ಫೋಕ್ಸ್​ವ್ಯಾಗನ್ ವಿರುದ್ಧ ಭಾರತದಲ್ಲೂ ತನಿಖೆ ಆರಂಭ

ಬೆಂಗಳೂರು, ಸೆ.25: ಜರ್ಮನಿಯ ಪ್ರತಿಷ್ಠಿತ ಆಟೋಮೊಬೈಲ್ ಕಂಪನಿ ಫೋಕ್ಸ್ ವ್ಯಾಗನ್ ವಿರುದ್ಧ ಜರ್ಮನಿಯಲ್ಲಿ ತನಿಖೆ ಆರಂಭಗೊಂಡ ಬೆನ್ನಲ್ಲೇ ಭಾರತ ಸೇರಿದಂತೆ ಇತರೆ ದೇಶಗಳಲ್ಲೂ ತನಿಖೆ ನಡೆಯುವ ಸೂಚನೆ ಸಿಕ್ಕಿದೆ.

ಐದು ಜನ ತಜ್ಞರ ಸಮಿತಿಯಿಂದ ಫೋಕ್ಸ್ ವ್ಯಾಗನ್ ಸಂಸ್ಥೆಯ ಮಾಲಿನ್ಯ ತಪಾಸಣೆ ವಂಚನೆ ಪ್ರಕರಣದ ತನಿಖೆ ನಡೆಯಲಿದೆ ಎಂದು ಜರ್ಮನಿಯ ಸಾರಿಗೆ ಸಚಿವ ಅಲೆಕ್ಸಾಂಡರ್ ದೋಬ್ರಿಂಡ್ ಅವರು ಘೋಷಿಸಿದ್ದಾರೆ. ಸುಮಾರು 78 ವರ್ಷಗಳ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 11 ಮಿಲಿಯನ್ ಗೂ ಅಧಿಕ ವಾಹನಗಳಲ್ಲಿರುವ ತಂತ್ರಾಂಶದ ಲೋಪ ದೋಷ ಈಗ ಜರ್ಮನಿ ಹಾಗೂ ಫೋಕ್ಸ್ ವ್ಯಾಗನ್ ಸಂಸ್ಥೆಯ ಘನತೆ, ಗೌರವವನ್ನು ಮಣ್ಣುಪಾಲು ಮಾಡುತ್ತಿದೆ.

ವೆಸ್ಟ್ ವರ್ಜೀನಿಯಾ ವಿಶ್ವವಿದ್ಯಾಲಯದ ಐವರು (ಭಾರತೀಯ ಮೂಲದ ಒಬ್ಬ ಇಂಜಿನಿಯರ್ ಅರವಿಂದ ಸೇರಿದಂತೆ) ಇಂಜಿನಿಯರ್​ಗಳ ತಂಡ ಫೋಕ್ಸ್​ವ್ಯಾಗನ್ ಎಮಿಷನ್ ವಂಚನೆಯನ್ನು ಇತ್ತೀಚೆಗೆ ಬಯಲಿಗೆಳೆದಿದ್ದರು. ಫೋಕ್ಸ್​ವ್ಯಾಗನ್​ನ ಒಂದೇ ಮಾದರಿಯ ಎರಡು ಕಾರು(ಡೀಸೆಲ್ ಇಂಜಿನ್ ವುಳ್ಳ)ಗಳಲ್ಲಿ ಹೊರ ಸೂಸುವ ಹೊಗೆಯ ಪ್ರಮಾಣದಲ್ಲಿ ಭಾರಿ ವ್ಯತ್ಯಾಸ ಕಂಡು ಬಂದಿತ್ತು. ಮಾಲಿನ್ಯ ಪರೀಕ್ಷೆಯಲ್ಲಿ ಸಂಸ್ಥೆಯ ಕಾರು ಫೇಲ್ ಆಗಿತ್ತು.['ಮಹಾ' ಮಾಲಿನ್ಯ ಮೋಸ; ಆಗಿದ್ದೇನು?]

Volkswagen is in deep trouble in many countries including India

ಭಾರತದಿಂದ ತನಿಖೆ: ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ನಿಂದ ಈ ಪ್ರಕರಣದ ತನಿಖೆ ನಡೆಸಲಾಗುವುದು ಎಂದು ಭಾರತ ಸರ್ಕಾರ ಘೋಷಿಸಿದೆ ಎಂದು ಭಾರಿ ಕೈಗಾರಿಕಾ ಇಲಾಖೆ ಕಾರ್ಯದರ್ಶಿ ರಾಜನ್ ಕಟೋಚ್ ಹೇಳಿದ್ದಾರೆ. ಅದರೆ, ಈ ಬಗ್ಗೆ ಯಾವುದೇ ನೋಟಿಸ್ ಬಂದಿಲ್ಲ ಎಂದು ಫೋಕ್ಸ್ ವ್ಯಾಗನ್ ಇಂಡಿಯಾ ಪ್ರತಿಕ್ರಿಯಿಸಿದೆ.

ಆರ್ಥಿಕ ಸಂಕಷ್ಟದಲ್ಲಿರುವ ಸಂಸ್ಥೆ: ಯುಎಸ್ ನಲ್ಲಿ ಸುಮಾರು 18 ಬಿಲಿಯನ್ ಡಾಲರ್ ನಷ್ಟು ದಂಡ ಹೊತ್ತುಕೊಂಡಿರುವ ಫೋಕ್ಸ್ ವ್ಯಾಗನ್ ಗೆ ಇದ್ದ 'ಮೇಡ್ ಇನ್ ಜರ್ಮನಿ' ಟ್ಯಾಗ್ ಗೆ ತಾನೇ ಕಪ್ಪು ಮಸಿ ಬಳೆದುಕೊಂಡಿದೆ. ಈಗ ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ ಅನೇಕ ದೇಶಗಳು ಕೂಡಾ ಈ ಪ್ರಕರಣದ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿವೆ. (ಪಿಟಿಐ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+