ಜಿಯೋ 49ರ ಯೋಜನೆಗೆ ಸೆಡ್ಡು ವೋಡಾಫೋನ್ ನಿಂದ 47ರ ಪ್ಲಾನ್

ಬೆಂಗಳೂರು, ಜುಲೈ 26: ರಿಲಯನ್ಸ್ ಜಿಯೋದ 49 ರೂಪಾಯಿ ಪ್ಲಾನ್ ಗೆ ಸೆಡ್ಡು ಹೊಡೆಯಲು ವೋಡಾಫೋನ್ ಸಜ್ಜಾಗಿದ್ದು, ಹೊಸದಾಗಿ 47 ರೂಪಾಯಿ ಪ್ಲಾನ್ ಹೊರ ತಂದಿದೆ.

ಜಿಯೋ 47ರ ಯೋಜನೆಯಲ್ಲಿ 1 ಜಿಬಿ 4 ಜಿ ಡೇಟಾ ಸಿಗುತ್ತಿದೆ. 28 ದಿನಗಳ ವ್ಯಾಲಿಡಿಟಿ ಹೊಂದಿದ್ದು, 50 ಎಸ್ ಎಂ ಎಸ್ ಸಿಗಲಿದೆ.

ವೋಡಾಫೋನ್ 47 ರೂಪಾಯಿಯ ಹೊಸ ಪ್ರೀಪೇಯ್ಡ್ ಪ್ಲಾನ್ ಪರಿಚಯಿಸಿದೆ. ಗ್ರಾಹಕರಿಗೆ ಈ ಪ್ಲಾನ್ ನಲ್ಲಿ 7500 ಸೆಕೆಂಡ್ ಸ್ಥಳಿಯ ಹಾಗೂ ಎಸ್ಟಿಡಿ ವಾಯ್ಸ್ ಕರೆ, 50 ಸ್ಥಳೀಯ ಹಾಗೂ ನ್ಯಾಷನಲ್ ಎಸ್ ಎಂ ಎಸ್ ಹಾಗೂ 500 ಎಂಬಿ 3ಜಿ/4ಜಿ ಡೇಟಾ ಸಿಗಲಿದೆ.

Vodafone’s new Rs 47 prepaid plan offers 125 minutes of voice calls

ವೋಡಾಫೋನ್ 47 ರೂಪಾಯಿ ಪ್ಲಾನ್ 28 ದಿನಗಳವರೆಗೆ ವ್ಯಾಲಿಡಿಟಿ ಹೊಂದಿದೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶದಲ್ಲಿ 48 ರೂಪಾಯಿಗೆ ಈ ಯೋಜನೆ ಲಭ್ಯವಿದೆ. ಬಿಹಾರ್ ಹಾಗೂ ಜಾರ್ಖಂಡ್ ನಲ್ಲಿ 47 ರೂಪಾಯಿಗೆ 1ಜಿಬಿ 3ಜಿ/4ಜಿ ಡೇಟಾ ನೀಡ್ತಿದೆ.

ಈ ಪ್ಲಾನ್ ವಿಶೇಷವೆಂದರೆ ವ್ಯಾಲಿಡಿಟಿ 28 ದಿನಗಳವರೆಗೆ ಇರಲಿದೆ. ಸಾಮಾನ್ಯವಾಗಿ 50 ರೂಪಾಯಿ ಒಳಗಿನ ಕಡಿಮೆ ವೆಚ್ಚದ ಯೋಜನೆಗಳಿಗೆ 28 ದಿನಗಳವರೆಗೆ ವ್ಯಾಲಿಡಿಟಿ ಇರುವುದಿಲ್ಲ. ಆದರೆ, ಜಿಯೋ ಯೋಜನೆಗಳಿಗೆ ಪೈಪೋಟಿ ನೀಡಲು ಈ ಯೋಜನೆಯ ವ್ಯಾಲಿಡಿಟಿ ವಿಸ್ತರಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+