ ಮೋಹನ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಿಯಾಜ್ ಪಾಸ, ಶಿವರಾಜೇಗೌಡ, ತಾಲೂಕು ಅಧ್ಯಕ್ಷ ಮಹಮ್ಮದ್ ಅಯಾಜ್, ರೈತ ಮುಖಂಡ ಅಣಗಳ್ಳಿ ಬಸವರಾಜು, ಟೌನ್ ಘಟಕದ ಅಧ್ಯಕ್ಷ ಜಗದೀಶ್ ಶಾಸ್ತ್ರಿ, ಪ್ರಧಾನ ಕಾರ್ಯದರ್ಶಿ ಸುರೇಶ್, ಯೂನಸ್, ಕಾರ್ಯಾಧ್ಯಕ್ಷ ಮಹಮ್ಮದ್ ಅಬ್ದುಲ್, ಗೌರವಾಧ್ಯಕ್ಷ ಬಿಸಿಲಯ್ಯ, ಮಹಮ್ಮದ್ ಅಶ್ವಥ್ಅಸ್ವಾಕ್, ಇನ್ನಿತರರು ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+