ಜುಲೈ 17ಕ್ಕೆ ಆ ಕಾಲದ ಜನಪ್ರಿಯ ಚಾಟಿಂಗ್ ಆಪ್ ಬಂದ್
ಬೆಂಗಳೂರು, ಜೂನ್ 10: ಒಂದು ಕಾಲದಲ್ಲಿ ಅತ್ಯಂತ ಜನಪ್ರಿಯ ಚಾಟಿಂಗ್ ಅಪ್ಲಿಕೇಷನ್ ಯಾಹೂ ಮೆಸೆಂಜರ್ ಬಂದ್ ಆಗಲಿದೆ. ಗೂಗಲ್, ಫೇಸ್ ಬುಕ್ ನಡುವೆ ಪೈಪೋಟಿ ಮಾಡಲಾಗದೆ ಯಾಹೂ ತನ್ನ ಜನಪ್ರಿಯ ಉತ್ಪನ್ನ ಮೆಸೇಂಜರ್ ಬಂದ್ ಮಾಡುತ್ತಿದೆ.
ಯಾಹೂ ಮೆಸೆಂಜರ್ ಬಳಕೆದಾರರಿಗೆ 6 ತಿಂಗಳ ಅವಧಿ ನೀಡಲಾಗಿದ್ದು, ಈ ವೇಳೆಯಲ್ಲಿ ತಮ್ಮ ಚಾಟ್ ಹಿಸ್ಟರಿ ಸೇವ್ ಮಾಡಿಕೊಳ್ಳಬಹುದಾಗಿದೆ. ಯಾಹೂ ಮೆಸೇಂಜರ್ ಬಂದ್ ಆದ ಬಳಿಕ ಬಳಕೆದಾರರು ಹೊಸ ಗ್ರೂಪ್ ಮೆಸೆಜಿಂಗ್ ಆಪ್ ಸ್ಕ್ವಿರ್ಲ್(Squirrel) ಗೆ ರೀಡೈರೆಕ್ಟ್ ಆಗಬಹುದಾಗಿದೆ.
ಆದರೆ, ಸ್ಕ್ವಿರ್ಲ್ ಇನ್ನೂ ಬೀಟಾ ಆವೃತ್ತಿಯಲ್ಲಿದ್ದು, ಆಹ್ವಾನ ಇದ್ದವರಿಗೆ ಮಾತ್ರ ಲಭ್ಯವಿದೆ.

1998ರಲ್ಲಿ ಆರಂಭವಾದ ಯಾಹೂ ಸಂಸ್ಥೆಯ ಚಾಟ್ ಅಪ್ಲಿಕೇಷನ್ ಮೆಸೆಂಜರ್, ಭಾರತದಲ್ಲಿ ಅತ್ಯಂತ ಜನಪ್ರಿಯಗೊಂಡಿತ್ತು. ಸಂಕ್ಷಿಪ್ತ ಅಕ್ಷರಗಳು, ಎಮೋಜಿಗಳನ್ನು ಬಳಸಿ ಚಾಟ್ ಮಾಡುವುದು ಇಂಟರ್ನೆಟ್ ಬಳಕೆದಾರರಿಗೆ ಮೊದಲಿಗೆ ಕಲಿಸಿದ್ದೇ ಯಾಹೂ ಮೆಸೆಂಜರ್.
ನಂತರ ಗೂಗಲ್ ಚಾಟ್, ಫೇಸ್ ಬುಕ್ ಮೆಸೆಂಜರ್, ವಾಟ್ಸಾಪ್, ವಿಚಾಟ್, ಹೈಕ್ ಮುಂತಾದ ಚಾಟಿಂಗ್ ಅಪ್ಲಿಕೇಷನ್ ಗಳ ನಡುವೆ ಯಾಹೂ ತನ್ನ ಡೆಸ್ಕ್ ಟಾಪ್ ಹಾಗೂ ಮೊಬೈಲ್ ಆಪ್ಲಿಕೇಷನ್ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.












Click it and Unblock the Notifications