ಇನ್ಮುಂದೆ ಎಟಿಎಂನಲ್ಲೂ ಸಿಗಲಿದೆ 50 ರು. ನೋಟು!
ನವದೆಹಲಿ, ಸೆಪ್ಟೆಂಬರ್. 25: ಇನ್ನು ಮುಂದೆ ಎಟಿಎಂ ಗಳಿಂದ 50 ರು. ನೋಟನ್ನು ವಿಥ್ ಡ್ರಾ ಮಾಡಿಕೊಳ್ಳಬಹುಹುದು. ಗ್ರಾಹಕರಿಗೆ ಎಟಿಎಂ ಯಂತ್ರಗಳಲ್ಲಿ 50 ರುಪಾಯಿಗಳ ನೋಟುಗಳು ಲಭಿಸುವಂತೆ ಮಾಡಿ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಎಲ್ಲ ಬ್ಯಾಂಕ್ ಗಳಿಗೆ ನಿರ್ದೇಶನನ ನೀಡಿದೆ.
ಸದ್ಯ ಎಟಿಎಂ ಯಂತ್ರಗಳಲ್ಲಿ 1000, 500, 100 ರೂಪಾಯಿಗಳ ನೋಟುಗಳನ್ನು ಮಾತ್ರ ದೊರೆಯುತ್ತಿದೆ. ಆದರೆ ಇನ್ನು ಮುಂದೆ 50 ರು. ನೋಟನ್ನು ಜೇಬಿಗೆ ಇಳಿಸಿಕೊಳ್ಳಬಹುದು.[ಹೊಸ 1000, 500 ರು. ನೋಟು ಗುರುತು ಮಾಡೋದು ಹೇಗೆ?]

ಸದ್ಯಕ್ಕೆ ರಾಯ್‌ಪುರ್‌ನಲ್ಲಿರುವ ಎಸ್‌ಬಿಐ ಬ್ಯಾಂಕ್ ನಲ್ಲಿ ಎಟಿಎಂನಲ್ಲಿ 50 ರೂ. ತೆಗೆಯುವ ಸೌಲಭ್ಯ ಒದಗಿಸಿದೆ. ಮುಂಬರುವ ದಿನಗಳಲ್ಲಿ ದೇಶಾದ್ಯಂತ ಎಲ್ಲಾ ಬ್ಯಾಂಕ್‌ಗಳ ಎಟಿಎಂಗಳಲ್ಲಿ 50 ರೂಪಾಯಿ ಪಡೆಯುವ ಅವಕಾಶ ಒದಗಲಿದೆ.
ಯಾರಿಗೆ ಲಾಭ?
ಚಿಲ್ಲರೆ ಅಭಾವ ಎಂದುಕೊಳ್ಳುವವರಿಗೆ ಮತ್ತು ಕಡಿಮೆ ಹಣ ವಿಥ್ ಡ್ರಾ ಮಾಡುವವರಿಗೆ ಈ ಕ್ರಮ ಲಾಭ ತರಲಿದೆ. ಆದರೆ ಬ್ಯಾಂಕ್ ನಲ್ಲಿ 100 ರು. ಗಿಂತ ಕಡಿಮೆ ಬ್ಯಾಲೆನ್ಸ್ ಇದ್ದಾಗ ಹಣ ಡ್ರಾ ಮಾಡಬಹುದೇ ಎಂಬ ಬಗ್ಗೆ ಸ್ಪಷ್ಟ ನಿರ್ದೇಶನ ಹೊರಡಿಸಲಾಗಿಲ್ಲ.[ನೋಟು ನೋಡದೆ ಕಿಸೆಗೆ ಹಾಕಿದ್ರೆ ಕಥೆ ಮುಗೀತು!]
ಬ್ಯಾಂಕ್ ಗಳಿಗೆ ನಿಯಮಾವಳಿ
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಶಾಖಾ ಬ್ಯಾಂಕ್ ಗಳಿಗೆ ಗುರುವಾರ ನಿಯಮಾವಳಿಯನ್ನು ನೀಡಿದೆ. ಕೈ ತಪ್ಪಿ ಹೋಗುತ್ತಿರುವ ಹಣಕಾಸು ಮೂಲವನ್ನು ಪುನಃ ಹೇಗೆ ಬಳಕೆ ಮಾಡಿಕೊಳ್ಳಬೇಕು. ಸಾಲ ಮರುಪಾವತಿ ಮಾಡಿಕೊಳ್ಳಲು ಯಾವ ಯಾವ ತಂತ್ರ ಅನುಸರಿಸಬೇಕು ಎಂಬುದನ್ನು ತಿಳಿಸಿದೆ.












Click it and Unblock the Notifications