ಬಂಡೀಪುರ: ಕ್ಯಾಮೆರಾ ಕಣ್ಣಿಗೆ ಸೆರೆಯಾಯ್ತು ವಿಭಿನ್ನ, ವಿಶೇಷ ಚಿರತೆ, ಭಾರೀ ವೈರಲ್
ಚಾಮರಾಜನಗರ, ಆಗಸ್ಟ್, 05: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಾಗುತ್ತಲೇ ಇರುತ್ತದೆ. ಹಾಗೆಯೇ ಇದೀಗ ಈ ಜನಪ್ರಿಯ ಹುಲಿ ರಕ್ಷಿತಾರಣ್ಯ ಪ್ರದೇಶದಲ್ಲಿ ವಿಭಿನ್ನ, ವಿಶೇಷ ಚಿರತೆ ಕ್ಯಾಮರಾಗೆ ಸೆರೆಯಾಗಿದ್ದು, ಚಿರತೆಯ ಎರಡು ಕಣ್ಣುಗಳು ವಿಭಿನ್ನ ಬಣ್ಣದ್ದಾಗಿವೆ.
ವನ್ಯಜೀವಿ ಛಾಯಾಗ್ರಹಕ ಧ್ರುವ್ ಪಾಟೀಲ್ ಈ ಚಿತ್ರವನ್ನು ಸೆರೆ ಹಿಡಿದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಭಾರತದಲ್ಲಿ ಈ ರೀತಿ ಚಿರತೆ ಭಾರತದಲ್ಲಿ ಇದೇ ಮೊದಲ ಬಾರಿಗೆ ಪತ್ತೆಯಾಗಿದೆ ಎಂದು ಬರೆದುಕೊಂಡಿದ್ದಾರೆ.

ಹೆಣ್ಣು ಚಿರತೆಯೊಂದು ಮರದ ಮೇಲೆ ವಿರಮಿಸುವ ಚಿತ್ರ ಸೆರೆ ಹಿಡಿಯಲಾಗಿದ್ದು, ಇದರ ಎರಡು ಕಣ್ಣುಗಳು ಸಹ ಬೇರೆ ಬಣ್ಣದ್ದಾಗಿದೆ. ಚಿರತೆಯ ಎಡಗಣ್ಣು ಕಂದು ಬಣ್ಣದ್ದಾಗಿದ್ದು, ಬಲಗಣ್ಣು ನೀಲಿ-ಹಸಿರಿನಿಂದ ಕೂಡಿದೆ. ಕಣ್ಣುಗಳ ಬಣ್ಣಕ್ಕೆ ಹೆಟ್ರೋಕ್ರೊಮಿಯಾ ಎಂಬುದು ಕಾರಣವಾಗಿದ್ದು, ಭಾರತದಲ್ಲಿ ಈ ರೀತಿಯ ವಿಭಿನ್ನ ಕಣ್ಣುಗಳು ಹೊಂದಿರುವ ಚಿರತೆ ದಾಖಲಾಗಿಲ್ಲ ಎಂದು ತಿಳಿದುಬಂದಿದೆ.
ಒಟ್ಟಿನಲ್ಲಿ ಬಂಡೀಪುರದಲ್ಲಿ ಅಪರೂಪದ, ವಿಶೇಷವಾದ, ವಿಭಿನ್ನವಾದ ಚಿರತೆಯನ್ನು ವನ್ಯಜೀವಿ ಛಾಯಾಗ್ರಾಹಕ ಧ್ರುವ್ ಪಾಟೀಲ್ ಪತ್ತೆಹಚ್ಚಿದ್ದಾರೆ.
ಕಾಡೆಮ್ಮೆಯನ್ನು ನುಂಗಿದ ವ್ಯಾಘ್ರ: ಚಾಮರಾಜನಗರ ಜುಲ್ಲೆಯಲ್ಲಿ ಕಾಡುಪ್ರಾಣಿಳ ಹಾವಳಿ ಆಗಾಗ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಹಾಗೆಯೇ ಇದೀಗ ಜನಪ್ರಿಯ ಹುಲಿ ರಕ್ಷಿತಾರಣ್ಯಗಳಲ್ಲಿ ಒಂದಾದ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಯೊಂದು ಭರ್ಜರಿ ಬೇಟೆ ಆಡಿ ಪ್ರವಾಸಿಗರ ಮುಂದೆ ಕಾಡೆಮ್ಮೆಯನ್ನು ಚಪ್ಪರಿಸಿ ತಿಂದಿದ್ದು, ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಕ್ಯಾಮರಾದಲ್ಲಿ ಸೆರೆ: ಸಫಾರಿಗೆ ತೆರಳಿದ್ದ ವೇಳೆ ಪ್ರವಾಸಿಗರಿಗೆ ಹಚ್ಚ ಹಸಿರಿನ ಹುಲ್ಲಿನ ಮೇಲೆ ವಿರಾಜಮಾನವಾದ ವ್ಯಾಘ್ರ ಕಾಡೆಮ್ಮೆಯ ಮಾಂಸವನ್ನು ಕಿತ್ತು ತಿನ್ನುತ್ತಿರುವ ರೋಮಾಂಚಕ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಇದೀಗ ಭಾರೀ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್: ಬಂಡೀಪುರದ ಕೆರೆ ಬಳಿ ಕಾಡೆಮ್ಮೆ ಬೇಟೆಯಾಡಿ ತಿನ್ನುತ್ತಿದ್ದು, ಪ್ರವಾಸಿಗರು ಎದುರಾದರೂ ಯಾವುದಕ್ಕೂ ಕೇರ್ ಮಾಡದೇ ಹಸಿವು ನೀಗಿಸಿಕೊಂಡಿದೆ. ಸಫಾರಿಗರ ಸದ್ದಿಗೆ ಸಫಾರಿಯಲ್ಲಿ ಪ್ರವಾಸಿಗರ ಕಣ್ಣಿಗೆ ಹುಲಿರಾಯ ರಸದೌತಣ ನೀಡಿದ್ದು, ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್ ಆಗಿದೆ.












Click it and Unblock the Notifications