Covid-19: ಕೇರಳ ಗಡಿಯಲ್ಲಿ ಚಾಮರಾಜನಗರ ಜಿಲ್ಲೆ ಆರೋಗ್ಯ ಇಲಾಖೆ ಹೈ ಅಲರ್ಟ್
ಚಾಮರಾಜನಗರ, ಡಿಸೆಂಬರ್, 20: ಈಗಾಗಲೇ ಈ ಹಿಂದೆ ದೇಶದಲ್ಲಿ ಮಹಾಮಾರಿ ಕೊರೊನಾ ಜನರನ್ನು ತಲ್ಲಣಗೊಳ್ಳುವಂತೆ ಮಾಡಿತ್ತು. ಇದೀಗ ಇದರ ಹೊಸ ರೂಪಾಂತರ jn1 ಮತ್ತೆ ಜನರನ್ನು ಬೆಚ್ಚಿ ಬಿಳುವಂತೆ ಮಾಡಿದೆ. ಆದ್ದರಿಂದ ಕರ್ನಾಟಕದಲ್ಲಿ ಸರ್ಕಾರ ಮುಂಜಾಗ್ರತೆಗಾಗಿ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಿದೆ. ಹಾಗೆಯೇ ಕೇರಳ ಗಡಿಯಲ್ಲಿ ಚಾಮರಾಜನಗರ ಜಿಲ್ಲೆ ಆರೋಗ್ಯ ಇಲಾಖೆ ಹೈ ಅಲರ್ಟ್ ಆಗಿದೆ.

ರೂಪಾಂತರಿ ಕೊರೊನಾ ಹೆಚ್ಚಾದ ಹಿನ್ನೆಲೆ ಕೇರಳ ಗಡಿಯಲ್ಲಿ ಚಾಮರಾಜನಗರ ಆರೋಗ್ಯ ಇಲಾಖೆ ಕಟ್ಟೆಚ್ಚರವಹಿಸಿದ್ದು, ಮೂಲೆಹೊಳೆ ಚೆಕ್ ಪೋಸ್ಟ್‌ನಲ್ಲಿ ಕೇರಳದಿಂದ ಬರುವವರ ತಪಾಸಣೆಗೆ ಮುಂದಾಗಿದೆ. ಕೇರಳದಿಂದ ಬರುತ್ತಿರುವವರಿಗೆ ಜ್ವರ ತಪಾಸಣೆ, ನೆಗಡಿ-ಕೆಮ್ಮು ಇದ್ದವರಿಗೆ ಕೋವಿಡ್ ಟೆಸ್ಟ್ ಮಾಡಿಸಲು ಕೂಡ ಆರೋಗ್ಯ ಇಲಾಖೆ ಶಿಪಾರಸ್ಸು ಮಾಡಿದೆ. ಅಲ್ಲದೆ ಈಗಾಗಲೇ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮವಾಗಿ ತಾಲೂಕು ಹಾಗೂ ಜಿಲ್ಲಾಸ್ಪತ್ರೆಯಲ್ಲಿ ಐಸೋಲೇಟೆಡ್ ವಾರ್ಡ್, ಆಮ್ಲಜನಕ ದಾಸ್ತಾನು ಮಾಡಿದೆ.
ನಮ್ಮ ಮಟ್ರೋದಲ್ಲಿ ಪ್ರಯಾಣಿಕರು ಪಾಲಿಸಬೇಕಾದ ಅಂಶಗಳಿವು
ಕೊರುನಾ ಹೊಸ ರೂಪಾಂತರ jn1 ಹಿನ್ನೆಲೆ ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರು ಈ ಅಂಶಗಳನ್ನು ಪಾಲಿಸಿದರೆ ಒಳ್ಳೆಯದು.
ದೇಶದಲ್ಲಿ ಮಹಮಾರಿ ಕೊರೊನಾ ಹೊಸ ರೂಪಾಂತರ jn1 ಹೆಚ್ಚಳವಾಗುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮುಂಜಾಗ್ರತಾ ಕ್ರಮ ಕೈಗೊಂಡಿವೆ. ಆದರೆ ಪ್ರಯಾಣಿಕರ ದಟ್ಟಣೆಯಿಂದ ಕೂಡಿರುವ ಬೆಂಗಳೂರಿನ ಜೀವನಾಡಿಯಾಗಿರುವ ನಮ್ಮ ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆಗಳಲ್ಲಿ ಯಾವುದೇ ಕ್ರಮಕ್ಕೆ ಸರ್ಕಾರ ಮುಂದಾಗಿಲ್ಲ.
ಆದ್ದರಿಂದ ಬಿಎಂಆರ್‌ಸಿಎಲ್ ಸೇರಿದಂತೆ ಸಾರಿಗೆ ನಿಗಮಗಳು ಸದ್ಯಕ್ಕೆ ತನ್ನ ಪ್ರಯಾಣಿಕರಿಗೆ ಮಾಸ್ಕ್ ಕಡ್ಡಾಯ ಮಾಡಿಲ್ಲ. ಸರ್ಕಾರದ ನಿರ್ದೇಶನಕ್ಕೆ ಕಾಯುತ್ತಿವೆ. ಆದರೆ, ಮೆಟ್ರೋದಲ್ಲಿ ಸದಾ ಎಸಿ ಬಳಸುವುದರಿಂದ ಹಾಗೂ ಪ್ರಯಾಣಿಕರು ನಡುವೆ ಅಂತರ ಇಲ್ಲದೇ ಪ್ರಯಾಣ ಮಾಡುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ಆದ್ದರಿಂದ ಸ್ವತಃ ಪ್ರಯಾಣಿಕರೇ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿಕೊಂಡು ಕೊರೊನಾ ಹೊಸ ವೈರಾಣುವಿನಿಂದ ರಕ್ಷಣೆ ಮಾಡಿಕೊಳ್ಳಬೇಕಿದೆ.
ಪ್ರಮುಖವಾಗಿ ಕೊರೊನಾ ಸೋಂಕಿಗೆ ಮುಂಜಾಗ್ರತೆಯೇ ಮೊದಲ ಮದ್ದು ಎಂದು ವಿಶ್ವಸಂಸ್ಥೆ ಹೇಳಿದೆ. ಅಂದರಂತೆ ಮೆಟ್ರೋ ಸೇರಿದಂತೆ ಸಾರ್ವಜನಿಕ ಸಾರಿಗೆ ಬಳಸುವ ಸಂದರ್ಭದಲ್ಲಿ, ಜನದಟ್ಟಣೆ ಇರುವ ಕಡೆಗಳಲ್ಲಿ ಕಟ್ಟುನಿಟ್ಟಾಗಿ ಕೊರೊನಾ ತಗುಲದಂತೆ ಸ್ವಯಂ ರಕ್ಷಣೆಗೆ ವ್ಯವಸ್ಥೆ ಮಾಡಿಕೊಳ್ಳಬೇಕಿದೆ.
ಪ್ರಯಾಣಿಕರು ಇವುಗಳನ್ನು ಪಾಲಿಸಿದರೆ ಉತ್ತಮ
1. ಮೆಟ್ರೋ ನಿಲ್ದಾಣ ಪ್ರವೇಶಿಸುತ್ತಿದ್ದಂತೆ ಮಾಸ್ಕ್ ಕಡ್ಡಾಯವಾಗಿ ಧರಿಸಿ.
2. ಪ್ರಯಾಣಿಕರ ನಡುವೆ ಅಂತರ ಕನಿಷ್ಟ 3 ಅಡಿಯಷ್ಟು ಕಾಯ್ದುಕೊಳ್ಳಬೇಕು
3. ಪ್ರಯಾಣಿಕರ ಸಂಖ್ಯೆ ಅತೀ ಹೆಚ್ಚಿದ್ದಾಗ ಆ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಬೇಡಿ.
4. ಟಿಕೆಟ್ ಪಡೆಯುವಾಗ, ರೈಲು ಹತ್ತುವಾಗ ಸರತಿಯಲ್ಲಿ ನಿಂತಿದ್ದರೆ ಅಲ್ಲಿಯೂ ಅಂತರ ಕಾಪಾಡಿಕೊಂರಡ ಒಳ್ಳೆಯದು.
5. ಅನಗತ್ಯವಾಗಿ ರೈಲಿನಲ್ಲಿ ಗಾಜು, ಕಿಟಕಿ ಮುಟ್ಟಬೇಡಿ.
5. ರೋಗ ನಿರೋಧಕ ಶಕ್ತಿ ಕಡಿಮೆ ಉಳ್ಳವರು, ಬಾಣಂತಿಯರು, ದೀರ್ಘ ಕಾಲದ ಅನಾರೋಗ್ಯ ಹೊಂದಿರುವವರು ಕೆಲ ದಿನ ಮೆಟ್ರೋ ಬಳಸದಿರುವುದೇ ಉತ್ತಮ.
6. ಸೋಂಕಿನ ಲಕ್ಷಣಗಳಿದ್ದರೆ ಮೆಟ್ರೋ ಬಳಸಬೇಡಿ. ಇನ್ನೊಬ್ಬರಿಗೆ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ.
7. ಮೆಟ್ರೋ ಕಾಯಿನ್ ಒಬ್ಬರಿಂದ ಇನ್ನೊಬ್ಬರಿಗೆ ವರ್ಗಾವಣೆ ಆಗುತ್ತದೆ. ಸಾಧ್ಯ ಆದಷ್ಟು ಸ್ಮಾರ್ಟ್ ಕಾರ್ಡ್, ಮೊಬೈಲ್ ಕ್ಯುಆರ್ ಕೋಡ್ ಬಳಸಿ.
8. ಪ್ರಯಾಣ ಮುಗಿದ ಬಳಿಕ ಮನೆಗೆ ತೆರಳಿದ ಕೂಡಲೇ ಕೈ ತೊಳೆಯುವುದು, ಸ್ನಾನ ಮಾಡುವುದು ಉತ್ತಮವಾಗಿದೆ.
9 ಹಣ ವರ್ಗಾವಣೆಗಿಂತ ಡಿಜಿಟಲ್ ಪೇಮೆಂಟ್ ಬಳಸಿದರೆ ಉತ್ತಮ.
10. ಯಾವುದಕ್ಕೂ ಸುರಕ್ಷತೆಗಾಗಿ ಸ್ಯಾನಿಟೈಸರ್ ಅನ್ನು ಬ್ಯಾಗ್‌ಗಳಲ್ಲಿ ಇಟ್ಟುಕೊಂಡರೆ ಒಳ್ಳೆಯದು.












Click it and Unblock the Notifications