Stock Market Holiday 2025: ಮಹಾಶಿವರಾತ್ರಿ ದಿನ ಷೇರು ಮಾರುಕಟ್ಟೆಗೆ ರಜೆ ಇದೆಯಾ?; 2025ರ ರಜಾ ದಿನಗಳ ಪಟ್ಟಿ ಇಲ್ಲಿದೆ
Maha Shivratri Holiday 2025: ಇಂದು (ಫೆಬ್ರವರಿ 26) ಮಹಾಶಿವರಾತ್ರಿ ಹಬ್ಬ ಹಿನ್ನೆಲೆ ಸರ್ಕಾರಿ ರಜೆ ಘೋಷಣೆ ಮಾಡಲಾಗಿದೆ. ದೇಶಾದ್ಯಂತ ಸರ್ಕಾರಿ ಹಾಗೂ ಖಾಸಗಿ ಶಾಲಾ-ಕಾಲೇಜುಗಳು, ಕಚೇರಿಗಳು, ಬ್ಯಾಂಕ್‌ಗಳಿಗೆ ಸಹ ಇದು ಅನ್ವಯವಾಗಲಿದೆ. ಹಾಗಾದರೆ ಷೇರು ಮಾರುಕಟ್ಟೆ ಕಥೆ ಏನು ಎನ್ನುವ ಗೊಂದಲಗಳು ಹಲವರಿಗೆ ಕಾರು ಪ್ರಶ್ನೆಯಾಗಿದೆ. ಹಾಗಾದ್ರೆ ಇದಕ್ಕೆ ಉತ್ತರ ಇಲ್ಲಿದೆ ಗಮನಿಸಿ. ಅಲ್ಲದೆ 2025ನೇ ಸಾಲಿನ ಷೇರು ಮಾರುಕಟ್ಟೆ ರಜೆ ದಿನಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
ಮಹಾಶಿವರಾತ್ರಿ ಹಬ್ಬವನ್ನು ದೇಶಾದ್ಯಂತ ಆಚರಣೆ ಮಾಡಲಾಗುತ್ತದೆ. ಈ ಹಿನ್ನೆಲೆ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳ ಉದ್ಯೋಗಿಗಳಿಗೂ ರಜೆ ಘೋಷಣೆ ಮಾಡಲಾಗಿದೆ. ಇನ್ನು ಭಾರತದ ಷೇರು ಮಾರುಕಟ್ಟೆಗೂ ಮಹಾಶಿವರಾತ್ರಿ ಹಬ್ಬ ಹಿನ್ನೆಲೆ ರಜೆ ಇರಲಿದೆ. ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ ಮತ್ತು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ಇಂದು ಕಾರ್ಯನಿರ್ವಹಿಸುವುದಿಲ್ಲ. ಈ ಷೇರು ವಿನಿಮಯದ ಘೋಷಿತ 14 ರಜೆಗಳಲ್ಲಿ ಇದು ಕೂಡ ಒಂದಾಗಿದ್ದು, ಈ ಕ್ಯಾಲಂಡರ್ ವರ್ಷದ ಮೊದಲ ರಜೆ ಇದಾಗಿದೆ.

2025ನೇ ಸಾಲಿನ ಷೇರು ಮಾರುಕಟ್ಟೆ ರಜಾ ದಿನಗಳಿವು
* ಫೆಬ್ರವರಿ 26, ಬುಧವಾರ: ಮಹಾಶಿವರಾತ್ರಿ
* ಮಾರ್ಚ್ 14, ಶುಕ್ರವಾರ: ಹೋಳಿ ಹಬ್ಬ
* ಮಾರ್ಚ್ 31, ಸೋಮವಾರ: ಈದ್ ಹಬ್ಬ
* ಏಪ್ರಿಲ್ 10, ಗುರುವಾರ: ಮಹಾವೀರ ಜಯಂತಿ
* ಏಪ್ರಿಲ್ 14, ಸೋಮವಾರ: ಅಂಬೇಡ್ಕರ್ ಜಯಂತಿ
* ಏಪ್ರಿಲ್ 18, ಶುಕ್ರವಾರ: ಗುಡ್ ಫ್ರೈಡೆ
* ಮೇ 1, ಗುರುವಾರ: ಮಹಾರಾಷ್ಟ್ರ ದಿನ
* ಆಗಸ್ಟ್ 15, ಶುಕ್ರವಾರ: ಸ್ವಾತಂತ್ರ್ಯ ದಿನಾಚರಣೆ
* ಆಗಸ್ಟ್ 27, ಬುಧವಾರ: ಗಣೇಶ ಹಬ್ಬ
* ಅಕ್ಟೋಬರ್ 2, ಗುರುವಾರ: ಗಾಂಧಿ ಜಯಂತಿ
* ಅಕ್ಟೋಬರ್ 21, ಮಂಗಳವಾರ: ದೀಪಾವಳಿ ಧನಲಕ್ಷ್ಮೀ ಪೂಜೆ
* ಅಕ್ಟೋಬರ್ 22, ಬುಧವಾರ: ದೀಪಾವಳಿ ಬಲಿಪಾಡ್ಯಮಿ
* ನವೆಂಬರ್ 5, ಬುಧವಾರ: ಗುರು ನಾನಕ್ ದೇವ್ ಜಯಂತಿ
* ಡಿಸೆಂಬರ್ 25, ಗುರುವಾರ: ಕ್ರಿಸ್‌ಮಸ್ ಹಬ್ಬ
ಭಾರತದ ಷೇರು ಮಾರುಕಟ್ಟೆಯಲ್ಲಿ ಬಿಎಸ್ಇ ಮತ್ತು ಎನ್ಎಸ್ಇ ಈ ಎರಡು ಷೇರು ವಿನಿಮಯ ಕೇಂದ್ರಗಳಿವೆ. ಇವುಗಳು ಮುಂಬೈನಲ್ಲಿ ಇರುವುದರಿಂದ ಮಹಾರಾಷ್ಟ್ರ ರಾಜ್ಯದ ಪ್ರಾದೇಶಿಕ ರಜೆಗಳೂ ಸಹ ಷೇರು ಮಾರುಕಟ್ಟೆಯ ರಜಾದಿನಗಳ ಪಟ್ಟಿಗೆ ಪ್ರಭಾವ ಬೀರುತ್ತವೆ. ಇನ್ನು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ, ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆ ವೇಳೆ ಮುಂಬೈನಲ್ಲಿ ಮತದಾನ ನಡೆಯುವ ದಿನದಂದೂ ಷೇರು ಮಾರುಕಟ್ಟೆಗೆ ರಜೆ ನೀಡಲಾಗುತ್ತದೆ.
ವಹಿವಾಟು ಸಮಯಗಳ ವಿವರ: ಷೇರು ಮಾರುಕಟ್ಟೆಯು ಮೇಲೆ ನೀಡಲಾಗಿರುವ ರಜಾ ದಿನಗಳು, ಶನಿವಾರ ಹಾಗೂ ಭಾನುವಾರ ಹೊರತುಪಡಿಸಿ ಉಳಿದ ದಿನಗಳು ಕಾರ್ಯನಿರ್ವಹಿಸುತ್ತವೆ. ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ನಿತ್ಯ ಬೆಳಗ್ಗೆ 9:15ರಿಂದ ಮಧ್ಯಾಹ್ನ 3:30ರ ವರೆಗೆ ಷೇರು ವಹಿವಾಟು ನಡೆಯಲು ಅವಕಾಶ ಕಲ್ಪಿಸಲಾಗಿದೆ. ಒಟ್ಟಿನಲ್ಲಿ ಹೇಳೋದಾದ್ರೆ, ಶನಿವಾರ ಹಾಗೂ ಭಾನುವಾರದಂದೇ ಹಬ್ಬಗಳು ಬಂದಿವೆ.












Click it and Unblock the Notifications