ಹನೂರು: ಕಲುಷಿತ ಆಹಾರ, ನೀರು ಸೇವಿಸಿ 8 ಮಂದಿ ಅಸ್ವಸ್ಥ

ಚಾಮರಾಜನಗರ, ಮೇ, 06: ಕಲುಷಿತ ಆಹಾರ ಹಾಗೂ ನೀರು ಸೇವನೆ ಮಾಡಿ 8 ಮಂದಿ ಅಸ್ವಸ್ಥಗೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆ, ಹನೂರು ತಾಲ್ಲೂಕಿನ ಹಲಗಾಪುರ ಗ್ರಾಮದಲ್ಲಿ ಸೋಮವಾರ (ಮೇ 06) ನಡೆದಿದೆ.

ವಾಂತಿ, ಭೇದಿಯಾಗಿ 8 ಮಂದಿ ಅಸ್ವಸ್ಥರಾಗಿದ್ದು, ಬಂಡಳ್ಳಿ ಗ್ರಾಮದ ಆರೋಗ್ಯ ಕೇಂದ್ರದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹಲಗಾಪುರದಲ್ಲಿ‌ ನಡೆದ ಆರಾಧನೆ ಮಹೋತ್ಸವದಲ್ಲಿ ಆಹಾರ ಸೇವಿಸಿ ಈ ಘಟನೆ ಸಂಭವಿಸಿದೆ. ಸ್ಥಳಕ್ಕೆ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಅಗತ್ಯ ಔಷಧ ವಿತರಣೆ ಮಾಡಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

8 people are sick after consuming contaminated food and water In Halagapura village

ಆದರೆ, ಗ್ರಾಮಸ್ತರು ಕಲುಷಿತ ನೀರು ಸೇವಿಸಿ ಈ ಘಟನೆ ಆಗಿದೆ ಎಂದು ಆರೋಪಿಸಿದ್ದು, ಅಶುದ್ಧ ನೀರನ್ನು ಪೂರೈಕೆ ಮಾಡುತ್ತಿದ್ದಾರೆ. ಗ್ರಾಮಕ್ಕೆ ಸರಬರಾಜಾಗುವ ಕುಡಿಯುವ ನೀರನ್ನು ಪರೀಕ್ಷೆ ಮಾಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+