ಚಾಮರಾಜ ನಗರ ಜಿಲ್ಲೆಗೆ ಸರ್ಕಾರ ಕೊಟ್ಟ ಅನುದಾನ ಎಷ್ಟು?
ಚಾಮರಾಜನಗರ, ಏಪ್ರಿಲ್ 13 : ಚಾಮರಾಜನಗರ ಜಿಲ್ಲೆಗೆ ಭೇಟಿ ನೀಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆಯನ್ನು ಸುಳ್ಳಾಗಿಸಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ. ಚಾಮರಾಜನಗರವನ್ನು ಅಭಿವೃದ್ದಿ ಮಾಡುವೆ ಎಂದು ಸಿದ್ದರಾಮಯ್ಯ ಹಲವಾರು ಬಾರಿ ಹೇಳಿದ್ದರು.
ಒನ್ ಇಂಡಿಯಾ ಕನ್ನಡ ಚಾಮರಾಜನಗರ ಜಿಲ್ಲೆಗೆ ಸರ್ಕಾರ ಎಷ್ಟು ಅನುದಾನ ಬಿಡುಗಡೆ ಮಾಡಿದೆ? ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಿದೆ. 2013ರ ಜೂನ್‌ನಿಂದ 2017ರ ಡಿಸೆಂಬರ್ ತನಕ ಬಿಡುಗಡೆಯಾದ ಅನುದಾನದ ಮಾಹಿತಿ ಆರ್‌ಟಿಐ ಅಡಿ ಪಡೆದಿದೆ.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯಡಿ ಕ್ಷೇತ್ರವಾರು ಬಿಡುಗಡೆಯಾದ ಅನುದಾನದ ವಿವರವರನ್ನು ಜಿಲ್ಲಾಧಿಕಾರಿಗಳ ಕಾರ್ಯಾಲಯ ನೀಡಿದೆ. ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನವನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳಲಾಗಿದೆ.

ಪ್ರತಿ ಕ್ಷೇತ್ರಕ್ಕೆ 948.08 ಲಕ್ಷ ರೂ. ಅನುದಾನ 5 ವರ್ಷಗಳಲ್ಲಿ ಬಿಡುಗಡೆಯಾಗಿದೆ. ಅನುದಾನ ಬಳಕೆಯಾಗಿದ್ದು ಯಾವ ಕ್ಷೇತ್ರದಲ್ಲೂ ಬಾಕಿ ಉಳಿದಿಲ್ಲ.
ಕ್ಷೇತ್ರಕ್ಕೆ ಬಿಡುಗಡೆಯಾದ ಅನುದಾನದ ವಿವರ
* ಚಾಮರಾಜನಗರ 948.08 ಲಕ್ಷ
* ಗುಂಡ್ಲುಪೇಟೆ 909.96 ಲಕ್ಷ
* ಕೊಳ್ಳೇಗಾಲ 948.08 ಲಕ್ಷ
* ಹನೂರು 948.08 ಲಕ್ಷ












Click it and Unblock the Notifications