ಚಾಮರಾಜನಗರದಲ್ಲಿ 300 ಕೋಟಿ ಮೌಲ್ಯದ ನಕಲಿ ನೋಟು ವಶಕ್ಕೆ

ಚಾಮರಾಜನಗರ, ಆಗಸ್ಟ್ 17: 2000 ಮುಖಬೆಲೆಯ ಅಂದಾಜು 300 ಕೋಟಿ ಬೆಲೆ ಬಾಳುವ ನಕಲಿ ನೋಟುಗಳನ್ನು ರಾಮಸಮುದ್ರ ಪೊಲೀಸರು ಶುಕ್ರವಾರ ವಶಪಡಿಸಿಕೊಂದು ಒಬ್ಬನನ್ನು ಬಂಧಿಸಿದ್ದಾರೆ.

ತಾಲ್ಲೂಕಿನ ಅಟ್ಟುಗುಳಿಪುರ ಬಳಿ ಗೂಡ್ಸ್ ಆಟೊದಲ್ಲಿ ನಕಲಿ ನೋಟುಗಳನ್ನು ಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ವಿವರಗಳನ್ನು ನೀಡಲು ಅವರು ನಿರಾಕರಿಸಿದ್ದಾರೆ. ಆಟೊ ಚಾಲಕನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

300 crore worth fake notes seized in Chamrajnagara

ಆಟೋದಲ್ಲಿ ನಕಲಿ ನೋಟುಗಳ ಹಲವು ಕಟ್ಟುಗಳು ಕಂಡುಬಂದಿದ್ದು, ಎಷ್ಟು ನೋಟುಗಳಿವೆ ಎಂಬುದು ಗೊತ್ತಾಗಿಲ್ಲ. ಬಂಧಿತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ನಕಲಿ ನೋಟು ತಯಾರಾಗಿದ್ದೆಲ್ಲಿ, ಎಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂಬ ವಿಷಯ ತಿಳಿದುಬಂದಿಲ್ಲ.

ಕಲರ್ ಜೆರಾಕ್ಸ್ ಮಾಡಿದ ನೋಟಿನ ಕಂತೆಗಳು ಆಟೊದಲ್ಲಿದ್ದವು ಎಂದು ಗೊತ್ತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+