Get Updates
Get notified of breaking news, exclusive insights, and must-see stories!

ಚಾಮರಾಜನಗರ: ಬೈಕ್‌ನಲ್ಲಿ ಅಕ್ರಮವಾಗಿ ಶ್ರೀಗಂಧ ಸಾಗಾಟ: ಆರೋಪಿಗಳನ್ನು ಬಲೆಗೆ ಕಡವಿದ ಪೊಲೀಸರು

ಚಾಮರಾಜನಗರ, ಸೆಪ್ಟೆಂಬರ್‌, 09: ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಶ್ರೀಗಂಧದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ಚಾಮರಾಜನಗರ ಜಿಲ್ಲೆ, ಹನೂರು ತಾಲ್ಲೂಕಿನ ರಾಮಪುರದಲ್ಲಿ ನಡೆದಿದೆ. ಹಾಗಾದರೆ ಬಂಧಿತ ಆರೋಪಿಗಳ ಹಿನ್ನೆಲೆ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಹನೂರು ತಾಲೂಕಿನ ರಾಮಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುತ್ತುಶೆಟ್ಟಿಯೂರು ಗ್ರಾಮದ ಸೇಟು, ವಿಜಯ್ ಅಲಿಯಾಸ್ ವಿಜಿ ಬಂಧಿತ ಆರೋಪಿಗಳು‌.

Illegal Sandalwood transportation on bike at Ramapura Two accused arrested

ರಾಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ಅಜ್ಜೀಪುರ ಗ್ರಾಮದ ಕಡೆಯಿಂದ, ಮಂಚಾಪುರ ಗ್ರಾಮದ ಹೊರವಲಯದಲ್ಲಿನ ಉಡುತೊರೆ ಜಲಾಶಯದ ಚಾನೆಲ್ ರಸ್ತೆ ಮಾರ್ಗವಾಗಿ ರಾಮಾಪುರ ಗ್ರಾಮದ ಕಡೆಗೆ ದ್ವಿಚಕ್ರ ವಾಹನದಲ್ಲಿ ಶ್ರೀಗಂಧದ ತುಂಡುಗಳನ್ನು ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ರಾಮಾಪುರ ಪೊಲೀಸರು ದಾಳಿ ನಡೆಸಿ ಮಾಲು ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.

75,000 ರೂಪಾಯಿ ಮೌಲ್ಯದ 15 ಕೆಜಿ 30 ಗ್ರಾಂ ಶ್ರೀಗಂಧದ 36 ತುಂಡುಗಳು, 350 ಗ್ರಾಂ ತೂಕದ ಶ್ರೀಗಂಧದ ಚೆಕ್ಕೆಗಳು, ಬೈಕ್ ಅನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಇನ್ನು ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ವೈದ್ಯನಿಗೆ ವಂಚಿಸಿದ ಆರೋಪಿಗಳ ಪತ್ತೆ: ಸೈಬರ್‌ ವಂಚಕರು ಸಾಮಾನ್ಯ ಜನರಿಂದ ಹಣ ದೋಚುತ್ತಿರುವ ಘಟನೆಗಳು ಹೆಚ್ಚಾಗುತ್ತಲಿವೆ. ಅಲ್ಲದೆ, ಹಲವು ಸೈಬರ್‌ ಕಳ್ಳರನ್ನು ಪೊಲೀಸರು ಸದೇ ಬಡಿದ ಘಟನೆಗಳು ನಡೆದಿವೆ. ಇನ್ನು ಇದೀಗ ಸೈಬರ್ ವಂಚಕರಿಂದ 1 ಕೋಟಿ 27 ಲಕ್ಷ ರೂಪಾಯಿ ಹಣ ಕಳೆದುಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಚಿತ್ರದುರ್ಗ ಸೈಬರ್ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ವೈದ್ಯರಾದ ಶ್ರೀನಿವಾಸ್ ಶೆಟ್ಟಿಯವರಿಗೆ ಕಳೆದ ಆಗಸ್ಟ್ 25ರಂದು ಸೈಬರ್ ವಂಚಕರು ಕರೆ ಮಾಡಿ ನಾವೂ TRAI & ಮುಂಬೈ ಪೊಲೀಸರು ಎಂದು ಹೇಳಿ ಅವರ ಖಾತೆಯಿಂದ ಖಾತೆಗೆ 1 ಕೋಟಿ 27 ಲಕ್ಷ ರೂಪಾಯಿ ಹಣ ವರ್ಗಾವಣೆ ಮಾಡಿಕೊಂಡಿದ್ದರು. ಈ ಕುರಿತು ನಗರದ CEN ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಈ ದೂರಿನ ಮೇರೆಗೆ ಪೊಲೀಸ್ ಅಧೀಕ್ಷಕರಾದ ರಂಜಿತ್ ಬಂಡಾರು ಐ.ಪಿ.ಎಸ್., ಹೆಚ್ಚುವರಿ ಪೊಲೀಸ್ ಅಧೀಕ್ಷಕರವರಾದ ಕುಮಾರಸ್ವಾಮಿ ಎಸ್‌.ಜೆ. ಇವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕರು ಸಿಇಎನ್ ಪೊಲೀಸ್ ಠಾಣೆರವರಾದ ಉಮೇಶ್ ಈಶ್ವರ್ ನಾಯ್ಕ್ ಅವರ ನಾಯಕತ್ವದಲ್ಲಿ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ವೆಂಕಟೇಶ್ ಎನ್., D.S.B ಬ್ರಾಂಚ್ ಪಿಎಸ್‌ಐ ಸತೀಶ್ ನಾಯ್ಕ್, ಸಿಬ್ಬಂದಿಗಳಾದ ಕೆಂಚಪ್ಪ, ಗಗನ್ ದೀಪ್ ಅವರೊಂದಿಗೆ ಪ್ರಕರಣವನ್ನು ಬೆನ್ನತ್ತಿದ್ದರು.

ಅಸ್ಸಾಂನ ಶಿವಸಾಗರ್ ಜಿಲ್ಲೆಯ ಭಾನ್ ಮುಖ್ ಪತ್ತರ್ ಗ್ರಾಮಕ್ಕೆ ಹೋಗಿ ಆರೋಪಿ ಪಬನ್ ಕುಮಾರ್ ಬೋರ್ ಪಾತ್ರಾರವರನ್ನು ಸೆಪ್ಟೆಂಬರ್ 5ರಂದು ಬಂಧಿಸಿದ್ದು, ಅವನಿಂದ ಮಾಹಿತಿ ಪಡೆದು ಇನ್ನೊಬ್ಬ ಆರೋಪಿ ಜಾಕೀರ್ ಆಲಂ ಬೋರಾನನ್ನು ಸೆಪ್ಟೆಂಬರ್ 07ರಂದು ವಿಚಾರಣೆಗೆ ಒಳಪಡಿಸಿದ್ದರು. ಇನ್ನು ಪ್ರಕರಣದಲ್ಲಿ ಭಾಗಿಯಾದ ಬಗ್ಗೆ ತಿಳಿದುಬಂದಿದ್ದು, ಬಂಧಿಸಿ ಇಬ್ಬರನ್ನೂ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಈ ಪ್ರಕರಣದಲ್ಲಿ ಇದುವರೆಗೆ ವಿವಿಧ ಖಾತೆಗಳಲ್ಲಿ 16,89,000 ರೂಪಾಯಿ ಫ್ರೀಜ್ ಮಾಡಿಸಿದ್ದು, ಮತ್ತಷ್ಟು ಹಣವನ್ನು ಫ್ರೀಜ್ ಮಾಡಿಸಿ ದೂರುದಾರರಿಗೆ ಹಿಂದಿರುಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಪ್ರಕರಣ ವರದಿಯಾದ ಕೇವಲ 15 ದಿನಗಳಲ್ಲಿ ಪ್ರಕರಣವನ್ನು ಭೇಧಿಸಿದ ಸಿಇಎನ್ ಠಾಣೆಯ ಎಲ್ಲಾ ಅಧಿಕಾರಿ ಮತ್ತು ತಾಂತ್ರಿಕ ವಿಶ್ಲೇಷಣೆ ನಡೆಸಿದ ಸಿಬ್ಬಂದಿಯರಿಗೆ ಪೊಲೀಸ್ ಅಧೀಕ್ಷಕರು ಶಾಘಿಸಿರುತ್ತಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+