ಚಾಮರಾಜನಗರ ಮೂರು ಸುತ್ತಿನ ಮತ ಎಣಿಕೆ ಅಂತ್ಯ: ವಿ.ಸೋಮಣ್ಣಗೆ ತೀವ್ರ ಹಿನ್ನಡೆ
ಚಾಮರಾಜನಗರ, ಮೇ 13: ತೀವ್ರ ಕುತೂಹಲ ಮೂಡಿಸಿರುವ ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶದ ಮತ ಎಣಿಕೆ ಆರಂಭವಾಗಿದ್ದು, ರಾಜ್ಯದ ಒಟ್ಟು 2,615 ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಆರಂಭವಾಗಿದೆ.
ಚಾಮರಾಜನಗರ ಹೊರವಲಯದ ಬೇಡರಪುರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮತ ಎಣಿಕೆ ನಡೆಯುತ್ತಿದ್ದು, ಈಗಾಗಲೇ ಮೂರು ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಿದೆ. ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಮೂರು ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಸಿ. ಪುಟ್ಟರಂಗ ಶೆಟ್ಟಿ ಮುನ್ನಡೆ ಸಾಧಿಸಿದ್ದಾರೆ.ವಿ. ಸೋಮಣ್ಣ ತೀವ್ರ ಹಿನ್ನಡೆಯಲ್ಲಿದ್ದಾರೆ.

ಮೊದಲ ಸುತ್ತಿನ ಮತ ಎಣಿಕೆ ಪೂರ್ಣಗೊಂಡ ಬಳಿಕ ಫಲಿತಾಂಶದ ವಿವರ
ಸಿ.ಪುಟ್ಟರಂಗ ಶೆಟ್ಟಿ -4,865
ವಿ. ಸೋಮಣ್ಣ- 4,663
ಮೊದಲ ಸುತ್ತಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ. ಪುಟ್ಟರಂಗ ಶೆಟ್ಟಿ 202 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಎರಡನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡ ಬಳಿಕ ಫಲಿತಾಂಶದ ವಿವರ
ಸಿ.ಪುಟ್ಟರಂಗಶೆಟ್ಟಿ- 5684
ವಿ.ಸೋಮಣ್ಣ- 4643
ಮೂರು ಸುತ್ತಿನ ಮತ ಎಣಿಕೆ ಪೂರ್ಣಗೊಂಡ ಬಳಿಕ ಫಲಿತಾಂಶದ ವಿವರ
ಸಿ.ಪುಟ್ಟರಂಗಶೆಟ್ಟಿ- 5684
ವಿ.ಸೋಮಣ್ಣ- 4643
ಮೂರು ಸುತ್ತಿನ ಮತ ಎಣಿಕೆ ಪೂರ್ಣಗೊಂಡ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಸಿ. ಪುಟ್ಟರಂಗ ಶೆಟ್ಟಿ 21,237 ಮತಗಳನ್ನು ಪಡೆದಿದ್ದು, ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ 16,727 ಮತಗಳನ್ನು ಪಡೆದಿದ್ದಾರೆ.












Click it and Unblock the Notifications