'ಏರ್ಟೆಲ್ ವಿವಾದ: ಮುಸ್ಲಿಂ ಸಿಬ್ಬಂದಿ ಬೇಡ ಎಂದ ಗ್ರಾಹಕಿ'

ಬೆಂಗಳೂರು, ಜೂನ್ 19: ಭಾರ್ತಿ ಏರ್ ಟೆಲ್ ಸಂಸ್ಥೆಯ ಮಹಿಳಾ ಗ್ರಾಹಕಿಯೊಬ್ಬರು ತಮ್ಮ ಏರ್ ಟೆಲ್ ಡಿಟಿಎಚ್ ರೀಚಾರ್ಜ್‌ ಮಾಡಿಸಿಕೊಳ್ಳಲು ಕೇಳಿಕೊಂಡ ಮನವಿಯೊಂದು ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಭಾರಿ ಚರ್ಚೆಗೊಳಲಾಗುತ್ತಿದೆ.

ಕಸ್ಟಮರ್‌ ಕೇರ್‌ಗೆ ಫೋನ್‌ ಮಾಡಿದ್ದ ಯುವತಿ, ಕರೆ ಸ್ವೀಕರಿಸಿದ ಏರ್‌ಟೆಲ್‌ ಪ್ರತಿನಿಧಿ ಅಸಭ್ಯವಾಗಿ ನಡೆದುಕೊಂಡಿದ್ದಾನೆ ಎಂದು ದೂರಿದ್ದಲ್ಲದೆ, ನನಗೆ ಮುಸ್ಲಿಂ ಸಮುದಾಯದ ಕಸ್ಟಮರ್ ಕೇರ್ ಸಿಬ್ಬಂದಿ ಬೇಡ, ಹಿಂದೂ ಸಿಬ್ಬಂದಿ ಇದ್ದರೆ ಮಾತ್ರ ಕರೆ ಸ್ವೀಕರಿಸಲಿ ಎಂದು ಟ್ವೀಟ್ ಮಾಡಿ ಕೇಳಿಕೊಂಡಿದ್ದು ಈಗ ಭಾರಿ ಸದ್ದು ಮಾಡುತ್ತಿದೆ.

ಪೂಜಾ ಸಿಂಗ್‌ ಎಂಬ ಹೆಸರಿನ ಯುವತಿ, ಟ್ವಿಟ್ಟರ್ ನಲ್ಲಿ ಏರ್‌ಟೆಲ್‌ ನ ಅಧಿಕೃತ ಖಾತೆಗೆ ಟ್ಯಾಗ್ ಮಾಡಿ ದೂರು ನೀಡಿ, ಹಿಂದೂ ಯುವಕನನ್ನು ನೇಮಕ ಮಾಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಏರ್ ಟೆಲ್ ಪ್ರತಿಕ್ರಿಯಿಸಿದೆ.

ಮಹಿಳಾ ಗ್ರಾಹಕಿಯ ಮನವಿಯನ್ನು ಏರ್ ಟೆಲ್ ಪುರಸ್ಕರಿಸಿ, ಹಿಂದೂ ಸಿಬ್ಬಂದಿಗೆ ಕರೆ ವರ್ಗಯಿಸಿದೆ. ಈ ಎಲ್ಲಾ ಘಟನೆಗಳ ಬಗ್ಗೆ ಟ್ವಿಟ್ಟರ್ ನಲ್ಲಿ ಚರ್ಚೆ ನಡೆಯುತ್ತಿದೆ.

ದೆಹಲಿ ಮೂಲದ ಪೂಜಾ ಸಿಂಗ್‌

ದೆಹಲಿ ಮೂಲದ ಪೂಜಾ ಸಿಂಗ್‌

ದೆಹಲಿ ಮೂಲದ ಪೂಜಾ ಸಿಂಗ್‌ ಎಂಬ ಏರ್‌ಟೆಲ್‌ ಸಂಸ್ಥೆ ಗ್ರಾಹಕಿ, ಡಿಟಿಎಚ್ ರೀಚಾರ್ಜ್‌ಗಾಗಿ ಕರೆ ಮಾಡಿದ್ದಾರೆ. ಶೋಯಬ್‌ ಎಂಬ ಮುಸ್ಲಿಂ ಯುವಕ ಕರೆ ಸ್ವೀಕರಿಸಿ ಮಾತನಾಡಿದ್ದಾರೆ. ಸಂಭಾಷಣೆ ವೇಳೆ, ಅಸಭ್ಯವಾಗಿ ಮಾತನಾಡಿ, ಕಿರಿಕಿರಿ ಉಂಟು ಮಾಡಿದ್ದಾರೆ ಎಂದು ಪೂಜಾ ಆರೋಪಿಸಿದ್ದಾರೆ.

ಪೂಜಾ ಸಿಂಗ್ ಸಲ್ಲಿಸಿದ ದೂರು

ಏರ್ ಟೆಲ್ ಡಿಟಿಎಚ್ ಕಸ್ಟಮರ್ ಸೇವೆ ಕಳಪೆಯಾಗಿದೆ. ನಾನು ಪುನರ್ ಸ್ಥಾಪನೆಗಾಗಿ ದೂರು ದಾಖಲಿಸಿದೆ. ಸರ್ವಿಸ್ ಇಂಜಿನಿಯರ್ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಫೋನ್ ಇಡು ಮತ್ತೆ ಕರೆ ಮಾಡಬೇಡ ಎಂದಿದ್ದಾನೆ. ಈತನ ನಂಬರ್ ಕೊಟ್ಟಿದ್ದೇನೆ. ಏರ್ ಟೆಲ್ ಇದೇ ರೀತಿ ಗ್ರಾಹಕರ ಸುಲಿಗೆ ಮಾಡುತ್ತಿದೆ ಎಂದು ಪೂಜಾ ಬರೆದುಕೊಂಡಿದ್ದಾರೆ.

ಶೋಯೆಬ್ ಬೇಡ ಎಂದ ಪೂಜಾ

ಪ್ರೀತಿಯ ಶೋಯೆಬ್ ನೀನು ಮುಸ್ಲಿಂ, ನಿನ್ನ ವೃತ್ತಿಪರ ನೈತಿಕತೆ ಬಗ್ಗೆ ನನಗೆ ಸಂಶಯವಿದೆ. ಗ್ರಾಹಕ ಸೇವೆ ಬಗ್ಗೆ ಕುರಾನ್ ನಲ್ಲಿ ಬೇರೆಯದ್ದೇ ವ್ಯಾಖ್ಯಾನ ಇರಬಹುದು. ನನಗೆ ಹಿಂದೂ ಪ್ರತಿನಿಧಿ ಬೇಕು ಎಂದು ಈ ಮೂಲಕ ಕೋರುತ್ತೇನೆ ಎಂದು ಪೂಜಾ ಮತ್ತೊಂದು ಟ್ವೀಟ್ ಮಾಡಿದ್ದಾರೆ.

ಮೊದಲು ಕಣ್ಣಿನ ಡಾಕ್ಟರ್ ಹತ್ತಿರ ಹೋಗಿ ಬನ್ನಿ!

ಪೂಜಾ ಅವರೆ, ದ್ವೇಷದಿಂದ, ಮತಾಂಧದಿಂದ ನಿಮ್ಮ ಕಣ್ಣು ಕುರುಡಾಗುತ್ತಿವೆ, ಮೊದಲು ಕಣ್ಣಿನ ಡಾಕ್ಟರ್ ಹತ್ತಿರ ಹೋಗಿ ಬನ್ನಿ! ಶೋಯೆಬ್ ಹೆಸರು ಸರಿಯಾಗಿ ಬರೆಯಲು ಬರುವುದಿಲ್ಲ, ಕುರಾನ್ ಬಗ್ಗೆ ಉಲ್ಲೇಖಿಸಿದ್ದೀರಿ, ಕೋಪದಿಂದ ನಿಮ್ಮ ಬುದ್ಧಿ ಮಂಕಾಗಿದೆ ಎಂದ ಸೆಲೆಬ್ರಿಟಿ ಗೌಹರ್ ಖಾನ್

ಪೂಜಾ ಅವರು ಪೆಟ್ರೋಲ್, ಡೀಸೆಲ್ ಬಳಸುತ್ತಿಲ್ಲವಂತೆ

ಪೂಜಾ ಅವರು ಪೆಟ್ರೋಲ್, ಡೀಸೆಲ್ ಬಳಸುತ್ತಿಲ್ಲವಂತೆ, ಮುಸ್ಲಿಂ ರಾಷ್ಟ್ರಗಳಿಂದ ತೈಲ ಪೂರೈಕೆಯಾಗುತ್ತಿರುವುದೇ ಇದಕ್ಕೆ ಕಾರಣವಂತೆ.

ವರ್ಣಬೇಧ ನೀತಿ ಅನುಸರಿಸುವ ಸಂಸ್ಥೆ

ವರ್ಣಬೇಧ ನೀತಿ ಅನುಸರಿಸುವ ಸಂಸ್ಥೆ ವಿರುದ್ಧ ಕ್ರಮ ಅಗತ್ಯ, ಬೇರೆ ಕಂಪನಿಗೆ ಪೋರ್ಟ್ ಮಾಡಿಕೊಳ್ಳಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+