500 ರು ದರದಲ್ಲಿ ಯಾವ ರೀಚಾರ್ಜ್ ಯೋಜನೆ ಚೆನ್ನಾಗಿದೆ?

ಬೆಂಗಳೂರು, ಡಿಸೆಂಬರ್ 02: ಭಾರ್ತಿ ಏರ್ಟೆಲ್ 509 ರೂಪಾಯಿ ಯೋಜನೆ ಘೋಷಿಸಿದ ಬಳಿಕ ಜಿಯೋ ಹಾಗೂ ವೋಡಾಫೋನ್ ಕೂಡಾ 500 ಪ್ಲಸ್ ರುಪಾಯಿಯಲ್ಲಿ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ಹೊರತಂದಿವೆ.

ರಿಲಯನ್ಸ್ ಜಿಯೋ ತನ್ನ 509 ರೂಪಾಯಿ ಯೋಜನೆಯನ್ನು ಪರಿಷ್ಕರಿಸಿ, ತನ್ನ ಗ್ರಾಹಕರಿಗೆ ಪ್ರತಿದಿನಕ್ಕೆ 3ಜಿಬಿಗೆ ಬದಲಾಗಿದೆ ಪ್ರತಿ ದಿನ 4ಜಿಬಿ ಡೇಟಾ ನೀಡಲು ಮುಂದಾಗಿದೆ.ವೋಡಾಫೋನ್ ಕೂಡಾ 500 ರು ಆಸುಪಾಸಿನಲ್ಲಿ ಮೂರು ಯೋಜನೆಗಳನ್ನು ಮಾರುಕಟ್ಟೆಗೆ ಪರಚಯಿಸಿದೆ.

ಪ್ರತಿ ದಿನದಲ್ಲಿ ಹೆಚ್ಚು ಡೇಟಾ ಬಳಕೆ ಮಾಡುವ ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆಗಳನ್ನು ನೀಡಲು ಟೆಲಿಕಾಂ ಸಂಸ್ಥೆಗಳು ಮುಂದಾಗಿವೆ. ಡೇಟಾ ಜೊತೆ ಜಿಯೋ ಅನಿಯಮಿತ ಕರೆ ಸೌಲಭ್ಯ ಹಾಗೂ ಪ್ರತಿ ದಿನ 100 ಎಸ್ಎಂಎಸ್ ಬಹುತೇಕ ಎಲ್ಲಾ ಸಂಸ್ಥೆಗಳಿಂದಲೂ ಲಭ್ಯವಿದೆ.

ಏರ್ ಟೆಲ್ 509 ರು ಯೋಜನೆ

ಏರ್ ಟೆಲ್ 509 ರು ಯೋಜನೆ

ಏರ್ ಟೆಲ್ 509 ರು ಯೋಜನೆಯಲ್ಲಿ ಪ್ರತಿದಿನ 1.4ಜಿಬಿ ಇಂಟರ್ನೆಟ್ ಡೇಟಾ, ಅನಿಯಮಿತ ಸ್ಥಳೀಯ, ಎಸ್ಟಿಡಿ ಹಾಗೂ ರೋಮಿಂಗ್ ಕಾಲ್ಸ್ ಸಿಗಲಿದೆ. ಜತೆಗೆ 100 ಉಚಿತ ಸ್ಥಳೀಯ/ರಾಷ್ಟ್ರೀಯ ಎಸ್ಎಂಎಸ್ ಪ್ರತಿ ದಿನ ಲಭ್ಯವಿದೆ. ಈ ಯೋಜನೆಯ ವ್ಯಾಲಿಡಿಟಿ 90ದಿನಗಳವರೆಗೂ ಇದೆ. ಒಟ್ಟಾರೆ, 126ಜಿಬಿ ಡೇಟಾ ಸಿಗಲಿದೆ.

ಜಿಯೋದ 509 ರೂಪಾಯಿ ಪ್ಲಾನ್

ಜಿಯೋದ 509 ರೂಪಾಯಿ ಪ್ಲಾನ್

ಜಿಯೋದ 509 ರೂಪಾಯಿ ಪ್ಲಾನ್ 28 ದಿನಗಳ ವ್ಯಾಲಿಡಿಟಿ ಹೊಂದಿದೆ. ಪ್ರತಿ ದಿನ 4 ಜಿಬಿಯಂತೆ 28 ದಿನಗಳ ಕಾಲ ಗ್ರಾಹಕರಿಗೆ 112 ಜಿಬಿ ಡೇಟಾ ಲಭ್ಯವಾಗಲಿದೆ. ಪ್ರತಿ ದಿನ ಈ ಯೋಜನೆಯಲ್ಲಿ ಗ್ರಾಹಕರು ಹೆಚ್ಚುವರಿಯಾಗಿ ಇಂಟರ್ನೆಟ್ ಬಳಸಬಹುದಾಗಿದೆ.

ವೋಡಾಫೋನ್ 509 ಯೋಜನೆಯಲ್ಲಿ

ವೋಡಾಫೋನ್ 509 ಯೋಜನೆಯಲ್ಲಿ

ವೋಡಾಫೋನ್ 509 ಯೋಜನೆಯಲ್ಲಿ ಪ್ರತಿದಿನ 1.4ಜಿಬಿ ಇಂಟರ್ನೆಟ್ ಡೇಟಾ, ಅನಿಯಮಿತ ಸ್ಥಳೀಯ, ಎಸ್ಟಿಡಿ ಹಾಗೂ ರೋಮಿಂಗ್ ಕಾಲ್ಸ್ ಸಿಗಲಿದೆ. ಜತೆಗೆ 100 ಉಚಿತ ಸ್ಥಳೀಯ/ರಾಷ್ಟ್ರೀಯ ಎಸ್ಎಂಎಸ್ ಪ್ರತಿ ದಿನ ಲಭ್ಯವಿದೆ. ಈ ಯೋಜನೆಯ ವ್ಯಾಲಿಡಿಟಿ 90ದಿನಗಳವರೆಗೂ ಇದೆ. ಒಟ್ಟಾರೆ, 126ಜಿಬಿ 3ಜಿ/4ಜಿ ಡೇಟಾ ಸಿಗಲಿದೆ. ಪ್ರತಿದಿನದ ಉಚಿತ ಕರೆ ಮಿತಿ 250 ನಿಮಿಷಗಳಷ್ಟಿದೆ.

ಏರ್ ಟೆಲ್ 558 ರು ಯೋಜನೆ

ಏರ್ ಟೆಲ್ 558 ರು ಯೋಜನೆ

ಏರ್ ಟೆಲ್ 558ರು ಯೋಜನೆಯಲ್ಲಿ ಪ್ರತಿದಿನ 3ಜಿಬಿ ಇಂಟರ್ನೆಟ್ ಡೇಟಾ, ಅನಿಯಮಿತ ಸ್ಥಳೀಯ, ಎಸ್ಟಿಡಿ ಹಾಗೂ ರೋಮಿಂಗ್ ಕಾಲ್ಸ್ ಸಿಗಲಿದೆ. ಜತೆಗೆ 100 ಉಚಿತ ಸ್ಥಳೀಯ/ರಾಷ್ಟ್ರೀಯ ಎಸ್ಎಂಎಸ್ ಪ್ರತಿ ದಿನ ಲಭ್ಯವಿದೆ. ಈ ಯೋಜನೆಯ ವ್ಯಾಲಿಡಿಟಿ 82ದಿನಗಳವರೆಗೂ ಇದೆ. ಒಟ್ಟಾರೆ, 246ಜಿಬಿ ಡೇಟಾ ಸಿಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+