ಗುಂಡ್ಲುಪೇಟೆ: ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ವ್ಯಕ್ತಿಯ ಅಂಕೌಂಟ್‌ಗೆ ಬಿತ್ತು ₹2,00,000-ಹೇಗೆ ಸಾಧ್ಯ?-ಮಾಹಿತಿ
ಚಾಮರಾಜನಗರ, ಜೂನ್, 07: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯು ಕುಟುಂಬಕ್ಕೆ ನೆರವಾದ ಘಟನೆ ಗುಂಡ್ಲುಪೇಟೆ ತಾಲೂಕಿನ ಕಾಳನಹುಂಡಿ ಗ್ರಾಮದಲ್ಲಿ ನಡೆದಿದೆ.
ಗುಂಡ್ಲುಪೇಟೆ ತಾಲೂಕಿನ ಕಾಳನಹುಂಡಿ ಗ್ರಾಮದ ಮಣಿಕಂಠ(23) ಎಂಬ ಯುವಕ ಕರ್ನಾಟಕ ಗ್ರಾಮೀಣ ಬ್ಯಾಂಕ್ ನ ಬೇಗೂರು ಶಾಖೆಯಲ್ಲಿ 20 ರೂಪಾಯಿ ಹಣ ಪಾವತಿಸಿ ಪಿಎಂ ಸುರಕ್ಷಾ ಯೋಜನೆ ವಿಮೆ ಪಡೆದಿದ್ದರು. ಅದಾದ ಎರಡೇ ತಿಂಗಳಲ್ಲಿ ನಂಜನಗೂಡು ತಾಲೂಕಿನ ಎಲಚಗೆರೆ ಗೇಟ್‌ನಲ್ಲಿ ಬೈಕ್-ಕಾರು ಅಫಘಾತದಲ್ಲಿ ಮಣಿಕಂಠ ತೀವ್ರವಾಗಿ ಗಾಯಗೊಂಡು ಬಳಿಕ ಅಸುನೀಗಿದ್ದರು.

ಮೃತಪಟ್ಟ ವಿಚಾರ ತಿಳಿದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಸಿಬ್ಬಂದಿ ಎಲ್ಲಾ ದಾಖಲೆ ಪ್ರಕ್ರಿಯೆ ಮುಗಿಸಿ ವಿಮೆಯ ನಾಮಿನಿಯಾಗಿದ್ದ ಮಣಿಕಂಠ ತಾಯಿ ಮಹಾದೇವಮ್ಮ ಅವರಿಗೆ 2,00,000 ರೂಪಾಯಿ ಪರಿಹಾರದ ಮೊತ್ತವನ್ನು ಶುಕ್ರವಾರ (ಜೂನ್ 07) ವಿತರಿಸಿದ್ದಾರೆ.
ಅಂದಹಾಗೆ, ಕೇವಲ 20 ರೂಪಾಯಿ ಪಾವತಿಸಿ ವಿಮೆ ಪಡೆದಿದ್ದು, ಈಗ ಕುಟುಂಬಕ್ಕೆ ನೆರವಾದಂತಾಗಿದ್ದು, ಕುಟುಂಬಕ್ಕೆ ಪಿಎಂ ಸುರಕ್ಷಾ ಭೀಮಾ ಯೋಜನೆ ನೆರವಾಗಿದೆ.
ಲಾರಿಗೆ ಕುರಿ ತುಂಬಿದ್ದ ಅಶೋಕ್ ಲೇಲ್ಯಾಂಡ್ ಡಿಕ್ಕಿ: ಮುಂದೆ ಚಲಿಸುತ್ತಿದ್ದ ಲಾರಿಗೆ ಕುರಿ ತುಂಬಿದ್ದ ಅಶೋಕ್ ಲೈಲಾಂಡ್ ಡಿಕ್ಕಿಯಾದ ರಭಸಕ್ಕೆ ಇಬ್ಬರು ಕುರಿ ವ್ಯಾಪಾರಿಗಳು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹಿರಿಯೂರು ನಗರದ ಹೊರವಲಯದ ಆರ್.ಕೆ.ಪವರ್ ಜಿನ್ ಬಳಿ ಘಟನೆ ಇತ್ತೀಚೆಗಷ್ಟೇ ನಡೆದಿತ್ತು.
ಮೃತರನ್ನು ಚಳ್ಳಕೆರೆ ತಾಲೂಕಿನ ಹುಲಿಕುಂಟೆ ಗ್ರಾಮದ ರಮೇಶ್(55) ಹಾಗೂ ಬೆಳೆಗೆರೆ ಶಿವಲಿಂಗಪ್ಪ (65) ಮೃತರು ಎಂದು ಗುರುತಿಸಲಾಗಿದೆ. ಇನ್ನು ಗಾಯಗೊಂಡವರನ್ನು ಸ್ಥಳೀಯ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರು ಚಳ್ಳಕೆರೆಯ ತಾಲೂಕಿನ ತನ್ನ ಗ್ರಾಮದಿಂದ ಹಿರಿಯೂರು ಕುರಿ ಸಂತೆಗೆ ಕುರಿ ವ್ಯಾಪಾರ ಮಾಡಲು ಅಶೋಕ್ ಲೈಲ್ಯಾಂಡ್ ಗಾಡಿಯಲ್ಲಿ ಕುರಿ ತುಂಬಿಕೊಂಡು ಬರುತ್ತಿರುವಾಗ ಮುಂದೆ ಚಲಿಸುತ್ತಿದ್ದ ಲಾರಿಗೆ ಅಶೋಕ್ ಲೈಲಾಂಡ್ ಗಾಡಿ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಇಬ್ಬರು ಕುರಿ ವ್ಯಾಪಾರಿಗಳು ಸ್ಥಳದಲ್ಲೇ ಅಸುನೀಗಿದ್ದಾರೆ.
ಇನ್ನು ಅಪಘಾತದ ರಭಸಕ್ಕೆ ಅಶೋಕ್ ಲೈಲ್ಯಾಂಡ್ ವಾಹನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಗ್ರಾಮಾಂತರ ಪೊಲೀಸ್ ಠಾಣೆ ಸಿಪಿಐ ಕಾಳಿಕೃಷ್ಣ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ತಿಳಿದುಬಂದಿದೆ.












Click it and Unblock the Notifications