ಚಾಮರಾಜನಗರ; ಚೆಕ್ ಪೋಸ್ಟ್ ರಸ್ತೆಯಲ್ಲೇ ಮದುವೆಯಾದ ಜೋಡಿ
ಚಾಮರಾಜನಗರ, ಜುಲೈ 22: ಚಾಮರಾಜನಗರ ಜಿಲ್ಲೆಯ ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿಯೇ ಕೇರಳ ಮೂಲದ ಯುವಕ ಹಾಗೂ ಶಿವಮೊಗ್ಗ ಜಿಲ್ಲೆಯ ಯುವತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಗತಿ ಜರುಗಿದೆ.
Recommended Video
ಸಿನಿಮಾ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಸರ್ಕಾರ | Oneindia Kannada
ಚಾಮರಾಜನಗರ-ಕೇರಳ ಗಡಿಯ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತಾರಣ್ಯದ ಮೂಲೆಹೊಳೆಯಲ್ಲಿ ನಿನ್ನೆ ಮಧ್ಯಾಹ್ನ ಕೇರಳ ಮೂಲದ ಯುವಕನೊಂದಿಗೆ ಶಿವಮೊಗ್ಗ ಮೂಲದ ಯುವತಿ ವಿವಾಹವಾಗಿದ್ದಾರೆ. ಕೊರೊನಾ ನಿಯಮ ಉಲ್ಲಂಘಿಸಬಾರದೆಂಬ ಉದ್ದೇಶದಿಂದ ಇವರು ಈ ನಿರ್ಧಾರ ಮಾಡಿರುವುದಾಗಿ ತಿಳಿದುಬಂದಿದೆ.
ಕಳೆದ ತಿಂಗಳು ಕೊರೊನಾ ನಡುವೆಯೂ ಇವರ ನಿಶ್ಚಿತಾರ್ಥವಾಗಿತ್ತು. ಇದೀಗ ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ, ಮನೆಯವರ ಒಪ್ಪಿಗೆ ಪಡೆದು ರಸ್ತೆಯಲ್ಲೇ ವಿವಾಹವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಂಧು ಮಿತ್ರರು ಹಾಗೂ ಗಡಿಯಲ್ಲಿದ್ದ ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಸಿಬ್ಬಂದಿ ನವ ಜೋಡಿಗೆ ಶುಭ ಹಾರೈಸಿದ್ದಾರೆ.

ಚೆಕ್ ಪೋಸ್ಟ್ ನಲ್ಲಿ ವರ ತಾಳಿ ಕಟ್ಟುತ್ತಿರುವಾಗ ವಾಹನ ಸವಾರರು ವಿಡಿಯೋ ಮಾಡಿಕೊಂಡಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.












Click it and Unblock the Notifications