ಚೆಂಡು ಹೂ ಸಂಸ್ಕರಣಾ ಘಟಕದ ವಿರುದ್ಧ ಸಿಡಿದೆದ್ದ ರೈತರು

By: ನಮ್ಮ ಪ್ರತಿನಿಧಿ
Subscribe to Oneindia Kannada

ಚಾಮರಾಜನಗರ, ಜುಲೈ 25: ಗುಂಡ್ಲುಪೇಟೆ ತಾಲೂಕಿನ ಕಗ್ಗಳದಹುಂಡಿ ಬಳಿ ಸ್ಥಳೀಯ ರೈತರ ವಿರೋಧದ ನಡುವೆ ಚೈನಾ ಮೂಲದ ಕಂಪನಿಯ ಚೆಂಡುಮಲ್ಲಿಗೆ ಸಂಸ್ಕರಣಾ ಘಟಕ ಸ್ಥಾಪನೆ ಮಾಡುತ್ತಿದ್ದು, ಇದನ್ನು ವಿರೋಧಿಸಿ ಪ್ರತಿಭಟನೆ ನಡೆಯುತ್ತಲೇ ಇದೆ.

ಈ ನಡುವೆ ತಾಲೂಕು ಆಡಳಿತ ಪ್ರತಿಭಟನೆ ನಡೆಸದಂತೆ ನಿಷೇದಾಜ್ಞೆ ಹೇರಿದ್ದರೂ ಅದನ್ನು ಉಲ್ಲಂಘಿಸಿ ರೈತರು ಪ್ರತಿಭಟನೆ ನಡೆಸಿದ್ದು, ಸುಮಾರು 300 ಕ್ಕೂ ಹೆಚ್ಚು ರೈತರು, ಮಹಿಳೆಯರು ಹಾಗೂ ಗ್ರಾಮಸ್ಥರನ್ನು ಪೊಲೀಸರು ಬಂಧಿಸಿದ್ದಾರೆ.[ಗುಂಡ್ಲುಪೇಟೆಯಲ್ಲಿ ಚೆಂಡುಮಲ್ಲಿಗೆ ಹೂಗಳ ದುರ್ವಾಸನೆ!]

ರೈತ ಸಂಘಟನೆಗಳು ಮತ್ತು ಸ್ಥಳೀಯ ಗ್ರಾಮಸ್ಥರು ಪ್ರತಿಭಟನೆ ನಡೆಸುವುದಾಗಿ ಗುಂಡ್ಲುಪೇಟೆ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.

ಅದರಂತೆ ವೃತ್ತ ನಿರೀಕ್ಷಕರು ಸೂಚನೆ ಅನ್ವಯ ತಾಲೂಕು ಆಡಳಿತ ಸಂಸ್ಕರಣಾ ಘಟಕ ಸುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ ಐಪಿಸಿ ಕಲಂ 144 ನೇ ಸೆಕ್ಷನ್ ಅನ್ವಯ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ನಿಷೇದಾಜ್ಞೆ ಜಾರಿಗೊಳಿಸಿತ್ತು.[ಕೊಡಗಿನ ಮಳೆಗಾಲದ ಸುಂದರಿ ಡೇಲಿಯಾ]

ಇದರಿಂದಾಗಿ ಕಗ್ಗಳದಹುಂಡಿ ಗೇಟ್‍ನಿಂದ ಸಂಸ್ಕರಣಾ ಘಟಕದ ವರೆಗೂ ಜಿಲ್ಲೆ ಮತ್ತು ತಾಲೂಕಿನ ನಾನಾ ಠಾಣೆಗಳ, ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸೇರಿ ಇನ್ನೂರಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಕಗ್ಗಳದಹುಂಡಿ ಗ್ರಾಮದ ಬಳಿ ಬೀಡು ಬಿಟ್ಟಿದ್ದರು.

ಅಲ್ಲದೆ ಸ್ಥಳದಲ್ಲಿದ್ದ ಅದೇ ಗ್ರಾಮದ ವೃದ್ಧರನ್ನು ಕೂಡ ಪೊಲೀಸರು ಬಲವಂತವಾಗಿ ಎಳೆದೊಯ್ದರು. ಅಲ್ಲದೇ ನೆರೆ ಜಮೀನುಗಳಲ್ಲಿ ಕೃಷಿ ಕೆಲಸದಲ್ಲಿ ನಿರತರಾಗಿದ್ದ ರೈತರನ್ನು ಬಲವಂತದಿಂದ ಬಂಧಿಸಲಾಯಿತು.

ಪೊಲೀಸರ ಬೆಂಗಾವಲಿನಲ್ಲಿ ಘಟಕ ಸೇರಿದ ಹೂವುಗಳು

ಪೊಲೀಸರ ಬೆಂಗಾವಲಿನಲ್ಲಿ ಘಟಕ ಸೇರಿದ ಹೂವುಗಳು

ಕಾರ್ಖಾನೆ ಸ್ಥಾಪನೆಗೆ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಕಳೆದೆಡರಡು ತಿಂಗಳಿಂದ ಆಸ್ಪತ್ರೆ ಬಳಿ ಶೇಖರಿಸಿದ್ದ ಭಾರೀ ಯಂತ್ರೋಪಕರಣಗಳನ್ನು ಮತ್ತು ಹೊರ ತಾಲೂಕುಗಳಲ್ಲಿ ಖರೀದಿಸಿ ತಂದ ಚೆಂಡು ಮಲ್ಲಿಗೆ ಹೂವನ್ನು ಮೂರ್ನಾಲ್ಕು ಟ್ರಕ್ ಗಳ ಮೂಲಕ ಪೊಲೀಸರ ಬೆಂಗಾವಲಿನಲ್ಲಿ ಘಟಕಕ್ಕೆ ಸಾಗಿಸಲಾಯಿತು.

ಸುಮಾರು 250 ಕ್ಕೂ ಹೆಚ್ಚಿದ್ದ ಪೊಲೀಸ್ ಸಿಬ್ಬಂದಿಗಳು

ಸುಮಾರು 250 ಕ್ಕೂ ಹೆಚ್ಚಿದ್ದ ಪೊಲೀಸ್ ಸಿಬ್ಬಂದಿಗಳು

ಸುಮಾರು 250 ಕ್ಕೂ ಹೆಚ್ಚಿದ್ದ ಪೊಲೀಸ್ ಸಿಬ್ಬಂದಿಗಳು ಚಾಮರಾಜನಗರ ಉಪವಿಭಾಗ ಡಿವೈಎಸ್‍ಪಿ ಎಸ್.ಈ.ಗಂಗಾಧರಸ್ವಾಮಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಡೆಸಿದ್ದರು. 40 ರಿಂದ 50 ರಷ್ಟು ಜನರಿದ್ದ ಮೂರ್ನಾಲ್ಕು ಬಾರಿ ಪ್ರತಿಭಟನೆ ನಡೆಸಿದ ತಂಡಗಳನ್ನು ಬಂಧಿಸಿ ಪಟ್ಟಣದ ಹೊರ ವಲಯ ವೀರನಪುರ ಗೇಟ್ ಬಳಿ ಇರುವ ಅಲ್ಪಸಂಖ್ಯಾತ ಮೊರಾರ್ಜಿದೇಸಾಯಿ ವಸತಿ ಶಾಲೆ ಆವರಣದಲ್ಲಿ ಬಂಧಿಸಿಡಲಾಯಿತು.

ಸಂಸ್ಕರಣಾ ಘಟಕ ಸ್ಥಾಪನೆ ವಿರೋಧಿಸಿ ಪ್ರತಿಭಟನೆ

ಸಂಸ್ಕರಣಾ ಘಟಕ ಸ್ಥಾಪನೆ ವಿರೋಧಿಸಿ ಪ್ರತಿಭಟನೆ

ಸಂಸ್ಕರಣಾ ಘಟಕ ಸ್ಥಾಪನೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಾಕಾರರ ಜೊತೆ ಕೃಷಿಯಲ್ಲಿ ತೊಡಗಿದ್ದ ಹಲವು ಮಹಿಳೆಯರನ್ನು ಜಮೀನಿಗೆ ನುಗ್ಗಿ ಬಲವಂತವಾಗಿ ಬಂಧಿಸಿದರು. ಮಹಿಳಾ ಪೊಲೀಸರ ಸಹಾಯದಿಂದ ರೈತ ಮಹಿಳೆಯರನ್ನು ಎಳೆದೊಯ್ದು ಪೊಲೀಸ್ ವಾಹನಕ್ಕೆ ತುಂಬಿದರು.

ಖಾಲಿ ಹಾಳೆ ಮೇಲೆ ಸಹಿ ಮಾಡುವಂತೆ ಬೆದರಿಕೆ

ಖಾಲಿ ಹಾಳೆ ಮೇಲೆ ಸಹಿ ಮಾಡುವಂತೆ ಬೆದರಿಕೆ

ಕಗ್ಗಳದಹುಂಡಿ ಬಳಿ ಪ್ರತಿಭಟನೆ ನಡೆಸಿದ ಸಂದರ್ಭ ಬಂಧಿಸಿದ ಕೆಲವು ರೈತರನ್ನು ಠಾಣೆಗೆ ಕರೆದೊಯ್ದ ಪೊಲೀಸರು ಅವರಿಂದ ಮೊಬೈಲ್ ಗಳನ್ನು ಬಲವಂತವಾಗಿ ಕಿತ್ತುಕೊಂಡು, ಖಾಲಿ ಹಾಳೆ ಮೇಲೆ ಸಹಿ ಮಾಡುವಂತೆ ಬೆದರಿಕೆ ಹಾಕಿದರು. ಸಹಿ ಮಾಡುವುದಿಲ್ಲ ಎಂದು ಹಠ ಹಿಡಿದ ರೈತರನ್ನು ಪ್ರಕರಣ ದಾಖಲಿಸುವುದಾಗಿ ಬೆದರಿಸಿ, ಹಲ್ಲೆ ನಡೆಸಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Farmers protest against Chinese Marigold Flower Plant in Kaggalahundi village in the Gundlupet taluk, Chamarajanagar district.
Please Wait while comments are loading...