ಅತಿ ಮೇಕಪ್ ಮಾಡುವವರು ಬೇಗ ಮುದುಕಿಯಾಗ್ತಾರೆ
ವಾಷಿಂಗ್ಟನ್, ಫೆ. 2 : ಮಹಿಳೆಯರೇ ಎಚ್ಚರ... ಸುಂದರಿ ಪಟ್ಟ ಪಡೆಯುವ ಧಾವಂತದಲ್ಲಿ ಅತಿಯಾಗಿ ಕೃತಕ ಸೌಂದರ್ಯ ವರ್ಧಕಗಳನ್ನು ಬಳಸಿದರೆ ಬೇಗ ತಾರುಣ್ಯ ಕಳೆದುಕೊಳ್ಳುತ್ತೀರಿ.
ಹೌದು, ಅಮೆರಿಕದ ವಾಷಿಂಗ್ಟನ್ ವಿಶ್ವವಿದ್ಯಾಲಯವು ಸುಮಾರು 111 ರಾಸಾಯನಿಕಗಳನ್ನು ಬಳಸಿದ 31,575 ಮಹಿಳೆಯರ ಮೇಲೆ ನಡೆಸಿದ ಅಧ್ಯಯನದಲ್ಲಿ ಈ ಆಂತಕಕಾರಿ ವಿಷಯ ಬಯಲಾಗಿದೆ.
ವಿಶೇಷವಾಗಿ ಲಿಪ್‌ಸ್ಟಿಕ್, ಫೇಸ್ ಕ್ರೀಮ್ ಹಾಗೂ ಉಗುರಿಗೆ ಹಚ್ಚುವ ಬಣ್ಣಗಳು ಮಹಿಳೆಯರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ. ಇಂತಹ ಮಹಿಳೆಯರು ಬೇಗ ವೃದ್ಧಾಪ್ಯದತ್ತ ಧಾವಿಸುತ್ತಾರೆ. [ಆಶಾ ಭಟ್ ಜಗಮೆಚ್ಚಿದ ಸುಂದರಿ]

ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಸುಮಾರು 15 ಸೌಂದರ್ಯ ವರ್ಧಕ ರಾಸಾಯನಿಕಗಳನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿಯಾಗಿರುವ phthalates ಎಂಬ ರಾಸಾಯನಿಕ ಆಹಾರದ ಪ್ಯಾಕೇಟ್, ಗೃಹಬಳಕೆ ಉತ್ಪಾದನೆ, ಸುಗಂಧ ದ್ರವ್ಯ, ಲಿಪ್‌ಸ್ಟಿಕ್, ಸಾಬೂನು, ಕೂದಲು ರಕ್ಷಣೆ ಉತ್ಪನ್ನಗಳು, ಉಗುರಿಗೆ ಹಚ್ಚುವ ಬಣ್ಣಗಳಲ್ಲಿ ಪತ್ತೆಯಾಗಿವೆ.
ವಿಜ್ಞಾನಿಗಳು ಸಂಶೋಧನೆಗೊಳಪಡಿಸಿದ ಮಹಿಳೆಯರ ರಕ್ತ ಹಾಗೂ ಮೂತ್ರಗಳನ್ನು ಪರೀಕ್ಷಿಸಿದ್ದಾರೆ. ಇದರಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದ ರಾಸಾಯನಿಕಗಳು ಕಂಡುಬಂದಿವೆ. ಇವುಗಳಿಂದ ಮಹಿಳೆಯರು ಶೀಘ್ರ ತಾರುಣ್ಯ ಕಳೆದುಕೊಳ್ಳುತ್ತಿದ್ದಾರೆ. ಅವರಲ್ಲಿ ಋತುಚಕ್ರ ನಾಲ್ಕು ವರ್ಷಗಳ ಮೊದಲೇ ನಿಲ್ಲುತ್ತಿದೆ.
ಇಷ್ಟಲ್ಲದೆ, ಮಹಿಳೆಯರ ತಾಯ್ತನ ಸಾಮರ್ಥ್ಯವೂ ಕುಗ್ಗುತ್ತಿದೆ. ಅವರಲ್ಲಿ ಹೃದಯ ಸಮಸ್ಯೆ ಹೆಚ್ಚಳ, ಮೂಳೆಯಲ್ಲಿ ರಂಧ್ರವಾಗುವುದು ಇನ್ನಿತರ ಆರೋಗ್ಯ ಸಂಬಂಧಿ ಕಾಯಿಲೆಗಳೂ ಹೆಚ್ಚುತ್ತಿವೆ. ಇಷ್ಟಲ್ಲದೆ, ಕೆಲವು ಕ್ಯಾನ್ಸರ್‌ಗಳನ್ನೂ ತರಬಲ್ಲದು, ಜೀರ್ಣ ಶಕ್ತಿಯನ್ನೂ ಕುಗ್ಗಿಸಬಲ್ಲದು, ಅಂಡಾಶದಯ ಕಾರ್ಯಾವಧಿಯನ್ನು ಕಡಿಮೆ ಮಾಡಬಲ್ಲದು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.












Click it and Unblock the Notifications