''ವಾಟ್ಸಾಪ್ ಸುರಕ್ಷಿತ, ನಿಮ್ಮ ಖಾಸಗಿ ಚಾಟ್ ಬಹಿರಂಗವಾಗಲ್ಲ"

ಬೆಂಗಳೂರು, ಜನವರಿ 15: ವಾಟ್ಸಾಪ್‍ ಖಾಸಗಿತನ ನೀತಿ ಮತ್ತು ಸೇವೆಗಳ ನಿಬಂಧನೆಗಳನ್ನು ಅಪ್‍ಡೇಟ್‍ ಮಾಡಿದೆ. ಇದು ವ್ಯಾಪಾರ ಸಂದೇಶಗಳಿಗೆ ಸಂಬಂಧಿಸಿದ ಬದಲಾವಣೆಗಳನ್ನು ಒಳಗೊಂಡಿರುತ್ತದೆ, ಇದು ಐಚ್ಛಿಕವಾಗಿದೆ ಮತ್ತು ನಾವು ಹೇಗೆ ದತ್ತಾಂಶ ಸಂಗ್ರಹಿಸುತ್ತೇವೆ ಮತ್ತು ಬಳಸುತ್ತೇವೆ ಎನ್ನುವುದರ ಕುರಿತು ಮತ್ತಷ್ಟು ಪಾರದರ್ಶಕತೆ ನೀಡುತ್ತದೆ. ಹೀಗಾಗಿ ನಿಮ್ಮ ಖಾಸಗಿತನವನ್ನು ಗೌರವಿಸುತ್ತದೆ ನಿಮ್ಮ ಮಾಹಿತಿ ರಕ್ಷಿಸುತ್ತೇವೆ ಎಂದು ವಾಟ್ಸಾಪ್ ಸಂಸ್ಥೆ ಪ್ರಕಟಣೆ ಹೊರಡಿಸಿದೆ.

ಬಳಕೆದಾರರು ಅವರ ಚಾಟ್‍ಗಳನ್ನು ಸುರಕ್ಷಿತ ಫೇಸ್‍ಬುಕ್ ಮೂಲಸೌಕರ್ಯದಿಂದ ನಿರ್ವಹಿಸುವ ಆಯ್ಕೆ ನೀಡುತ್ತಿದೆ. ಪೂರ್ಣ ಪಾರದರ್ಶಕತೆಗೆ ಬಳಕೆದಾರರಿಗೆ ಚಾಟ್‍ನ ಬಲಬದಿಯ ಮೇಲ್ಭಾಗದಲ್ಲಿಉದ್ಯಮವು ಫೇಸ್‍ಬುಕ್ ಬೆಂಬಲ ಪಡೆದಾಗ ತಿಳಿಸುತ್ತದೆ. ಇದು ಬಳಕೆದಾರರಿಗೆ ವಾಟ್ಸಾಪ್‍ನಲ್ಲಿ ಬಿಸಿನೆಸ್ ಕಳುಹಿಸಬೇಕೆ ಅಥವಾ ಅವರು ತಮ್ಮ ಮಿತ್ರರೊಂದಿಗೆ ಮಾತ್ರ ಸಂವಹನ ನಡೆಸಬೇಕೆ ಎಂಬ ತೀರ್ಮಾನ ಅವರಿಗೆ ಸೇರಿದ್ದಾಗಿರುತ್ತದೆ.

ಈ ಅಪ್‍ಡೇಟ್ ನಿಮ್ಮ ಮಿತ್ರರು ಅಥವಾ ಕುಟುಂಬದ ಸಂದೇಶಗಳ ಖಾಸಗಿತನಕ್ಕೆ ಯಾವುದೇ ರೀತಿಯಲ್ಲಿ ಬಾಧಕವಲ್ಲ. ಮಿತ್ರರು ಹಾಗೂ ಕುಟುಂಬದವರೊಂದಿಗೆ ಖಾಸಗಿ ಚಾಟ್‍ಗಳು ಅವು ಒನ್-ಟು-ಒನ್‍ ಅಥವಾ ಗ್ರೂಪ್‍ಚಾಟ್‍ ಆಗಿರಲಿ ಸಂಪೂರ್ಣವಾಗಿ ಎಂಡ್-ಟು-ಎಂಡ್‍ ಎನ್‍ಕ್ರಿಪ್ಷನ್‍ನಿಂದ ಸಂರಕ್ಷಿಸಲ್ಪಡುತ್ತವೆ.

WhatsApp Respects and Protects Your Privacy

ಮೆಸೇಜ್, ಕಾಲ್ ಲಾಗ್, ಎಲ್ಲವೂ ಸುರಕ್ಷಿತ
ವಾಟ್ಸಾಪ್ ಅಥವಾ ಫೇಸ್‍ಬುಕ್ ಸಂದೇಶಗಳನ್ನು ಓದಲಾಗದು ಅಥವಾ ಮಿತ್ರರು, ಕುಟುಂಬದವರು ಮತ್ತು ಸಹೋದ್ಯೋಗಿಗಳ ಕರೆಗಳನ್ನು ಆಲಿಸಲಾಗದು. ತನ್ನ ಸ್ವಭಾವಕ್ಕೆಅನುಗುಣವಾಗಿ ವಾಟ್ಸಾಪ್ ಕಾಲ್ ಅಥವಾ ಮೆಸೇಜ್ ಲಾಗ್ ಇರಿಸಿಕೊಳ್ಳುವುದಿಲ್ಲ, ಲೊಕೇಷನ್‍ ಡೇಟಾ ಕಾಣಲು ಸಾಧ್ಯವಿಲ್ಲ ಮತ್ತು ಬಳಕೆದಾರರ ಸಂಪರ್ಕಗಳನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ, ಫೇಸ್ ಬುಕ್‍ಕೂಡಾ- ಮತ್ತುಇದುಒನ್-ಟು-ಒನ್ ಮತ್ತುಗ್ರೂಪ್ ಚಾಟ್‍ಗಳಿಗೂ ಅನ್ವಯಿಸುತ್ತದೆ.

ಭಾರತದಾದ್ಯಂತ ಲಕ್ಷಾಂತರ ಮಂದಿ ವ್ಯಾಪಾರಗಳೊಂದಿಗೆ ವಾಟ್ಸಾಪ್ ನಲ್ಲಿ ಸಂವಹನ ನಡೆಸುತ್ತಿದ್ದಾರೆ.ಈ ಅಪ್‍ಡೇಟ್ ಸಾಮಾನ್ಯ ಪಾರದರ್ಶಕತೆಗೆ ನೆರವಾಗುತ್ತದೆ ಮತ್ತು ಈ ಸಂವಹನಗಳಲ್ಲಿನ ಬದಲಾವಣೆಗಳನ್ನು ಒಳಗೊಳ್ಳುತ್ತದೆ ಎಂದು ಸಂಸ್ಥೆ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+