ಗುಂಡ್ಲುಪೇಟೆ ಉಪಚುನಾವಣೆ: ಡಿಕೆಶಿ ರಾಜಕೀಯ ತಂತ್ರಗಳು ಸಕ್ಸಸ್

Posted By:
Subscribe to Oneindia Kannada

ಗುಂಡ್ಲುಪೇಟೆ, ಏಪ್ರಿಲ್ 14 : ರಾಜ್ಯ ಇಂಧನ ಸಚಿವ ಡಿ ಕೆ ಶಿವಕುಮಾರ್ ಗುಂಡ್ಲುಪೇಟೆಯಲ್ಲಿ ಗೀತಾಮಹದೇವ ಪ್ರಸಾದ್ ಅವರನ್ನು ಗೆಲ್ಲಿಸಲು ಮಾಡಿದ ರಲ್ಲಾ ರಾಜಕೀಯ ತಂತ್ರಗಳು ಸಕ್ಸಸ್ ಆಗಿ ಗೆಲುವಿನ ನಗೆ ಬೀರಿದ್ದಾರೆ.

ಕಾಂಗ್ರೆಸ್ ಪಕ್ಷದಿಂದ ಅಭ್ಯರ್ಥಿಯಾಗಿ ಗೀತಾಮಹದೇವಪ್ರಸಾದ್ ಹೆಸರು ಹೊರಬೀಳುತ್ತಿದ್ದಂತೆ ಕ್ಷೇತ್ರದ ಚುನಾವಣೆಯ ಉಸ್ತುವಾರಿಯನ್ನು ಡಿಕೆ.ಶಿವಕುಮಾರ್‍ ವಹಿಸಲಾಗಿತ್ತು.[ಕಾಂಗ್ರೆಸ್ ಗೆಲುವಿಗೆ ಸೋಪಾನವಾದ 9 ಸಂಗತಿಗಳು]

ಡಿಕೆ ಶಿವಕುಮಾರ್ ಕ್ಷೇತ್ರಕ್ಕೆ ಕಾಲಿಡುವ ಮೊದಲೇ ಯುವ ಕಾಂಗ್ರೆಸ್ ಕಾರ್ಯಕರ್ತರ ತಂಡವನ್ನು ರೂಪಿಸಿ ಪಕ್ಷದ ವರ್ಚಸ್ಸಿನ ಬಗ್ಗೆ ಹಾಗೂ ನಿಷ್ಠಾವಂತ ಕಾರ್ಯಕರ್ತರ ಪಟ್ಟಿಯನ್ನು ರಚಿಸಿಕೊಂಡು ಗುಪ್ತಸಭೆ ನಡೆಸಿದ್ದರು.

Energy minister DK Shivakumar political strategy succeeded in Gundlupet by-election

ಕ್ಷೇತ್ರದ ಬಗ್ಗೆ ಮಾಹಿತಿ ಪಡೆದುಕೊಂಡು ಹಳ್ಳಿಗಳಲ್ಲಿನ ಕಾರ್ಯಕರ್ತರು ಮತ್ತು ಮುಖಂಡರ ಕಾರ್ಯ ವೈಖರಿ ಬಗ್ಗೆ ಹೆಚ್ಚು ನಿಗಾವಹಿಸಿದರು.

ಕ್ಷೇತ್ರದ 250 ಬೂತ್ ಮಟ್ಟದಲ್ಲೂ ಗ್ರಾ.ಪಂ.ಸದಸ್ಯರು, ಅಧ್ಯಕ್ಷರು, ತಾ.ಪಂ.ಸದಸ್ಯರು, ಅಧ್ಯಕ್ಷರು, ಪುರಸಭೆ ಸದಸ್ಯರು ಅಧ್ಯಕ್ಷರು ಜಿ.ಪಂ.ಸದಸ್ಯರು ಅಧ್ಯಕ್ಷರ ಸಭೆ ನಡೆಸಿ ರಣತಂತ್ರ ರೂಪಿಸಿದ್ದರು.[ಗುಂಡ್ಲುಪೇಟೆ: ಅನುಕಂಪದ ಅಲೆ ಮೇಲೆ ಗೀತಾ ಜಯಭೇರಿ]

ಕ್ಷೇತ್ರದ ಎಲ್ಲ ಹಳ್ಳಿಗಳಲ್ಲೂ ಬಿರುಸಿನ ಪ್ರಚಾರ ನಡೆಸಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ರೋಡ್‍ ಶೋ ನಡೆಸಿದರು. ಆಯಾ ಜಾತಿ ಮುಖಂಡರು ಮತ್ತು ಸಚಿವರ ಬಹಿರಂಗಸಭೆ ನಡೆಸಿದರು. ಮಂತ್ರಿ ಮಂಡಲವನ್ನೇ ಕರೆಯಿಸಿ ಬೃಹತ್ ಬಹಿರಂಗ ಸಭೆ ನಡೆಸಿ ಎಲ್ಲರ ಗಮನ ಸೆಳೆದರು.

ಹರವೆ ಕ್ಷೇತ್ರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿಗೆ ಅನುಕೂಲಕರ ವಾತಾವರಣ ಇದ್ದುದರಿಂದ ಮತ್ತು ಲಿಂಗಾಯಿತರ ಮತಗಳ ಮೇಲೆ ಹೆಚ್ಚು ಕೇಂದ್ರೀಕರಿಸಿ ಅಲ್ಲಿನ ಚುನಾಯಿತ ಪ್ರತಿನಿಧಿಗಳನ್ನು ಸರಿಯಾಗಿ ಬಳಿಸಿಕೊಂಡರು. ಇದಕ್ಕೆ ಜಿ.ಪಂ.ಸದಸ್ಯ ಕೆರಳ್ಳಿ ನವೀನ್ ಸಾಥ್ ನೀಡಿದರು.

ಅಲ್ಲದೆ ಆಯಾ ಮುಖಂಡರ ಸಚಿವರ ಸಭೆ ನಡೆಸಿ ಮತ ಬೇಟೆಯಲ್ಲಿ ತೊಡಗಿ ಅಂತಿಮವಾಗಿ ಬಿಜೆಪಿ ಭದ್ರಕೋಟೆಯಂತಿದ್ದ ಹರವೆ ಜಿ.ಪಂ. ಕ್ಷೇತ್ರದಲ್ಲೂ ಹೆಚ್ಚಿನ ಅಂತರದಿಂದ ಗೆಲುವು ಪಡೆಯುವಲ್ಲಿಯೂ ಯಶಸ್ಸು ಕಂಡಿದ್ದಾರೆ.

ಡಿಕೆಶಿ ಮಾಡಿದ ಲೆಕ್ಕಚಾರ ಕೊನೆಗೂ ಕೆಲಸ ಮಾಡಿದೆ. ಗೆಲುವು ಕಾಂಗ್ರೆಸ್‍ ಪರವಾಗಿ ಬಂದಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Energy minister DK Shivakumar political strategy success in Gundlupet by-election. The congress candidate Geeta Mahadev Prasad wins 12,77 votes.
Please Wait while comments are loading...