20 ವರ್ಷಗಳ ಸೇವೆ ಇಂದಿಗೆ ಕೊನೆ, ಯಾಹೂ ಮೆಸೆಂಜರ್ ಬಂದ್!

ಬೆಂಗಳೂರು, ಜುಲೈ 17: ವಾಟ್ಸಾಪ್, ಫೇಸ್ ಬುಕ್ ವಿರುದ್ಧ ಪೈಪೋಟಿ ನಡೆಸಲಾಗದೆ ಸೋತಿರುವ ಯಾಹೂ ತನ್ನ ನೆಚ್ಚಿನ ಮೆಸೆಂಜರ್ ಸೇವೆಯನ್ನು ಇಂದಿನಿಂದ ಬಂದ್ ಮಾಡುತ್ತಿದೆ.

ಗೂಗಲ್ ಚಾಟ್, ಫೇಸ್ ಬುಕ್ ಮೆಸೆಂಜರ್, ವಾಟ್ಸಾಪ್, ವಿಚಾಟ್, ಹೈಕ್ ಮುಂತಾದ ಚಾಟಿಂಗ್ ಅಪ್ಲಿಕೇಷನ್ ಗಳ ನಡುವೆ ಯಾಹೂ ತನ್ನ ಡೆಸ್ಕ್ ಟಾಪ್ ಹಾಗೂ ಮೊಬೈಲ್ ಆಪ್ಲಿಕೇಷನ್ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.

ಒಂದು ಕಾಲದಲ್ಲಿ ಅತ್ಯಂತ ಜನಪ್ರಿಯ ಚಾಟಿಂಗ್ ಅಪ್ಲಿಕೇಷನ್ ಯಾಹೂ ಮೆಸೆಂಜರ್ ಬಂದ್ ಆಗುತ್ತಿರುವ ಬಗ್ಗೆ ಮುಂಚಿತವಾಗಿ ಪ್ರಕಟಣೆ ಹೊರಡಿಸಲಾಗಿದೆ.

Yahoo Messenger Shuts Down : Bye

ಯಾಹೂ ಮೆಸೆಂಜರ್ ಬಳಕೆದಾರರಿಗೆ 6 ತಿಂಗಳ ಅವಧಿ ನೀಡಲಾಗಿದ್ದು, ಈ ವೇಳೆಯಲ್ಲಿ ತಮ್ಮ ಚಾಟ್ ಹಿಸ್ಟರಿ ಸೇವ್ ಮಾಡಿಕೊಳ್ಳಬಹುದಾಗಿದೆ. ಯಾಹೂ ಮೆಸೇಂಜರ್ ಬಂದ್ ಆದ ಬಳಿಕ ಬಳಕೆದಾರರು ಹೊಸ ಗ್ರೂಪ್ ಮೆಸೆಜಿಂಗ್ ಆಪ್ ಸ್ಕ್ವಿರ್ಲ್(Squirrel) ಗೆ ರೀಡೈರೆಕ್ಟ್ ಆಗಬಹುದಾಗಿದೆ.

1998ರಲ್ಲಿ ಆರಂಭವಾದ ಯಾಹೂ ಸಂಸ್ಥೆಯ ಚಾಟ್ ಅಪ್ಲಿಕೇಷನ್ ಮೆಸೆಂಜರ್, ಭಾರತದಲ್ಲಿ ಅತ್ಯಂತ ಜನಪ್ರಿಯಗೊಂಡಿತ್ತು. 2001 ರಲ್ಲಿ ಯಾಹೂ 11 ಲಕ್ಷ ಯೂಸರ್ ಗಳನ್ನ ಹೊಂದಿತ್ತು.

2003ರಲ್ಲಿ 17 ಲಕ್ಷಕ್ಕೆ ಯೂಸರ್ ಗಳ ಸಂಖ್ಯೆ ಹೆಚ್ಚಾಯ್ತು. 2006 ರಲ್ಲಿ 19 ಲಕ್ಷದಿಂದ 2009 ರಲ್ಲಿ 62 ಲಕ್ಷ ಸೇವಾದಾರರಿಗೆ ಯಾಹೂ ಸೇವೆ ವಿಸ್ತರಿಸಿತು. ಸಂಕ್ಷಿಪ್ತ ಅಕ್ಷರಗಳು, ASL(Age, Sex, Location) ಎಂದು ಆರಂಭವಾಗುತ್ತಿದ್ದ ಚಾಟಿಂಗ್, ಎಮೋಜಿಗಳನ್ನು ಬಳಸಿ ಚಾಟ್ ಮಾಡುವುದು ಇಂಟರ್ನೆಟ್ ಬಳಕೆದಾರರಿಗೆ ಮೊದಲಿಗೆ ಕಲಿಸಿದ್ದೇ ಯಾಹೂ ಮೆಸೆಂಜರ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+