Gold: ಚಿನ್ನ ಖರೀದಿಗೆ ಇದು ಬೆಸ್ಟ್ ಟೈಮ್: ಬಂಗಾರದ ಬೆಲೆ ಇಳಿಕೆಗೆ 3 ಪ್ರಮುಖ ಕಾರಣಗಳು ?!
ಚಿನ್ನದ ಬೆಲೆಯು ಅಲ್ಪ ಕುಸಿತ ಕಂಡಿದೆ. ಕಳೆದ ಒಂದು ವಾರದಿಂದಲೂ ಚಿನ್ನದ ಇಳಿಕೆಯಾಗುತ್ತಿದೆ. ಬಂಗಾರದ ಬೆಲೆಯು ಏರಿಳಿತವಾಗುತ್ತಿದೆ. ವಿಶ್ವದಲ್ಲಿ ಷೇರುಮಾರುಕಟ್ಟೆ ಹಾಗೂ ಬೆಲೆ ಏರಿಕೆಯ ನಡುವೆಯೂ ಚಿನ್ನದ ಬೆಲೆಯು ಇದೇ ಮೊದಲ ಬಾರಿಗೆ ಎನ್ನುವಂತೆ ಕಡಿಮೆಯಾಗಿದೆ. ಚಿನ್ನದ ಬೆಲೆ ಇಳಿಕೆ ಕಾರಣಗಳೇನು ಹಾಗೂ ಚಿನ್ನ ಖರೀದಿಗೆ ಇದು ಬೆಸ್ಟ್ ಸಮಯವೇ ಎನ್ನುವ ಪ್ರಮುಖ ವಿವರಗಳು ಇಲ್ಲಿವೆ.
ವಿಶ್ವದಲ್ಲಿ ಆರ್ಥಿಕ ಅಸ್ಥಿರತೆ ಎದುರಾದಾಗೆಲ್ಲವೂ ಚಿನ್ನದ ಬೆಲೆ ಏರಿಕೆಯಾಗುತ್ತದೆ. ಆದರೆ ಇದೇ ಮೊದಲ ಬಾರಿಗೆ ಎನ್ನುವಂತೆ ಆರ್ಥಿಕ ಅಸ್ಥಿರತೆ ನಡುವೆಯೂ ಚಿನ್ನದ ಬೆಲೆ ಇಳಿಕೆಯಾಗಿದೆ. ಹೀಗಾಗಿ ಚಿನ್ನ ಖರೀದಿದಾರರಿಗೆ ಇದು ಬಂಪರ್ ಗುಡ್‌ನ್ಯೂಸ್ ಅಂತಲೇ ಹೇಳಲಾಗುತ್ತಿದ್ದು ಹಲವು ಆರ್ಥಿಕ ತಜ್ಞರು ಯಾವಾಗ ಚಿನ್ನ ಖರೀದಿ ಮಾಡಬೇಕು ಎನ್ನುವ ಬಗ್ಗೆ ಅಪ್ಡೇಟ್ ಕೊಟ್ಟಿದ್ದಾರೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ರಿಟರ್ನ್ ಟ್ಯಾಕ್ಸ್ ಪಾಲಿಸಿ ಜಾರಿ ಮಾಡಿದ ಮೇಲೆ ವಿಶ್ವದ ಆರ್ಥಿಕತೆಗೆ ಭಾರೀ ದೊಡ್ಡ ಮಟ್ಟದ ಪೆಟ್ಟು ಬಿದ್ದಿದೆ. ಆದರೆ ಇನ್ನು 90 ದಿನಗಳ ಅವಧಿಗೆ ಟ್ರಂಪ್ ಅವರು ಸಣ್ಣ ಬ್ರೇಕ್ ಕೊಟ್ಟಿದ್ದಾರೆ. ಹೊಸ ಟ್ಯಾಕ್ಸ್ ವಿಧಿಸುವುದಕ್ಕೆ ರಿಯಾಯಿತಿ ನೀಡುವುದಾಗಿ ಅವರು ಹೇಳಿದ್ದಾರೆ. ಹೀಗಾಗಿ ಬೆಲೆ ಏರಿಕೆಗೆ ತುಸು ಬ್ರೇಕ್ ಬಿದ್ದಂತೆ ಆಗಿದೆ. ಹೀಗಾಗಿ, ಚಿನ್ನದ ಬೆಲೆಯು ಇಳಿಕೆಯಾಗುತ್ತಿದೆ. ಆದರೆ ಗುರುವಾರ (ಏಪ್ರಿಲ್ 10) ಚಿನ್ನದ ಬೆಲೆ ತುಸು ಹೆಚ್ಚಳವಾಗಿದೆ.
ಗೋಲ್ಡ್ ಖರೀದಿಗೆ ಯಾವುದು ಬೆಸ್ಟ್ ಟೈಮ್ ?
ಚಿನ್ನದ ಬೆಲೆಯಲ್ಲಿ ಈಗ ಏರಿಳಿತವಾಗುತ್ತಿದೆ. ಆದರೆ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಇಳಿಕೆಯಾಗುವ ಸಾಧ್ಯತೆ ಇದೆ ಎಂದೇ ಹೇಳಲಾಗುತ್ತಿದೆ. ಆದರೆ ಚಿನ್ನಕ್ಕೆ ಯಾವಾಗಲೂ ಡಿಮ್ಯಾಂಡ್ ಇರುವುದರಿಂದ ಈಗ ಚಿನ್ನ ಖರೀದಿ ಮಾಡಿದರೂ ಅಥವಾ ಮೂರು ತಿಂಗಳು ಬಿಟ್ಟು ಚಿನ್ನ ಖರೀದಿ ಮಾಡಿದರೂ ಲಾಭ ಇದ್ದೇ ಇದೆ. ಆದರೆ ಚಿನ್ನ ಬೆಲೆ ಮುಂದಿನ ದಿನಗಳಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಆ ಚಿನ್ನ ಖರೀದಿ ಮಾಡಿದರೆ ಉತ್ತಮ ಎಂದೇ ಹೇಳಲಾಗುತ್ತಿದೆ.
ಚಿನ್ನದ ಬೆಲೆಯು 24 ಕ್ಯಾರೆಟ್ 10 ಗ್ರಾಂಗೆ ಮೂರು ವರ್ಷಗಳ ಹಿಂದಷ್ಟೇ 55,000 ಸಾವಿರ ಇತ್ತು. ಇದೀಗ 93,380 ರೂಪಾಯಿ ಆಗಿದೆ. (ಏಪ್ರಿಲ್ 10ಕ್ಕೆ) ಹೀಗಾಗಿ ಚಿನ್ನ ಯಾವಾಗಲೂ ಲಾಭದಾಯಕ ಹೂಡಿಕೆ ಎಂದೇ ಪರಿಗಣಿಸಲಾಗುತ್ತದೆ. ಆದರೆ ಬೆಲೆ ಇಳಿಕೆಯಾಗಿದ್ದಾಗ ಖರೀದಿ ಮಾಡಿದರೆ ಕೊಳ್ಳುವವರಿಗೆ ಲಾಭ.
ಚಿನ್ನದ ಬೆಲೆ ಕಡಿಮೆ ಆಗುವುದನ್ನು ನೋಡಿಕೊಂಡು ಚಿನ್ನ ಖರೀದಿ ಮಾಡುವುದೇ ಉತ್ತಮ. ಆದರೆ ಚಿನ್ನದ ಮೇಲೆ ಹೂಡಿಕೆ ಯಾವಾಗಲೂ ಲಾಭ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ.












Click it and Unblock the Notifications